ETV Bharat / sports

347 ರನ್​ಗಳಿಗೆ ಭಾರತ ಡಿಕ್ಲೇರ್.. ಮತ್ತೆ ಬಾಂಗ್ಲಾಕ್ಕೆ ಶಾಕ್ ನೀಡಿದ ಇಶಾಂತ್ - ಸಂಕಷ್ಟದಲ್ಲಿ ಬಾಂಗ್ಲಾದೇಶ ತಂಡ

ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾ ತಂಡದ ನಾಲ್ವರು ಆಟಗಾರರು ಪೆವಿಲಿಯನ್ ಸೇರಿಕೊಂಡಿದ್ದು, ತಂಡ ಸಂಕಷ್ಟ ಅನುಭವಿಸುತ್ತಿದೆ.

ಬಾಂಗ್ಲಾಕ್ಕೆ ಶಾಕ್ ನೀಡಿದ ಇಶಾಂತ್
author img

By

Published : Nov 23, 2019, 6:23 PM IST

ಕೋಲ್ಕತ್ತಾ: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 347ರನ್​ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ದ್ವಿತೀಯ ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾ ತಂಡ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಮೊದಲ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್ ಕಳೆದುಕೊಂಡು 174ರನ್​ಗಳಿಸಿದ್ದ ಟೀಂ ಇಂಡಿಯಾ ಇಂದು ಕೂಡ ಉತ್ತಮ ಆರಂಭ ಪಡೆದುಕೊಳ್ತು. ಪಿಂಕ್ ಬಾಲ್​ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಉಪನಾಯಕ ರಹಾನೆ ಅರ್ಧ ಶತ ಸಿಡಿಸಿ ಔಟ್​ ಆದ್ರು. ಬಾಂಗ್ಲಾ ಬೌಲರ್​ಗಳ ಬೆವರಿಳಿಸಿದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 27ನೇ ಶತಕ ದಾಖಲಿಸಿದ್ರು.

ಉತ್ತಮವಾಗಿ ಬ್ಯಾಟ್ ಬೀಸುತಿದ್ದ ವಿರಾಟ್ 136ರನ್​ ಗಳಿಸಿರುವಾಗ​ ಇಬಾದತ್ ಎಸೆತದಲ್ಲಿ ಫ್ಲಿಕ್ ಮಾಡಿದ್ರು. ಆದರೆ, ಬೌಂಡರಿ ಬಳಿ ತೈಜುಲ್ ಇಸ್ಲಾಂ ಹಿಡಿದ ಅದ್ಭುತ ಕಾಚ್​ಗೆ ಕೊಹ್ಲಿ ಬಲಿಯಾದ್ರು. ನಂತರ ಬಂದ ಜಡೇಜಾ ಮತ್ತು ಸಹಾ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು. 89.4 ಓವರ್​​ಗಳಲ್ಲಿ 9 ವಿಕೆಟ್ ಕಳೆದುಕೊಂಡು 347 ರನ್​ಗಳಿಸಿರುವಾಗ ಟೀಂ ಇಂಡಿಯಾ ನಾಯಕ ವಿರಾಟ್ ಡಿಕ್ಲೇರ್ ಘೋಷಣೆ ಮಾಡಿದ್ರು. ಈ ವೇಳೆ, ಭಾರತ 241ರನ್​ಗಳ ಮುನ್ನಡೆ ಸಾಧಿಸಿತ್ತು.

ಇನ್ನು ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ತಂಡಕ್ಕ ವೇಗಿ ಇಶಾಂತ್ ಶರ್ಮಾ ಭರ್ಜರಿ ಶಾಕ್ ನಿಡಿದ್ರು. ಆರಂಭಿಕ ಆಟಗಾರರಾದ ಶಾದಮನ್ ಇಸ್ಲಾಂ ಮತ್ತು ನಾಯಕ ಮೊಮಿನುಲ್ ಹಕ್ ವಿಕೆಟ್ ಪಡೆದುಕೊಂಡಿದ್ದಾರೆ. ಚಹಾ ವಿರಾಮದ ನಂತರ ಮತ್ತೆರಡು ವಿಕೆಟ್ ಪಥನವಾಗಿದ್ದು, ಸದ್ಯ ಬಾಂಗ್ಲಾ ತಂಡ 4 ವಿಕೆಟ್ ಕಳೆದುಕೊಂಡು 20 ರನ್ ಗಳಿಸಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.