ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 601ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ.
ಮೊದಲ ದಿನದಲ್ಲಿ ಮಯಾಂಕ್ ಅಗರ್ವಾಲ್ ಶತಕ ಹಾಗೂ ಪೂಜಾರ ಅರ್ಧಶತಕ, ಎರಡನೇ ದಿನದಲ್ಲಿ ಕೊಹ್ಲಿ ದ್ವಿಶತಕ, ರಹಾನೆ ಹಾಗೂ ಜಡೇಜಾ ಅರ್ಧಶತಕದ ಮೂಲಕ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಿದೆ.
ಕೊಹ್ಲಿ ಶತಕದಬ್ಬರಕ್ಕೆ ಬ್ರಾಡ್ಮನ್, ಸಚಿನ್ ದಾಖಲೆ ಪತನ..!
ನಾಯಕ ವಿರಾಟ್ ಕೊಹ್ಲಿ(254*) ಮಯಾಂಕ್ ಅಗರ್ವಾಲ್(108), ರವೀಂದ್ರ ಜಡೇಜಾ(91) ಅಜಿಂಕ್ಯ ರಹಾನೆ(59), ಚೇತೇಶ್ವರ ಪೂಜಾರ(58) ಕೊಡುಗೆಯಿಂದ ಭಾರತ ಅಸಾಧಾರಣ ಮೊತ್ತ ಕಲೆಹಾಕಿದೆ.
ದ್ವಿಶತಕದ ಮೂಲಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಏಳು ಸಾವಿರ ರನ್ ಸಹ ಕೊಹ್ಲಿ ದಾಖಲಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ ಮೂರು ಹಾಗೂ ಕೇಶವ್ ಮಹರಾಜ್ ಹಾಗೂ ಮುತ್ತುಸಾಮಿ ತಲಾ ಒಂದು ವಿಕೆಟ್ ಕಿತ್ತಿದ್ದಾರೆ. ಇಂದಿನ ದಿನದಾಟದಲ್ಲಿ ಹತ್ತಕ್ಕೂ ಅಧಿಕ ಓವರ್ ಬಾಕಿ ಇದ್ದು, ಕೆಲ ವಿಕೆಟ್ ಉರುಳಿಸಿ ಪ್ರವಾಸಿಗರಿಗೆ ಆರಂಭಿಕ ಒತ್ತಡ ನೀಡಲು ಭಾರತದ ಬೌಲರ್ಗಳು ಸಜ್ಜಾಗಿದ್ದಾರೆ.
-
Innings Break!#TeamIndia declare their innings after putting a formidable total of 601/5 on the board.#INDvSA pic.twitter.com/sFjqtQMQPO
— BCCI (@BCCI) October 11, 2019 " class="align-text-top noRightClick twitterSection" data="
">Innings Break!#TeamIndia declare their innings after putting a formidable total of 601/5 on the board.#INDvSA pic.twitter.com/sFjqtQMQPO
— BCCI (@BCCI) October 11, 2019Innings Break!#TeamIndia declare their innings after putting a formidable total of 601/5 on the board.#INDvSA pic.twitter.com/sFjqtQMQPO
— BCCI (@BCCI) October 11, 2019