ETV Bharat / sports

ಐಸಿಸಿ ಟೆಸ್ಟ್​ ಕ್ರಿಕೆಟ್​ನಲ್ಲಿ 3 ವರ್ಷದ ಬಳಿಕ ನಂ.1 ಸ್ಥಾನ ಕಳೆದುಕೊಂಡ ಇಂಡಿಯಾ! - ವಿರಾಟ್​​ ಕೊಹ್ಲಿ ಟೀಂ ಇಂಡಿಯಾ

ಕೊರೊನಾ ಭೀತಿ ಇರುವ ಕಾರಣ ಯಾವುದೇ ಕ್ರಿಕೆಟ್​ ಪಂದ್ಯಗಳು ನಡೆಯುತ್ತಿಲ್ಲ. ಇದರ ಮಧ್ಯೆ ಕೂಡ ಟೀಂ ಇಂಡಿಯಾ ಬರೋಬ್ಬರಿ 3 ವರ್ಷಗಳ ಬಳಿಕ ಐಸಿಸಿ ಟೆಸ್ಟ್​ ಶ್ರೇಯಾಂಕದಲ್ಲಿ ನಂಬರ್​ 1 ಪಟ್ಟ ಕಳೆದುಕೊಂಡಿದೆ.

India lose top spot in ICC Test
India lose top spot in ICC Test
author img

By

Published : May 1, 2020, 1:12 PM IST

ದುಬೈ: 2016ರಿಂದಲೂ ಐಸಿಸಿ ಟೆಸ್ಟ್​​ ಶ್ರೇಯಾಂಕದಲ್ಲಿ ನಂಬರ್​​ 1 ಸ್ಥಾನದಲ್ಲಿದ್ದ ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೀಗ ಎರಡು ಸ್ಥಾನ ಕಳೆದುಕೊಂಡಿದ್ದು, ಮೂರನೇ ಸ್ಥಾನಕ್ಕೆ ಕುಸಿತಗೊಂಡಿದೆ.

ಟೆಸ್ಟ್​​ ಹಾಗೂ ಟಿ-20 ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ನಂಬರ್​ 1ಸ್ಥಾನಕ್ಕೆ ಲಗ್ಗೆ ಹಾಕಿದ್ದು, ಏಕದಿನ ಕ್ರಿಕೆಟ್​​ನಲ್ಲಿ ಇಂಗ್ಲೆಂಡ್​ ಮೊದಲ ಸ್ಥಾನದಲ್ಲಿದೆ. ಆದರೆ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯ ಟೆಸ್ಟ್​ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.

  • 👉 India displaced from top in Tests for the first time since October 2016.
    👉 Pakistan slip in T20I rankings after 27 months as No.1.

    Details ⬇️ https://t.co/gfBjYsdFMW

    — ICC (@ICC) May 1, 2020 " class="align-text-top noRightClick twitterSection" data=" ">

ಇದೀಗ ರಿಲೀಸ್​ ಆಗಿರುವ ಅಂಕಗಳ ಪ್ರಕಾರ ಆಸ್ಟ್ರೇಲಿಯಾ 116 ಅಂಕ, ನ್ಯೂಜಿಲ್ಯಾಂಡ್​​​ 115 ಅಂಕ ಹಾಗೂ ಭಾರತ 114 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿಕೆಯಾಗಿದ್ದು, ಟಿ-20 ಶ್ರೇಯಾಂಕದಲ್ಲಿದ್ದ ಪಾಕ್​ ಇದೇ ಮೊದಲ ಸಲ ತನ್ನ ಸ್ಥಾನ ಕಳೆದುಕೊಂಡಿದೆ. ಇಲ್ಲೂ ಕಾಂಗರೂ ಪಡೆ 278 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಟೆಸ್ಟ್​​ ಶ್ರೇಯಾಂಕದಲ್ಲಿ ಏರುಪೇರು ಕಾಣಲು ಕಾರಣ!?

ಐಸಿಸಿ ನಿಯಮಗಳ ಪ್ರಕಾರ 2016-17ರಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತ್ತು. ಆ ದಾಖಲೆ ತೆಗೆದು ಹಾಕಿದ್ದರಿಂದ ಟೀಂ ಇಂಡಿಯಾ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಹೀಗಾಗಿ 2016ರ ಬಳಿಕ ಆಸ್ಟ್ರೇಲಿಯಾ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

2016-17ರಲ್ಲಿ ಟೀಂ ಇಂಡಿಯಾ ಆಡಿದ್ದ ಐದು ಟೆಸ್ಟ್​ ಸರಣಿಗಳಲ್ಲಿ ಗೆಲುವು ದಾಖಲು ಮಾಡಿ, ಕೇವಲ ಒಂದು ಪಂದ್ಯದಲ್ಲಿ ಸೋಲು ಕಂಡಿತ್ತು. ಆಸ್ಟ್ರೇಲಿಯಾ, ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಯ ದಾಖಲು ಮಾಡಿತ್ತು. ಆದರೆ 2019ರಲ್ಲಿ ಆಸ್ಟ್ರೇಲಿಯಾ ಟೆಸ್ಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಅಗ್ರಸ್ಥಾನಕ್ಕೇರಿದೆ. 2003ರಿಂದ ಟೆಸ್ಟ್​​ನಲ್ಲೂ ಶ್ರೇಯಾಂಕ ನೀಡಲು ಐಸಿಸಿ ಆರಂಭಿಸಿದೆ. ಏಕದಿನದಲ್ಲಿ ವಿಶ್ವಕಪ್​ ವಿಜೇತ ತಂಡ ಇಂಗ್ಲೆಂಡ್​ ಮೊದಲ ಸ್ಥಾನ, ಭಾರತ ಎರಡನೇ ಸ್ಥಾನ ಹಾಗೂ ನ್ಯೂಜಿಲ್ಯಾಂಡ್​ ಮೂರನೇ ಸ್ಥಾನದಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.