ದುಬೈ: ಐಪಿಎಲ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಸೋತಿರುವ ತಂಡಗಳಾದ ಸಿಎಸ್ಕೆ ಹಾಗೂ ಪಂಜಾಬ್ ಇಂದು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ರಾಹುಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಐಪಿಎಲ್ನ 18 ನೇ ಪಂದ್ಯ ಇದಾಗಿದ್ದು, ಟೂರ್ನಿಯಲ್ಲಿ ಎರಡೂ ತಂಡಗಳು ಕೇವಲ ಒಂದು ಪಂದ್ಯ ಗೆದ್ದು, 3 ಪಂದ್ಯಗಳಲ್ಲಿ ಸೋಲು ಕಂಡಿವೆ. ಚೆನ್ನೈ ಸೂಪರ್ ಕಿಂಗ್ಸ್ ಉದ್ಘಾಟನಾ ಪಂದ್ಯದಲ್ಲಿ ಗೆದ್ದಿದ್ದು ಬಿಟ್ಟರೆ ನಂತರದ ಮೂರು ಪಂದ್ಯಗಳಲ್ಲೂ ಸೋಲಭವಿಸಿದೆ.
-
Match 18. Kings XI Punjab win the toss and elect to bat https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020 " class="align-text-top noRightClick twitterSection" data="
">Match 18. Kings XI Punjab win the toss and elect to bat https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020Match 18. Kings XI Punjab win the toss and elect to bat https://t.co/FdcfFeGBmz #KXIPvCSK #Dream11IPL #IPL2020
— IndianPremierLeague (@IPL) October 4, 2020
ಇಂದಿನ ಪಂದ್ಯದಲ್ಲಿ ಸಿಎಸ್ಕೆ ಕಳೆದ ತಂಡವನ್ನೇ ಮುಂದುವರಿಸುತ್ತಿದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮೂರು ಬದಲಾವಣೆ ಮಾಡಿಕೊಂಡಿದೆ. ಗೌತಮ್, ಕರುಣ್ ಹಾಗೂ ನಿಶಾಮ್ ಬದಲಿಗೆ ಹರಿಪ್ರೀತ್ ಬ್ರಾರ್, ಮಂದೀಪ್ ಸಿಂಗ್ ಹಾಗೂ ಕ್ರಿಸ್ ಜೋರ್ಡಾನ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನಡುವೆಯೂ ಕಳೆದ 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಇಂದಿನ ಪಂದ್ಯದಲ್ಲಾದರೂ ಗೆಲುವಿನ ಹಳಿಗೆ ಮರಳುವ ಆಲೋಚನೆಯಲ್ಲಿರುವ ತಂಡ ಕೆಲವು ಬದಲಾವಣೆ ಮಾಡಿಕೊಂಡಿದೆ.