ಲಾಹೋರ್ : ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ನೀಡಿದ ಸಣ್ಣದೊಂದು ಸಲಹೆ ಹೇಗೆ ವೃತ್ತಿ ಜೀವನದುದ್ದಕ್ಕೂ ಅನುಕೂಲವಾಯಿತು ಎಂಬುದನ್ನು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಬಹಿರಂಗ ಪಡಿಸಿದ್ದಾರೆ.
ಪಾಕಿಸ್ತಾನದ ಪರ 120 ಟೆಸ್ಟ್ ಹಾಗೂ 378 ಏಕದಿನ ಪಂದ್ಯಗಳನ್ನಾಡಿರುವ ಇಂಜಮಾಮ್ ಉಕ್ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಶಾರ್ಟ್ ಬಾಲ್ಗಳಿಗೆ ಬ್ಯಾಟಿಂಗ್ ನಡೆಸಲು ಪರದಾಡುತ್ತಿದ್ದರು. ಆದರೆ, ಒಮ್ಮೆ ಸುನಿಲ್ ಗವಾಸ್ಕರ್ ಅವರ ಸಲಹೆ ಪಡೆದ ನಂತರ ನಿವೃತ್ತಿಯಾಗುವವರೆಗೆ ಆ ಸಮಸ್ಯೆ ಮರು ಕಳುಹಿಸಲಿಲ್ಲ ಎಂದು ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
1991ರಲ್ಲಿ ಪಾಕಿಸ್ತಾನ ತಂಡದ ಪರ ಪದಾರ್ಪಣೆ ಮಾಡಿದ್ದ ಇಂಜಮಾಮ್ 1992ರ ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ಭಾಗವಾಗಿದ್ದರು. ವಿಶ್ವಕಪ್ ನಂತರ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಶಾರ್ಟ್ ಎಸೆತಗಳನ್ನು ಎದುರಿಸಲು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದರಂತೆ.
1992ರಲ್ಲಿ ಇಂಗ್ಲೆಂಡ್ಗೆ ಮೊದಲ ಬಾರಿ ಪ್ರವಾಸ ಕೈಗೊಂಡಿದ್ದೆ. ಆ ಸಂದರ್ಭದಲ್ಲಿ ನಾನು ಶಾರ್ಟ್ಬಾಲ್ಗಳಿಗೆ ಹೇಗೆ ಆಡಬೇಕೆಂದು ತಿಳಿಯದೆ ಪರದಾಡಿದ್ದೆ. ಅದೇ ಸಂದರ್ಭದಲ್ಲಿ ಸುನಿಲ್ ಭಾಯ್ ಚಾರಿಟಿ ಪಂದ್ಯವೊಂದರಲ್ಲಿ ಆಡಲು ಅಲ್ಲಿಗೆ ಬಂದಿದ್ದರು. ಆ ವೇಳೆ ಅವರ ಬಳಿ ನನ್ನ ಸಮಸ್ಯೆಯನ್ನು ಹೇಳಿಕೊಂಡೆ. ನಂತರ ಅವರು ನನಗೆ ಸುಲಭ ಸಲಹೆ ನೀಡಿದರು ಎಂದಿದ್ದಾರೆ.
"ನೀನು ಬ್ಯಾಟಿಂಗ್ ಮಾಡುವ ವೇಳೆ ಶಾರ್ಟ್ ಬಾಲ್ ಆಥವಾ ಬೌನ್ಸರ್ಗಳ ಬಗ್ಗೆ ಆಲೋಚಿಸಬೇಡ. ಆ ಸಂದರ್ಭದಲ್ಲಿ ನೀನು ಚಿಂತಿಸಿದ್ರೆ ಬೌಲರ್ಗಳ ಬಲೆಗೆ ಬೀಳುತ್ತೀಯ. ಬೌಲರ್ ಚೆಂಡನ್ನು ಎಸೆದ ನಂತರ ನಿನಗೆ ಸಹಜವಾಗಿಯೇ ಅರ್ಥವಾಗುತ್ತದೆ. ಹಾಗಾಗಿ, ನೀನು ಅದರ ಬಗ್ಗೆ ಹೆಚ್ಚು ಚಿಂತಿಸಬೇಡ " ಎಂದು ಸನ್ನಿ ಬಾಯ್ ನನಗೆ ಸಲಹೆ ನೀಡಿದ್ದರು ಎಂದು ಇಂಜಿ ಹೇಳಿಕೊಂಡಿದ್ದಾರೆ.
ನಂತರ ನಾನು ನೆಟ್ನಲ್ಲಿ ಅಭ್ಯಾಸ ಮಾಡುವ ವೇಳೆ ಗವಾಸ್ಕರ್ ನೀಡಿದ ಸಲಹೆಯನ್ನು ಪಾಲಿಸಿದೆ. ನನ್ನಲ್ಲಿ ನಾನೆ ಶಾರ್ಟ್ ಬಾಲ್ಗಳ ಬಗ್ಗೆ ಆಲೋಚನೆ ಮಾಡುವುದನ್ನು ಬಿಡಲು ಆರಂಭಿಸಿದೆ. ಆ ನನ್ನ ದೌರ್ಬಲ್ಯ ಅಂದು ನನ್ನಿಂದ ದೂರವಾಗಿ ನನ್ನ ಕೆರಿಯರ್ ಮುಗಿಯುವ ತನಕ ನನ್ನತ್ತ ಸುಳಿಯಲಿಲ್ಲ ಎಂದು ಟೆಸ್ಟ್ ಕ್ರಿಕೆಟ್‌ನಲ್ಲಿ 8,830 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 11,739 ರನ್ಗಳಿಸಿರುವ ಪಾಕ್ ಲೆಜೆಂಡ್ ಹೇಳಿಕೊಂಡಿದ್ದಾರೆ.