ಹೈದರಾಬಾದ್: ಫೆಬ್ರವರಿ 5ರಿಂದ ಭಾರತ-ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳುವುದರ ಮೂಲಕ ಕ್ರಿಕೆಟ್ ಸರಣಿಗೆ ಚಾಲನೆ ಸಿಗಲಿದ್ದು, ಕೋವಿಡ್-19 ಅನ್ಲಾಕ್ ಬಳಿಕ ದೇಶದಲ್ಲಿ ಆರಂಭಗೊಳ್ಳುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಿದೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 4 ಟೆಸ್ಟ್, 5 ಟಿ-20 ಪಂದ್ಯ ಹಾಗೂ ಮೂರು ಏಕದಿನ ಪಂದ್ಯಗಳಲ್ಲಿ ಭಾಗಿಯಾಗಲಿದ್ದು, ಮೊದಲೆರಡು ಟೆಸ್ಟ್ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿವೆ. ನಂತರದ ಪಂದ್ಯಗಳು ಅಹಮದಾಬಾದ್ನಲ್ಲಿ ನಡೆಯಲಿವೆ.
ಫೆ. 13ರಿಂದ ಚೆನ್ನೈನ ಚಿದಂಬರಂ ಮೈದಾನದಲ್ಲಿ ನಡೆಯಲಿರುವ ಪಂದ್ಯ ವೀಕ್ಷಣೆಗೆ ಶೇ. 50ರಷ್ಟು ವೀಕ್ಷಕರಿಗೆ ಅನುಮತಿ ನೀಡಲಾಗಿದ್ದು, ಈಗಾಗಲೇ ಬಿಸಿಸಿಐ ಹಾಗೂ ತಮಿಳುನಾಡು ಕ್ರಿಕೆಟ್ ಸಮಿತಿ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಅಹಮದಾಬಾದ್ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಮೂರನೇ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯ ನಡೆಯಲಿವೆ.
ಸಂಪೂರ್ಣ ವೇಳಾಪಟ್ಟಿ ಇಂತಿದೆ
ಟೆಸ್ಟ್: ಫೆಬ್ರವರಿ 5-9 ಮೊದಲ ಟೆಸ್ಟ್ ಪಂದ್ಯ(ಚಿದಂಬರಂ ಸ್ಟೇಡಿಯಂ)
ಫೆಬ್ರವರಿ 13-17 ಎರಡನೇ ಟೆಸ್ಟ್ ಪಂದ್ಯ(ಚಿದಂಬರಂ ಸ್ಟೇಡಿಯಂ)
ಫೆಬ್ರವರಿ 24-28 ಮೂರನೇ ಟೆಸ್ಟ್ ಪಂದ್ಯ (ಸರ್ದಾರ್ ಪಟೇಲ್ ಸ್ಟೇಡಿಯಂ ಅಹಮದಾಬಾದ್)
ಮಾರ್ಚ್ 4-8 ನಾಲ್ಕನೇ ಟೆಸ್ಟ್ ಪಂದ್ಯ (ಸರ್ದಾರ್ ಪಟೇಲ್ ಸ್ಟೇಡಿಯಂ ಅಹಮದಾಬಾದ್)
ಟಿ-20 ಪಂದ್ಯಗಳು
ಮಾರ್ಚ್ 12: ಮೊಟೆರಾ ಸ್ಟೇಡಿಯಂ ಅಹಮದಾಬಾದ್(ರಾತ್ರಿ 7ಕ್ಕೆ)
ಮಾರ್ಚ್ 14: ಮೊಟೆರಾ ಸ್ಟೇಡಿಯಂ ಅಹಮದಾಬಾದ್(ರಾತ್ರಿ 7ಕ್ಕೆ)
ಮಾರ್ಚ್ 16: ಮೊಟೆರಾ ಸ್ಟೇಡಿಯಂ ಅಹಮದಾಬಾದ್(ರಾತ್ರಿ 7ಕ್ಕೆ)
ಮಾರ್ಚ್ 18: ಮೊಟೆರಾ ಸ್ಟೇಡಿಯಂ ಅಹಮದಾಬಾದ್(ರಾತ್ರಿ 7ಕ್ಕೆ)
ಮಾರ್ಚ್ 20: ಮೊಟೆರಾ ಸ್ಟೇಡಿಯಂ ಅಹಮದಾಬಾದ್(ರಾತ್ರಿ 7ಕ್ಕೆ)
ಏಕದಿನ ಪಂದ್ಯಗಳು
ಮಾರ್ಚ್ 23: ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಪುಣೆ(ಮಧ್ಯಾಹ್ನ 1:30ಕ್ಕೆ)
ಮಾರ್ಚ್ 26: ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಪುಣೆ(ಮಧ್ಯಾಹ್ನ 1:30ಕ್ಕೆ)
ಮಾರ್ಚ್ 28: ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಪುಣೆ(ಮಧ್ಯಾಹ್ನ 1:30ಕ್ಕೆ)
ತಂಡದ ಆಟಗಾರರ ವಿವರ ಇಂತಿದೆ
ಇಂಡಿಯಾ( ಮೊದಲ ಎರಡು ಟೆಸ್ಟ್): ವಿರಾಟ್ ಕೊಹ್ಲಿ(ಕ್ಯಾಪ್ಟನ್), ಅಜಿಂಕ್ಯಾ ರಹಾನೆ(ಉ.ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರವಾಲ್, ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರಾ, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್(ವಿ.ಕೀ), ವೃದ್ಧಿಮಾನ್ ಸಾಹಾ(ವಿ.ಕೀ), ಆರ್.ಅಶ್ವಿನ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.
ನೆಟ್ ಬೌಲರ್ಸ್: ಅಂಕಿತ್ ರಜಪೂತ್, ಸಂದೀಪ್ ವಾರಿಯರ್, ಕೆ.ಗೌತಮ್, ಸೌರಭ್ ಕುಮಾರ್, ಅವೀಶ್ ಖಾನ್.
ಮೀಸಲು ಪ್ಲೇಯರ್ಸ್: ಅಭಿಮನ್ಯು ಈಶ್ವರನ್, ಶಹ್ಜಾಬ್ ನದೀಂ, ರಾಹುಲ್ ಚಹಾರ್, ಪ್ರಿಯಾಂಕ್ ಪಾಂಚಾಲ್, ಕೆ.ಎಸ್. ಭರತ್
ಇಂಗ್ಲೆಂಡ್ ಪ್ಲೇಯರ್ಸ್( ಮೊದಲೆರಡು ಟೆಸ್ಟ್)
ಜೊ ರೂಟ್(ಕ್ಯಾಪ್ಟನ್) ಮೊಯಿನ್ ಅಲಿ, ಡೊಮ್ ಬಿಸ್, ಸ್ಟುವರ್ಡ್ ಬ್ರಾಂಡ್, ರೊರಿ ಬುರ್ನ್ಸ್, ಜಾಸ್ ಬಟ್ಲರ್, ಜಾಕ್ ಕ್ರಿವ್ಲಿ, ಬೆನ್ ಫಾಕಿಸ್, ಡಾನ್ ಲ್ವಾರೆನ್ಸ್, ಜಾಕ್ ಲೆಚ್, ಬೆನ್ ಸ್ಟೋಕ್, ಒಲಿ ಸ್ಟೋನಿ, ಡೊಮ್ ಸಿಬ್ಲಿ, ಕ್ರಿಸ್ ವೊಕ್ಸ್, ಜೋಪ್ರಾ ಆರ್ಚರ್, ಜೆಮ್ಸ್ ಆಂಡರ್ಸನ್.