ETV Bharat / sports

10 ವರ್ಷದಿಂದ ಪಾಕ್​ ವಿರುದ್ಧ ಸೋತಿಲ್ಲ ಇಂಡಿಯಾ... ಅಂಡರ್​​-19 ಸೆಮಿಫೈನಲ್​​ನಲ್ಲಿ ಇಂದು ಬಿಗ್​ಫೈಟ್​!

author img

By

Published : Feb 4, 2020, 8:02 AM IST

Updated : Feb 4, 2020, 9:05 AM IST

ಅಂಡರ್​​-19 ವಿಶ್ವಕಪ್​ ಸೆಮಿಫೈನಲ್​​​ ಇಂದು ಸಾಂಪ್ರದಾಯಿಕ ಎದುರಾಳಿ ಭಾರತ-ಪಾಕ್​ ಮುಖಾಮುಖಿಯಾಗಲಿದ್ದು, ಫೈನಲ್​​​ ಲಗ್ಗೆ ಹಾಕಲು ಉಭಯ ತಂಡಗಳು ಸೆಣಸಾಟ ನಡೆಸಲಿವೆ.

India vs Pakistan
India vs Pakistan

ಪ್ರೊಚೆಫ್​ಸ್ಟ್ರೂಮ್( ದಕ್ಷಿಣ ಆಫ್ರಿಕಾ)​​: ಅಂಡರ್​​-19 ವಿಶ್ವಕಪ್​ ಸೆಮಿಫೈನಲ್​​ನಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿ ಭಾರತ - ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಯಂಗ್​ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರಿಸುವ ಎಲ್ಲ ಲಕ್ಷಣ ಗೋಚರಿಸುತ್ತಿದೆ.

India vs Pakistan
ಟೀಂ ಇಂಡಿಯಾ ಬ್ಯಾಟ್ಸ್​ಮನ್​​​​​

ಇಲ್ಲಿಯವರೆಗಿನ ಟೂರ್ನಿಯಲ್ಲಿ ಉಭಯ ತಂಡಗಳು ಯಾವುದೇ ಪಂದ್ಯದಲ್ಲಿ ಸೋಲು ಕಂಡಿಲ್ಲ. ಶ್ರೀಲಂಕಾ ,ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​ ನಂತಹ ತಂಡಗಳನ್ನು ಭಾರತ ಸೋಲಿಸಿದ್ದರೆ, ಜಿಂಬಾಬ್ವೆ, ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ತಂಡಗಳನ್ನು ಮಣಿಸಿ ಪಾಕ್​​ ಸೆಮಿಫೈನಲ್​ ಪ್ರವೇಶಿಸಿದೆ.

India vs Pakistan
ಅಂಡರ್​​-19ನಲ್ಲಿ ಭಾರತದ ಹಾದಿ

ಅಂಡರ್​​-19 ವಿಶ್ವಕಪ್​​ನಲ್ಲಿ ಪಾಕಿಸ್ತಾನ ವಿರುದ್ಧ 4 ಸಲ ಗೆಲುವಿನ ರುಚಿ ಕಂಡಿರುವ ಟೀಂ ಇಂಡಿಯಾ ಒಂದು ಸಲ ಅಂದರೆ 2010ರಲ್ಲಿ ಸೋಲು ಕಂಡಿತ್ತು. ಸೆಮಿಫೈನಲ್​ನಲ್ಲಿ ಉಭಯ ತಂಡಗಳು ತಲಾ ಎರಡು ಸಲ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ಒಂದು ಸಲ ಗೆಲುವು ಕಂಡಿವೆ.

India vs Pakistan
ಇಂಡಿಯಾ-ಪಾಕ್​ ಮುಖಾಮುಖಿ

ಕಳೆದ 10 ವರ್ಷಗಳಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಸೋಲು ಕಂಡಿಲ್ಲ. ಇಂದಿನ ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭಗೊಳ್ಳಲಿದ್ದು, ಸಾಂಪ್ರದಾಯಿಕ ಎದುರಾಳಿಗಳ ಹೋರಾಟ ನೋಡಲು ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇಂದಿನ ಸೆಮಿಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ದಾಖಲು ಮಾಡಿದರೆ 7ನೇ ಸಲ ಫೈನಲ್​​ಗೆ​ ಲಗ್ಗೆ ಹಾಕಲಿದ್ದು, ಮತ್ತೊಮ್ಮೆ ಪ್ರಶಸ್ತಿಗೆ ಮುತ್ತಿಕ್ಕುವ ಸಾಧ್ಯತೆ ದಟ್ಟವಾಗಿದೆ.

India vs Pakistan
ಪಾಕಿಸ್ತಾನ ತಂಡ

ಭಾರತ ಅಂಡರ್​ -19 ತಂಡ: ಯಶಸ್ವಿ ಜೈಸ್ವಾಲ್, ದಿವ್ಯಾನ್ಶ್​ ಸಕ್ಸೇನಾ, ತಿಲಕ್ ವರ್ಮಾ, ಪ್ರಿಯಾಂ ಗರ್ಗ್ (ನಾಯಕ), ಧ್ರುವ್ ಜುರೇಲ್ (ವಿಕೆಟ್​ ಕೀಪರ್​), ಸಿದ್ಧೇಶ್ ವೀರ್, ಅಥರ್ವ ಅಂಕೋಲೆಕರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗ್ಡೆ, ಶಾಶ್ವತ್ ರಾವತ್, ಕುಮಾರ್ ಕುಶಾಗ್ರ.

ಪಾಕಿಸ್ತಾನ ಅಂಡರ್​ 19 ತಂಡ: ಹೈದರ್ ಅಲಿ, ಮೊಹಮ್ಮದ್ ಹುರೈರಾ, ರೋಹೈಲ್ ನಜೀರ್ (ವಿಕೀ/ನಾಯಕ), ಫಹಾದ್ ಮುನೀರ್, ಖಾಸಿಮ್ ಅಕ್ರಮ್, ಮೊಹಮ್ಮದ್ ಹ್ಯಾರಿಸ್, ಇರ್ಫಾನ್ ಖಾನ್, ಅಬ್ಬಾಸ್ ಅಫ್ರಿದಿ, ತಾಹಿರ್ ಹುಸೇನ್, ಅಮೀರ್ ಅಲಿ, ಮೊಹಮ್ಮದ್ ಅಮೀರ್ ಖಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ಅಬ್ದುಲ್ ಬಂಗಲ್ಜೈ, ಮೊಹಮ್ಮದ್ ಶಹಝಾದ್, ಆರಿಶ್ ಅಲಿ ಖಾನ್.

Last Updated : Feb 4, 2020, 9:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.