ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ ಮಾರ್ಚ್ 7ರಿಂದ ಆರಂಭಗೊಳ್ಳಲಿರುವ ಮಹಿಳಾ ಕ್ರಿಕೆಟ್ ಸರಣಿಗೋಸ್ಕರ ಆಲ್ ಇಂಡಿಯಾ ಮಹಿಳಾ ಆಯ್ಕೆ ಸಮಿತಿ ಟೀಂ ಇಂಡಿಯಾ ಪ್ರಕಟಿಸಿದ್ದು, ಏಕದಿನ ಸರಣಿಯಲ್ಲಿ ಮಿಥಾಲಿ ರಾಜ್ ಹಾಗೂ ಟಿ-20 ತಂಡವನ್ನ ಹರ್ಮನ್ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ.
ಐದು ಏಕದಿನ ಪಂದ್ಯಗಳ ಸರಣಿ ಮಾರ್ಚ್ 7ರಿಂದ ಸರಣಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನ ಲಕ್ನೋದಲ್ಲಿ ನಡೆಯಲಿದೆ. ಟಿ-20 ಸರಣಿ ಮಾರ್ಚ್ 20ರಿಂದ ಆರಂಭವಾಗಲಿದೆ.
ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ಸ್ಗಳಾದ ಏಕ್ತಾ ಬಿಶ್ತ್, ಅನುಜಾ ಪಾಟೀಲ್, ವೇದಕೃಷ್ಣಮೂರ್ತಿ, ತಾನಿಯಾ ಭಾಟಿಯಾ ಮತ್ತು ಶಿಖಾ ಪಾಂಡೆ ತಂಡದಲ್ಲಿ ಅವಕಾಶ ಪಡೆದುಕೊಂಡಿಲ್ಲ. ಆದರೆ ಸಿ ಪ್ರತ್ಯುಷಾ, ಯಸ್ತಿಕಾ ಭಾಟಿಯಾ, ಆಯುಶಿ ಸೋನಿ, ಶ್ವೇತಾ ವರ್ಮಾ, ಮೋನಿಕಾ ಪಟೇಲ್ ಮತ್ತು ಸಿಮ್ರಾನ್ ದಿಲ್ ಬಹದ್ದೂರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ: ವೈಯಕ್ತಿಕ ಕಾರಣ: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ನಿಂದ ಬುಮ್ರಾ ರಿಲೀಸ್!
ಸುಷ್ಮಾ ವರ್ಮಾ ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಭಾರತೀಯ ಮಹಿಳಾ ಪಡೆ ನವೆಂಬರ್ 2020ರಲ್ಲಿ ಟಿ-20 ಚಾಲೆಂಜ್ನಲ್ಲಿ ಕೊನೆಯದಾಗಿ ಭಾಗಿಯಾಗಿತ್ತು. ಇದಕ್ಕೂ ಮೊದಲು ಮಾರ್ಚ್ 2020ರಲ್ಲಿ ನಡೆದ ಟಿ-20 ವಿಶ್ವಕಪ್ನಲ್ಲಿ ಮಹಿಳಾ ತಂಡ ಭಾಗಿಯಾಗಿತ್ತು. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಿತ್ತು.
ಏಕದಿನ ಮಹಿಳಾ ಪಡೆ: ಮಿಥಾಲಿ ರಾಜ್(ಕ್ಯಾಪ್ಟನ್), ಸ್ಮೃತಿ ಮಂದಾನಾ, ರೋಡ್ರಿಗೆಸ್, ಪುನಂ ರಾವತ್, ಪ್ರಿಯಾ ಪೂನಿಯಾ, ಯಸ್ತಿಕ್ ಭಾಟಿಯಾ, ಹರ್ಮನ್ಪ್ರೀತ್ ಕೌರ್(ಉ.ನಾಯಕಿ),ಡಿ. ಹೇಮಲತಾ, ದೀಪ್ತಿ ಶರ್ಮಾ, ಸುಷ್ಮಾ ವರ್ಮಾ(ವಿ.ಕೀ), ಸ್ವೇತಾ ವರ್ಮಾ(ವಿ.ಕೀ), ರಾಧಾ ಯಾದವ್, ರಾಜೇಶ್ವರಿ ಗಾಯ್ಕವಾಡ್, ಜೂಲನ್ ಗೋಸ್ವಾಮಿ, ಮಾನ್ಸಿ ಜೋಶಿ, ಪೂನಂ ಯಾದವ್, ಪ್ರತ್ಯೂಸ್ ಹಾಗೂ ಮೋನಿಕಾ ಪಟೇಲ್
ಟಿ 20 ಮಹಿಳಾ ಪಡೆ: ಹರ್ಮನ್ಪ್ರೀತ್ ಕೌರ್(ಕ್ಯಾಪ್ಟನ್), ಸ್ಮೃತಿ ಮಂದಾನಾ(ಉ.ನಾಯಕಿ),ಶಫಾಲಿ ವರ್ಮಾ, ರೋಡ್ರಿಗೆಸ್, ದೀಪ್ತಿ ಶರ್ಮಾ,ರಿಚಾ ಗೋಸ್, ಹರ್ಲಿನ್ ಡಿಯೋಲ್, ಸುಷ್ಮಾ ವರ್ಮಾ(ವಿ.ಕೀ), ನುಜಾತ್ ಪ್ರವೀಣ್(ವಿ.ಕೀ), ಆಯೋಸಿ ಸೂನಿ, ಅರುಂಧತಿ ರೆಡ್ಡಿ, ರಾಧಾ ಯಾದವ್, ರಾಜೇಶ್ವರಿ ಗಾಯ್ಕವಾಡ್, ಪೂನಂ ಯಾದವ್, ಮಾನ್ಸಿ ಜೋಶಿ, ಮೋನಿಕಾ ಪಟೇಲ್,ಪ್ರತ್ಯೂಸ್ ಹಾಗೂ ಸಿಮ್ರಾನ್ ದಿಲ್ ಬಹದ್ದೂರ್