ETV Bharat / sports

ಮುಂಬೈ ಇಂಡಿಯನ್ಸ್​ ಸೇರಿಕೊಂಡ ಸ್ಫೋಟಕ ಬ್ಯಾಟ್ಸ್​ಮನ್​ ಕ್ರಿಸ್​ ಲಿನ್​ - ಟ್ರೆಂಟ್ ಬೌಲ್ಟ್​

ಪ್ಯಾಟಿನ್​ಸನ್​ ಕಳೆದ ವಾರ ಐಪಿಎಲ್​ನಿಂದ ಹಿಂದೆ ಸರಿದಿದ್ದ ಶ್ರೀಲಂಕಾದ ಲಸಿತ್ ಮಾಲಿಂಗ ಅವರ ಬದಲಿಗೆ ಮುಂಬೈ ತಂಡಕ್ಕೆ ಸೇರಿಕೊಂಡಿದ್ದಾರೆ. ಕ್ರಿಸ್​ ಲಿನ್​ ಸಿಪಿಎಲ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಅವರು ಒಟ್ಟು 9 ಪಂದ್ಯಗಳಿಂದ ಕೇವಲ 138 ರನ್​ಗಳಿಸಿದ್ದರು..

ಕ್ರಿಸ್​ ಲಿನ್​
ಕ್ರಿಸ್​ ಲಿನ್​
author img

By

Published : Sep 8, 2020, 9:24 PM IST

ಅಬುಧಾಬಿ : ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್​ಮನ್​ ಕ್ರಿಸ್​ ಲಿನ್​ ಮಂಗಳವಾರ ದುಬೈಗೆ ಆಗಮಿಸಿದ್ದಾರೆ. ಮುಂಬೈ ಇಂಡಿಯನ್ಸ್​ ಬಳಗ ಸೇರಿಕೊಂಡಿದ್ದಾರೆ ಎಂದು ಪ್ರಾಂಚೈಸಿ ತಿಳಿಸಿದೆ.

ನಾಲ್ಕು ಬಾರಿಯ ಐಪಿಎಲ್​ ಚಾಂಪಿಯನ್, ಕ್ರಿಸ್​ ಲಿನ್​ ಜೊತೆ ಅವರ ಸಹ ಆಟಗಾರ ಜೇಮ್ಸ್​ ಪ್ಯಾಟಿನ್​ಸನ್​ ಹಾಗೂ ನ್ಯೂಜಿಲೆಂಡ್​ನ ಟ್ರೆಂಟ್​ ಬೌಲ್ಟ್​ ಕಳೆದ ವಾರ ತಂಡ ಸೇರಿದ್ದಾರೆ ಎಂದು ಮಾಹಿತಿ ನೀಡಿದೆ.

ಜೇಮ್ಸ್​ ಪ್ಯಾಟಿನ್​ ಸನ್​
ಜೇಮ್ಸ್​ ಪ್ಯಾಟಿನ್‌ಸನ್​

ಪ್ಯಾಟಿನ್​ಸನ್​ ಕಳೆದ ವಾರ ಐಪಿಎಲ್​ನಿಂದ ಹಿಂದೆ ಸರಿದಿದ್ದ ಶ್ರೀಲಂಕಾದ ಲಸಿತ್ ಮಾಲಿಂಗ ಅವರ ಬದಲಿಗೆ ಮುಂಬೈ ತಂಡಕ್ಕೆ ಸೇರಿಕೊಂಡಿದ್ದಾರೆ. ಕ್ರಿಸ್​ ಲಿನ್​ ಸಿಪಿಎಲ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಅವರು ಒಟ್ಟು 9 ಪಂದ್ಯಗಳಿಂದ ಕೇವಲ 138 ರನ್​ಗಳಿಸಿದ್ದರು. ಲಿನ್​ ಬಾರ್ಬಡೋಸ್​ ವಿರುದ್ಧದ ಎರಡು ಪಂದ್ಯಗಳಲ್ಲಿ 19 ಹಾಗೂ 16, ಸೇಂಟ್ ಲೂಸಿಯಾ ಜೌಕ್ಸ್​ ವಿರುದ್ಧ 2 ಪಂದ್ಯದಲ್ಲಿ 14 ಮತ್ತು 0, ಜಮೈಕಾ ವಿರುದ್ಧ 8 ಮತ್ತು 23, ಟಿಕೆಆರ್​ ವಿರುದ್ಧ 34 ಮತ್ತು 8, ಹಾಗೂ ಗಯಾನ ವಿರುದ್ಧ 16 ರನ್​ಗಳಿಸಿ ಔಟಾಗಿದ್ದಾರೆ.

ಕಳೆದ ಬಾರಿ ಕೆಕೆಆರ್​ ಪರ ಆಡಿದ್ದ ಲಿನ್​ ಡಿಸೆಂಬರ್​ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್​ ಮೂಲಬೆಲೆ 2 ಕೋಟಿ ರೂ. ನೀಡಿ ಖರೀದಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.