ETV Bharat / sports

ಭಾರತ - ದಕ್ಷಿಣ ಆಫ್ರಿಕಾ 3ನೇ ಟೆಸ್ಟ್​: ರಾಂಚಿ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ತಾರಂತೆ ಧೋನಿ! - 3ನೇ ಟೆಸ್ಟ್​ಪಂದ್ಯ ವೀಕ್ಷಿಸಲಿದ್ದಾರೆ ಧೋನಿ

ರಾಂಚಿಯಲ್ಲಿ ನಡೆಸಿರುವ ಭಾರತ - ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯ ವೀಕ್ಷಿಸಲು ಲೋಕಲ್​ ಬಾಯ್​ ಧೋನಿ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಹೇಂದ್ರ ಸಿಂಗ್ ಧೋನಿ
author img

By

Published : Oct 18, 2019, 7:37 PM IST

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್​​ಪಂದ್ಯ ರಾಂಚಿಯಲ್ಲಿ ನಡೆಯಲಿದ್ದು, ಪಂದ್ಯದ ವೇಳೆಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂರನೇ ಟೆಸ್ಟ್​ ಪಂದ್ಯ ರಾಂಚಿಯಲ್ಲಿ ನಡೆಯುತ್ತಿರುವುದರಿಂದ ಲೋಕಲ್​ ಬಾಯ್​ ಧೋನಿ ಪಂದ್ಯ ವೀಕ್ಷಣೆ ಮಾಡಲು ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

MS Dhoni
ಮಹೇಂದ್ರ ಸಿಂಗ್ ಧೋನಿ

ಮೂಲಗಳ ಪ್ರಕಾರ ಮಹೇಂದ್ರ ಸಿಂಗ್ ಧೋನಿ ತನ್ನ ಬಾಲ್ಯದ ಸ್ನೇಹಿತರು ಮತ್ತು ಜಾರ್ಖಂಡ್ ಕ್ರಿಕೆಟ್​ ತಂಡದ ಮಾಜಿ ನಾಯಕ ಮಿಹಿರ್ ದಿವಾಕರ್ ಜೊತೆಯಲ್ಲಿ ಮುಂಬೈನಿಂದ ರಾಂಚಿಗೆ ಆಗಮಿಸಲಿದ್ದು, ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಪಂದ್ಯವನ್ನ ವೀಕ್ಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಏಕದಿನ ಕ್ರಿಕೆಟ್ ವಿಶ್ವಕಪ್​ ಟೂರ್ನಿ ನಂತರ ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ನಿಂದ ಕೊಂಚ ದೂರ ಉಳಿದಿದ್ದಾರೆ. ಅವರ ನಿವೃತ್ತಿ ಬಗ್ಗೆಯೂ ಹಲವು ಮಾತುಗಳು ಕೇಳಿಬಂದಿದ್ದವು. ಇದೀಗ ಧೋನಿ ಮತ್ತೆ ಕ್ರೀಡಾಂಗಣದತ್ತ ಮುಖ ಮಾಡಲಿದ್ದಾರೆ ಎಂಬ ಸುದ್ದಿ ಧೋನಿ ಅಭಿಮಾನಿಗಳ ಸಂತಸ ಹೆಚ್ಚಿಸಿದೆ.

Intro:Body:

news

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.