ರಾಂಚಿ: ಭಾರತ - ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟೆಸ್ಟ್ನ ಮೂರನೇ ದಿನದಾಟದಲ್ಲಿ ಭಾರತೀಯ ಬೌಲರ್ಗಳ ದಾಳಿಗೆ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಪೆವಿಲಿಯನ್ ಪರೇಡ್ ನಡೆಸುತ್ತಿದ್ದಾರೆ.
ಮೊದಲನೇ ಇನ್ನಿಂಗ್ಸ್ನಲ್ಲಿ 162 ರನ್ಗೆ ಸರ್ವಪತನ ಕಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಟೀಂ ಇಂಡಿಯಾ ಫಾಲೋ-ಆನ್ ನೀಡಿದೆ. 334 ರನ್ಗಳ ಗುರಿ ಬೆನ್ನತ್ತಿದ ಹರಿಣ ಪಡೆಗೆ ಟೀಂ ಇಂಡಿಯಾ ವೇಗಿಗಳು ಆಘಾತ ನೀಡಿದ್ದಾರೆ.

2ನೇ ಇನ್ನಿಂಗ್ಸ್ನ 2ನೇ ಓವರ್ನಲ್ಲೆ ಕ್ವಿಂಟನ್ ಡಿ ಕಾಕ್ ಅವರನ್ನ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಉಮೇಶ್ ಯಾದವ್ ವಿಕೆಟ್ ಅಭಿಯಾನ ಶುರು ಮಾಡಿದ್ರು. ಬಿಗಿ ಬೌಲಿಂಗ್ ದಾಳಿ ನಡೆಸಿದ ಮಹಮ್ಮದ್ ಶಮಿ, ಹಮ್ಜಾ, ಫಾಫ್ ಡು ಪ್ಲೆಸಿಸ್ ಮತ್ತು ಬವುಮ ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ ನೀಡಿದ್ರು.

ವಿಕೆಟ್ ಕೀಪರ್ ಹೆನ್ರಿ ಕ್ಲಾಸನ್ ಅವರನ್ನ ಎಲ್ಬಿ ಬಲೆಗೆ ಕೆಡವಿದ ಉಮೇಶ್, ಕ್ಲಾಸನ್ಗೆ ಪೆವಿಲಿಯನ್ ದಾರಿ ತೋರಿಸಿದ್ರು. ಸದ್ಯ ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್ ಕಳೆದುಕೊಂಡು 62 ರನ್ಗಳಿಸಿದ್ದು, ಗೆಲುವಿಗೆ 273 ರನ್ಗಳಿಸಬೇಕಿದೆ.