ETV Bharat / sports

ಬ್ರಿಸ್ಬೇನ್​ ಟೆಸ್ಟ್​ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಸಂಪೂರ್ಣ ಪ್ರಾಬಲ್ಯ ಸಾಧಿಸಲಿದೆ: ಪಾಂಟಿಂಗ್ - ಭಾರತ vs ಆಸ್ಟ್ರೇಲಿಯಾ ಟೆಸ್ಟ್​

ಆಸ್ಟ್ರೇಲಿಯಾ ತಂಡ ಬ್ರಿಸ್ಬೇನ್​ನಲ್ಲಿ ಆಡಿರುವ 55 ಟೆಸ್ಟ್​ ಪಂದ್ಯಗಳಲ್ಲಿ 33 ಗೆಲುವು, 13 ಡ್ರಾ ಹಾಗೂ 1 ಟೈ ಸಾಧಿಸಿದ್ದರೆ, ಕೇವಲ 8 ಪಂದ್ಯಗಳಲ್ಲಿ ಸೋಲು ಕಂಡಿದೆ. 1988ರಲ್ಲಿ ಆಸ್ಟ್ರೇಲಿಯಾ ಈ ಕ್ರೀಡಾಂಗಣದಲ್ಲಿ ಕೊನೆಯ ಬಾರಿ ಸೋಲು ಕಂಡಿದೆ. ಅಲ್ಲಿಂದ 31 ಪಂದ್ಯಗಳಲ್ಲಿ ಕೇವಲ 7 ಪಂದ್ಯಗಳಲ್ಲಿ ಡ್ರಾ ಸಾಧಿಸಿದರೆ, 24 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ರಿಕಿ ಪಾಂಟಿಂಗ್ರಿಕಿ ಪಾಂಟಿಂಗ್ ಬ್ರಿಸ್ಬೇನ್​ ಟೆಸ್ಟ್​

author img

By

Published : Jan 11, 2021, 9:23 PM IST

ಸಿಡ್ನಿ: ಭಾರತ ತಂಡದಲ್ಲಿರುವ ಗಾಯದ ಸಮಸ್ಯೆಗಳು ಮತ್ತು ಗಬ್ಬಾದಲ್ಲಿ ಆಸ್ಟ್ರೇಲಿಯಾದ ಅಸಾಧಾರಣ ದಾಖಲೆ, ಬ್ರಿಸ್ಬೇನ್‌ನಲ್ಲಿ ನಡೆಯುವ ಸರಣಿ ಗೆಲುವಿಗೆ ನಿರ್ಣಾಯಕವಾಗಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಲಿದೆ ಎಂದು ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಭಾರತ ಬ್ಯಾಟ್ಸ್​ಮನ್​ಗಳು ಸಿಡ್ನಿ ಟೆಸ್ಟ್​ನ ಕೊನೆಯ ದಿನ ಅದ್ಭುತ ಹಿಡಿತ ಸಾಧಿಸಿ ಪಂದ್ಯವನ್ನು ಅವಿಸ್ಮರಣೀಯ ಡ್ರಾನಲ್ಲಿ ಆಂತ್ಯಗೊಳ್ಳುವಂತೆ ಮಾಡಿದರು. ಪ್ರಸ್ತುತ ಎರಡು ತಂಡಗಳು 1-1 ರಲ್ಲಿ ಸರಣಿಯನ್ನು ಸಮಬಲ ಸಾಧಿಸಿದ್ದು, ಡಿಸೆಂಬರ್​ 15 ರಿಂದ ಬ್ರಿಸ್ಬೇನ್​ನ ಗಬ್ಬಾದಲ್ಲಿ ನಡೆಯುವ ಪಂದ್ಯ ಎರಡು ತಂಡಕ್ಕೂ ನಿರ್ಣಾಯಕವೆನಿಸಲಿದೆ.

ಆಸ್ಟ್ರೇಲಿಯಾ ತಂಡ ಬ್ರಿಸ್ಬೇನ್​ನಲ್ಲಿ ಮೇಲುಗೈ ಸಾಧಿಸಲಿದೆ. ಒಂದು ಗಬ್ಬಾದಲ್ಲಿ ಆಸ್ಟ್ರೇಲಿಯಾ ಅತ್ಯುತ್ತಮ ದಾಖಲೆಗಳನ್ನು ಹೊಂದಿದೆ. ವಿಲ್(ಪುಕೋವ್​ಸ್ಕಿ)​ ಫಿಟ್​ ಆದರೆ ಯಾವುದೇ ಬಲಾವಣೆ ಮಾಡುವ ಅಗತ್ಯವಿಲ್ಲ. ಒಂದು ವಿಲ್​ ಫಿಟ್ ಆಗದಿದ್ದರೆ, ಅವರು ಒಂದು ಬದಲಾವಣೆ ಮಾಡಿಕೊಂಡರೆ ಭಾರತದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಲಿದೆ ಎಂದು ಪಾಂಟಿಂಗ್ ಹೇಳಿದ್ದಾರೆ.

