ಅಹಮದಾಬಾದ್: ನಾಳೆಯಿಂದ ಇಂಗ್ಲೆಂಡ್ ವಿರುದ್ಧದ ಟಿ-20 ಕ್ರಿಕೆಟ್ ಸರಣಿ ಆರಂಭಗೊಳ್ಳಲಿದ್ದು, ಟೀಂ ಇಂಡಿಯಾ ಪರ ಯಾರು ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಲಿದ್ದಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇದಕ್ಕೆ ಖುದ್ದಾಗಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ.
![Shikhar Dhawan](https://etvbharatimages.akamaized.net/etvbharat/prod-images/10965261_twdfdfdf.jpg)
ಟೂರ್ನಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ವಿರಾಟ್ ಕೊಹ್ಲಿ ಮಾತನಾಡಿದ್ದು, ಕಳೆದ ಕೆಲ ಟೂರ್ನಿಗಳಲ್ಲಿ ರೋಹಿತ್ ಹಾಗೂ ರಾಹುಲ್ ಸತತವಾಗಿ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಅವರೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಜತೆಗೆ ಶಿಖರ್ ಧವನ್ ನಮಗೆ ಮೂರನೇ ಓಪನರ್ ಎಂದಿದ್ದಾರೆ. ತಂಡದಲ್ಲಿ ಕೆಲ ಹೊಸ ಮುಖಗಳು ಅವಕಾಶ ಪಡೆದುಕೊಂಡಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ನಿರರ್ಗಳವಾಗಿ ತಮ್ಮ ಪ್ರದರ್ಶನ ತೋರಬೇಕಾಗಿದೆ ಎಂದಿದ್ದಾರೆ.
![Rohit sharma](https://etvbharatimages.akamaized.net/etvbharat/prod-images/10965261_twdfdfd.jpg)
ಇದನ್ನೂ ಓದಿ: ನಾಳೆಯಿಂದ ಟಿ-20 ಫೈಟ್: ಹೊಸ ದಾಖಲೆಗಳ ಮೇಲೆ ವಿರಾಟ್, ರೋಹಿತ್ ಕಣ್ಣು
ಐಸಿಸಿ ಟಿ-20ಯಲ್ಲಿ ಇಂಗ್ಲೆಂಡ್ ನಂಬರ್ 1 ತಂಡವಾಗಿದ್ದು, ಟಿ-20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಮುಕ್ತಾಯಗೊಂಡ ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ರನ್ ಗಳಿಕೆ ಮಾಡಿದ್ದು, ಶಿಖರ್ ಧವನ್ ಕಳೆದ ಕೆಲ ತಿಂಗಳಿಂದ ಯಾವುದೇ ಕ್ರಿಕೆಟ್ ಪಂದ್ಯ ಆಡಿಲ್ಲ. ಇನ್ನು ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು.
ಇನ್ನು ಭಾರತದ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ಫಿಟ್ನೆಟ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದು, ಟಿ-20 ಸರಣಿಯಿಂದ ಹೊರಗುಳಿಯಲಿದ್ದಾರೆ. ಇದರ ಮಧ್ಯೆ ವೇಗಿ ನಟರಾಜನ್ ಭುಜದ ನೋವಿನಿಂದ ಬಳಲುತ್ತಿರುವ ಕಾರಣ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.