ETV Bharat / sports

ಬ್ರಿಸ್ಬೇನ್​ಗೆ ತೆರಳಲು ಭಾರತ ತಂಡ ಹಿಂದೇಟು ಹಾಕುತ್ತಿದೆ ಎಂಬುದು ಸುಳ್ಳು: ಸಿಎ ಬಾಸ್​ ನಿಕ್​ ಹಾಕ್ಲೆ

author img

By

Published : Jan 4, 2021, 3:24 PM IST

ಭಾರತ ತಂಡ ಬ್ರಿಸ್ಬೇನ್ ಟೆಸ್ಟ್‌ಗೆ ಇರುವ ಕಠಿಣ ಕ್ವಾರಂಟೈನ್ ನಿಯಮವನ್ನು ಒಪ್ಪಿಕೊಂಡಿದೆ. ನಾವು ಬಿಸಿಸಿಐ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಬಿಸಿಸಿಐ ನಮಗೆ ಬೆಂಬಲವಾಗಿದ್ದು, ಅವರು ಯಾವುದೇ ಬೇಡಿಕೆಯನ್ನು ಹೊಂದಿಲ್ಲ. ಈ ಹಿಂದೆ ನಿರ್ಧರಿಸಿರುವ ವೇಳಾಪಟ್ಟಿಯಂತೆ ಎರಡೂ ತಂಡಗಳು ಆಡಲು ಬಯಸಿವೆ ಎಂದು ಹಾಕ್ಲೆ ತಿಳಿಸಿದ್ದಾರೆ.

ಕ್ರಿಕೆಟ್​  ಆಸ್ಟ್ರೇಲಿಯಾ ಸಿಇಒ
ಕ್ರಿಕೆಟ್​ ಆಸ್ಟ್ರೇಲಿಯಾ ಸಿಇಒ

ಮೆಲ್ಬೋರ್ನ್: ಭಾರತ ತಂಡ 4ನೇ ಟೆಸ್ಟ್​ಗಾಗಿ ಬ್ರಿಸ್ಬೇನ್​ಗೆ ತೆರಳುವುದಕ್ಕೆ ಯಾವುದೇ ತಕರಾರು ತೆಗೆದಿಲ್ಲ. ಅವರು ಕ್ವೀನ್ಸ್​ಲ್ಯಾಂಡ್ಸ್​ನ ಕಠಿಣ ಕ್ವಾರಂಟೈನ್​ ನಿಯಮವನ್ನು ಪಾಲಿಸಲು ಸಂಪೂರ್ಣ ಒಪ್ಪಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್ ಹಾಕ್ಲೆ ಸ್ಪಷ್ಟನೆ ನೀಡಿದ್ದಾರೆ.

​ಬಾರ್ಡರ್​ ಗವಾಸ್ಕರ್​ ಸರಣಿ 4ನೇ ಪಂದ್ಯ ಬ್ರಿಸ್ಬೇನ್​ನ ಗಬ್ಬಾದಲ್ಲಿ ನಿಗದಿಯಾಗಿದೆ. ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಟ್ಟುನಿಟ್ಟಾದ ಕ್ವಾರಂಟೈನ್ ನಿಯಮವಿದ್ದು, ಯಾರೇ ರಾಜ್ಯ ಪ್ರವೇಶಿಸಿದರು 14 ದಿನಗಳ ಕ್ವಾರಂಟೈನ್​ ಮಾಡಬೇಕಿದೆ. ಆದರೆ ಇದಕ್ಕೆ ಭಾರತೀಯರು ಒಪ್ಪುತ್ತಿಲ್ಲ ಎಂದು ಕೆಲವು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿದ್ದವು.

ಇದಕ್ಕೆ ಪ್ರತಿಕ್ರಿಯಿಸಿದ್ದ ಕ್ವೀನ್ಸ್​ ಲ್ಯಾಂಡ್ ಸರ್ಕಾರದ ಆರೋಗ್ಯ ಸಚಿವರು, "ಟೀಮ್​ ಇಂಡಿಯಾ ನಿಯಮ ಪಾಲಿಸಿ ಆಡಲು ಒಪ್ಪದಿದ್ದರೆ, ಅವರು ಇಲ್ಲಿಗೆ ಬರುವುದೇ ಬೇಡ" ಎಂದು ಹೇಳಿಕೆ ನೀಡಿದ್ದರು. ಆದರೆ ಇದೆಲ್ಲಾ ಕೇವಲ ಗಾಳಿ ಸುದ್ದಿ. ಭಾರತೀಯರಿಗೆ ಕ್ವಾರಂಟೈನ್​ ಬಗ್ಗೆ ಯಾವುದೇ ಅಸಮ್ಮತಿಯಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ನಿಕ್​ ಹ್ಯಾಕ್ಲೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.