ಮುಂಬೈ: 2020ರ ಐಪಿಎಲ್ ಹರಾಜು ಪ್ರಕ್ರಿಯೆಗೆ ಕೆಲವೇ ದಿನಗಳು ಬಾಕಿ ಇದ್ದು, ಬಹುದೊಡ್ಡ ಚುಟುಕು ಕ್ರಿಕೆಟ್ ಟೂರ್ನಿಯಲ್ಲಿ ಬಿಕರಿಗಾಗಿ 971 ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಇದೇ ತಿಂಗಳ 19ರಿಂದ ಕೋಲ್ಕತ್ತಾದಲ್ಲಿ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಗೆ ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ನವೆಂಬರ್ 30ರವರೆಗೆ ಅಕಾಶ ನೀಡಲಾಗಿತ್ತು. ಅದರಂತೆ 971 ಆಟಗಾರರು ಹೆಸರು ನೋಂದಾಯಿಸಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
-
🚨🚨 971 players register for VIVO IPL 2020 Player Auction 🚨🚨
— IndianPremierLeague (@IPL) December 2, 2019 " class="align-text-top noRightClick twitterSection" data="
Deadline for franchises to submit their shortlist of players: 9th December - 5PM IST 🕔
📰Full Details here https://t.co/T8pFojBd9w 📰 pic.twitter.com/gIP6GjHDar
">🚨🚨 971 players register for VIVO IPL 2020 Player Auction 🚨🚨
— IndianPremierLeague (@IPL) December 2, 2019
Deadline for franchises to submit their shortlist of players: 9th December - 5PM IST 🕔
📰Full Details here https://t.co/T8pFojBd9w 📰 pic.twitter.com/gIP6GjHDar🚨🚨 971 players register for VIVO IPL 2020 Player Auction 🚨🚨
— IndianPremierLeague (@IPL) December 2, 2019
Deadline for franchises to submit their shortlist of players: 9th December - 5PM IST 🕔
📰Full Details here https://t.co/T8pFojBd9w 📰 pic.twitter.com/gIP6GjHDar
ಐಪಿಎಲ್ನಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ತಂಡಗಳು ಸೇರಿ ಒಟ್ಟು 73 ಆಟಗಾರರು ಬೇಕಾಗಿದ್ದಾರೆ. ಹೆಸರು ನೋಂದಾಯಿಸಿದವರಲ್ಲಿ 215 ಆಟಗಾರರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿದವರು, ಉಳಿದ 754 ಆಟಗಾರರು ದೇಸಿ ಟೂರ್ನಿಯಲ್ಲಿ ಆಡಿದ ಅನುಭವ ಹೊಂದಿದವರಾಗಿದ್ದಾರೆ.
- ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಭಾರತದ ಆಟಗಾರರು-19
- ದೇಸಿ ಟೂರ್ನಿಯಲ್ಲಿ ಮಾತ್ರ ಆಡಿರುವ ಭಾರತದ ಆಟಗಾರರು-634(ಅನ್ಕ್ಯಾಪ್ಡ್ ಪ್ಲೇಯರ್ಸ್, ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಪ್ಲೇಯರ್ಸ್)
- ಅಂತಾರಾಷ್ಟ್ರೀಯ ಕ್ರಿಕೆಟ್ ಆಡದೇ, ಐಪಿಎಲ್ನಲ್ಲಿ ಆಡಿದ ಅನುಭವ ಇರುವವರು-60
- ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ ಅನುಭವ ಇರುವವರು-196
- ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡದ ಆಟಗಾರರು-60
- ಸಹಾಯಕ ರಾಷ್ಟ್ರ ಆಟಗಾರರು-2
258 ವಿದೇಶಿ ಆಟಗಾರರ ಪೈಕಿ ಆಸ್ಟ್ರೇಲಿಯಾದ 55 ಆಟಗಾರರು, ದಕ್ಷಿಣ ಆಪ್ರಿಕಾದ 54 ಆಟಗಾರರು, 39 ಶ್ರೀಲಂಕಾ ಆಟಗಾರರು, 34 ವೆಸ್ಟ್ ಇಂಡೀಸ್ ಆಟಗಾರರು, 24 ನ್ಯೂಜಿಲೆಂಡ್ ಆಟಗಾರರು, 22 ಇಂಗ್ಲೆಂಡ್ ಆಟಗಾರರು, 19 ಅಫ್ಘನ್ ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಡಿ. 9ರ ಸಂಜೆ 5 ಗಂಟೆ ಒಳಗಾಗಿ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ತಾವು ಖರೀದಿಸಲು ಉದ್ದೇಶಿಸಿರುವ ಆಟಗಾರರ ಪಟ್ಟಿಯನ್ನ ನೀಡಲು ಸಮಯಾವಾಕಾಶ ನೀಡಲಾಗಿದೆ.