ಬ್ಲೂಮ್‌ಫಾಂಟೈನ್: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ನಲ್ಲಿ ಭಾರತ ತಂಡ ಜಪಾನ್ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ಪ್ರಿಯಂ ಗರ್ಗ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇವರ ನಿರ್ಧಾರವನ್ನು ಬಹಳ ಬೇಗ ಫಲ ನೀಡಿತು. ಭಾರತೀಯ ಬೌಲರ್ಗಳ ಜಪಾನ್ ಬ್ಯಾಟ್ಸ್ಮನ್ಗಳನ್ನು ಕೇವಲ 22.5 ಓವರ್ಗಳಲ್ಲಿ ಆಲೌಟ್ ಮಾಡಿದರು.
-
India Under 19 beat Japan Under 19 by ten wickets to register their second successive win in #U19CWC. 👏👏
— BCCI (@BCCI) January 21, 2020 " class="align-text-top noRightClick twitterSection" data="
Report 👉👉https://t.co/3kC3CW0DOG#INDvJPN pic.twitter.com/jDlXqWJLfn
">India Under 19 beat Japan Under 19 by ten wickets to register their second successive win in #U19CWC. 👏👏
— BCCI (@BCCI) January 21, 2020
Report 👉👉https://t.co/3kC3CW0DOG#INDvJPN pic.twitter.com/jDlXqWJLfnIndia Under 19 beat Japan Under 19 by ten wickets to register their second successive win in #U19CWC. 👏👏
— BCCI (@BCCI) January 21, 2020
Report 👉👉https://t.co/3kC3CW0DOG#INDvJPN pic.twitter.com/jDlXqWJLfn
ಮಾರಕ ಬೌಲಿಂಗ್ ದಾಳಿ ನಡೆಸಿದ ವೇಗಿ ಕಾರ್ತಿಕ್ ತ್ಯಾಗಿ 3 ವಿಕೆಟ್, ರವಿ ಬಿಶ್ನೋಯ್ 8 ಓವರ್ಗಳಲ್ಲಿ ಕೇವಲ 5 ರನ್ ನೀಡಿ 4 ವಿಕೆಟ್ ಪಡೆದರೆ, ಆಕಾಶ್ ಸಿಂಗ್ 2 ಹಾಗೂ ಕನ್ನಡಿಗ ವಿದ್ಯಾದರ್ ಪಾಟೀಲ್ 4 ಓವರ್ಗಳಲ್ಲಿ 8 ರನ್ ನೀಡಿ ಒಂದು ವಿಕೆಟ್ ಪಡೆದು ಜಪಾನ್ ತಂಡವನ್ನು 50 ರ ಗಡಿ ದಾಟದಂತೆ ನೋಡಿಕೊಂಡರು. ಅಲ್ಲದೇ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಎರಡಂಕಿ ಮೊತ್ತ ತಲುಪದಂತೆ ಮಾಡಿದರು.
ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್ 18 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 29 ಹಾಗೂ ಕುಮಾರ್ ಕುಶಾಗ್ರ 11 ಎಸೆತಗಳಲ್ಲಿ 13 ರನ್ಗಳಿಸಿ 10 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು. 41 ರನ್ಗಳ ಗುರಿಯನ್ನು ಭಾರತ ತಂಡ 45.1 ಓವರ್ ಉಳಿದಿರುವಂತೆ ತಲುಪಿ ದಾಖಲೆ ಬರೆಯಿತು.