ETV Bharat / sports

ಬಯೋ ಬಬಲ್​​ನಲ್ಲಿ  ಜೀವನ ಸುಲಭವಲ್ಲ ಎಂದು ಒಪ್ಪಿಕೊಂಡ ಜಯದೇವ್​ ಉನಾದ್ಕಟ್​ - ಬಯೋ ಸೆಕ್ಯೂರ್​ ಬಬಲ್​

53 ದಿನಗಳ ಟೂರ್ನಮೆಂಟ್​ ಸೆಪ್ಟೆಂಬರ್​ 19ರಂದು ಆರಂಭವಾಗಲಿದೆ. ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ರಾಜಸ್ಥಾನ್​ ರಾಯಲ್ಸ್​ ಸೆಪ್ಟೆಂಬರ್ 22ರಂದು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಜಯದೇವ್​ ಉನಾದ್ಕಟ್​
ಜಯದೇವ್​ ಉನಾದ್ಕಟ್​
author img

By

Published : Sep 16, 2020, 9:00 PM IST

ದುಬೈ: ಜೈವಿಕ ಸುರಕ್ಷಿತ ವಲಯ(ಬಯೋ ಸೆಕ್ಯೂರ್​)ದೊಳಗಿನ ಜೀವನ ಸುಲಭವಲ್ಲ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್​ನ ಮುಂಬರುವ ಆವೃತ್ತಿಯು ವಿಭಿನ್ನವಾಗಿರುತ್ತದೆ ಎಂದು ರಾಜಸ್ಥಾನ್ ರಾಯಲ್ಸ್ ನ ಜಯದೇವ್ ಉನಾದ್ಕತ್ ಒಪ್ಪಿಕೊಂಡಿದ್ದಾರೆ.

ರಾಜಸ್ಥಾನ್​ ರಾಯಲ್ಸ್​ ಆಗಸ್ಟ್​ 21ರಂದು ಯುಎಇಗೆ ತಲುಪಿತ್ತು. ನಂತರ ಅಲ್ಲಿ 6 ದಿನಗಳ ಕ್ವಾರಂಟೈನ್​ ಮುಗಿಸಿ 3 ಕೋವಿಡ್​ 19 ಪರೀಕ್ಷೆಗಳನ್ನು ಎದುರಿಸಿ, ಅದರಲ್ಲಿ ನೆಗೆಟಿವ್​ ವರದಿ ಬಂದ ನಂತರ ಐಪಿಎಲ್​ ತರಬೇತಿ ಆರಂಭಿಸಿತ್ತು.

ಐಪಿಎಲ್​ ಈ ಬಾರಿ ಹಿಂದಿನ ಆವೃತ್ತಿಗಳಿಗಿಂತ ವಿಭಿನ್ನವಾಗಿರುತ್ತದೆ. ಸ್ಟೇಡಿಯಂನಲ್ಲಿ ಅಭಿಮಾನಿಗಳಿರುವುದಿಲ್ಲ. ನಾವೂ ಟೂರ್ನಿ ಮುಗಿಯುವವರೆಗೂ ಬಯೋ ಸೆಕ್ಯೂರ್​ ವಲಯಗಳಲ್ಲೇ ಉಳಿಯಬೇಕಿರುತ್ತದೆ. ಆದರೆ ಐಪಿಎಲ್​ ಈ ಸಮಯದಲ್ಲೂ ಕ್ರಿಕೆಟ್ ಆಡಲು ನಮಗೆ ಸಿಕ್ಕಿರುವ ಒಂದು ವರದಾನವಾಗಿದೆ ಮತ್ತು ನಾನು ನಿಜವಾಗಿಯೂ ಪಂದ್ಯಾವಳಿಯನ್ನು ಎದುರು ನೋಡುತ್ತಿದ್ದೇನೆ ಎಂದು ಉನಾದ್ಕಟ್​ ತಿಳಿಸಿದ್ದಾರೆ.

ರಾಜಸ್ಥಾನ್​ ರಾಯಲ್ಸ್​
ರಾಜಸ್ಥಾನ್​ ರಾಯಲ್ಸ್​

ಬಯೋ ಬಬಲ್​ ಬಗ್ಗೆ ಮಾತನಾಡುತ್ತಾ, ಪ್ರಮಾಣಿಕವಾಗಿ ಹೇಳುತ್ತೇನೆ ಇಲ್ಲಿ ಜೀವನ ಅಷ್ಟು ಸುಲಭದಲ್ಲ. ಆದರೆ ನಾವು ಪ್ರೀತಿಸುವ ಕ್ರಿಕೆಟ್​ ಆಡುವ ಅವಕಾಶವನ್ನು ಪಡೆದಿದ್ದೇವೆ. ಹಾಗಾಗಿ ಇದರ ಬಗ್ಗೆ ಯಾವುದೇ ದೂರುಗಳಿಲ್ಲ. ನಾವು ಅನುಸರಿಸಲು ಸಾಕಷ್ಟು ಪ್ರೋಟೋಕಾಲ್​ಗನ್ನು ಹೊಂದಿದ್ದೇವೆ. ನಾವು ಅದನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಸೌರಾಷ್ಟ್ರ ತಂಡವನ್ನು ಮುನ್ನಡೆಸಿ ರಣಜಿ ಟ್ರೋಫಿ ತಂದುಕೊಟ್ಟಿದ್ದ ಉನಾದ್ಕಟ್​ ಫೈನಲ್ ಸೇರಿದಂತೆ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಅವರು 2019ರ ಆವೃತ್ತಿಯ ರಣಜಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್​ ಕೂಡ ಆಗಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ತಮ್ಮ ಎಂದಿನ ಪ್ರದರ್ಶನವನ್ನು ಕಾಯ್ದುಕೊಂಡು ತಂಡಕ್ಕೆ ನೆರವಾಗುವ ವಿಶ್ವಾಸದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.