ಆಸ್ಟ್ರೇಲಿಯಾಕ್ಕೆ ಮತ್ತೊಂದು ಧನಾತ್ಮಕ ಅಂಶವೆಂದರೆ, ಭಾರತ ತಂಡದಲ್ಲಿ ಹಿಂದಿನ ಗಾಯದ ಸಮಸ್ಯೆ ಜೊತೆಗೆ ಇಂದಿನ ಪಂದ್ಯದಲ್ಲೂ ಒಂದೆರಡು ಆಟಗಾರರು ಗಾಯಕ್ಕೀಡಾಗಿದ್ದಾರೆ. ಹಾಗಾಗಿ ಕೊನೆಯ ಪಂದ್ಯದಲ್ಲಿ ಬೇರೆ ಆಟಗಾರರನ್ನು ಕಣಕ್ಕಿಳಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಹಾರಿ ಮತ್ತು ಜಡೇಜಾ ಅನುಪಸ್ಥಿತಿಯಲ್ಲಿ ಭಾರತದ ಸಂಯೋಜನೆ ಬಗ್ಗೆ ಮಾತನಾಡಿರುವ ಅವರು, ಒಂದು ವೇಳೆ ವಿಹಾರಿ ಬದಲು 5ನೇ ಕ್ರಮಾಂಕಕ್ಕೆ ಹೊಸ ಬ್ಯಾಟ್ಸ್​ಮನ್​ ಒಬ್ಬರನ್ನು ಕರೆತಂದರೆ ಪಂತ್​ 6ರಲ್ಲಿ ಮತ್ತು ಸಹಾ 7ರಲ್ಲಿ ಹಾಗೂ ಜಡೇಜಾ ಬದಲು ಒಬ್ಬ ಬೌಲರ್​ ಕಣಕ್ಕಿಳಿದರೆ ನನ್ನ ಪ್ರಕಾರ ಅವರ ತಂಡ ಕೂಡ ಉತ್ತಮವಾಗಿರುತ್ತದೆ ಎಂದು ಪಾಂಟಿಂಗ್ ಹೇಳಿದ್ದಾರೆ.

ಬ್ರಿಸ್ಬೇನ್​ನಲ್ಲಿ ಆಸ್ಟ್ರೇಲಿಯಾ ಸಂಪೂರ್ಣ ಪ್ರಾಬಲ್ಯ ಸಾಧಿಸಲಿದ್ದಾರೆ ಎಂದು ಹೇಳುವುದಕ್ಕೆ ಪ್ರಮುಖ ಕಾರಣವೆಂದರೆ, ಆಸ್ಟ್ರೇಲಿಯಾ ತಂಡ ಬ್ರಿಸ್ಬೇನ್​ನಲ್ಲಿ ಆಡಿರುವ 55 ಟೆಸ್ಟ್​ ಪಂದ್ಯಗಳಲ್ಲಿ 33 ಗೆಲುವು,13 ಡ್ರಾ ಹಾಗೂ 1 ಟೈ ಸಾಧಿಸಿದ್ದರೆ, ಕೇವಲ 8 ಪಂದ್ಯಗಳಲ್ಲಿ ಸೋಲು ಕಂಡಿದೆ. 1988ರಲ್ಲಿ ಆಸ್ಟ್ರೇಲಿಯಾ ಈ ಕ್ರೀಡಾಂಗಣದಲ್ಲಿ ಕೊನೆ ಬಾರಿ ಸೋಲುಕಂಡಿದೆ. ಅಲ್ಲಿಂದ 31 ಪಂದ್ಯಗಳಲ್ಲಿ ಕೇವಲ 7 ಪಂದ್ಯಗಳಲ್ಲಿ ಡ್ರಾ ಸಾಧಿಸಿದರೆ, 24 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ:ವಿಹಾರಿ 4ನೇ ಟೆಸ್ಟ್​ನಿಂದ ಔಟ್​, ಇಂಗ್ಲೆಂಡ್ ಸರಣಿಗೂ ಡೌಟ್‌.. ಜಡೇಜಾ ಬದಲು ಯಾರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.