ETV Bharat / sports

ರಿಷಭ್​ ಪರ ನಿಂತು, ಶ್ರೇಯಸ್​ರನ್ನು​ ಮೆಚ್ಚಿ ಮಾತನಾಡಿದ ಕೋಚ್​ ವಿಕ್ರಮ್​ ರಾಥೋರ್​ - ಶ್ರೇಯಸ್​ ಅಯ್ಯರ್​

ಉತ್ತಮ ಪ್ರದರ್ಶನವನ್ನೂ ತೋರಲು ಅವರಿಂದ ಸಾಧ್ಯವಾಗಲಿಲ್ಲ. ಆದರೀಗ ತಂಡ ನಿರ್ವಹಣಾ ಮಂಡಳಿ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ. ಯಾಕೆಂದರೆ, ಅವರೊಬ್ಬ ವಿಶೇಷ ಆಟಗಾರ ಎಂದು ನಾವು ನಂಬಿದ್ದೇವೆ. ಅವರು ಭವಿಷ್ಯದಲ್ಲಿ ಭಾರತ ತಂಡವನ್ನು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ..

Rishabh Pant
ರಿಷಭ್​ ಪಂತ್​
author img

By

Published : Jun 30, 2020, 7:05 PM IST

ಮುಂಬೈ : ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ರಿಷಭ್​ ಪಂತ್‌ ಆರಂಭದದಲ್ಲಿ ಒಂದಷ್ಟು ಸದ್ದು ಮಾಡಿದರಾದ್ರೂ ನಂತರದ ದಿನಗಳಲ್ಲಿ ನೀರಸ ಪ್ರದರ್ಶನದ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ವೃದ್ಧಿಮಾನ್​ ಸಹಾ ಗಾಯಕ್ಕೆ ತುತ್ತಾದ ಕಾರಣ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಪಂತ್​ ನಂತರ ಟಿ20 ಹಾಗೆ ಏಕದಿನ ತಂಡಕ್ಕೈ ಆಯ್ಕೆಯಾದರು. ಮೊದಲೆರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದರಾದ್ರೂ, ನಂತರ ಬ್ಯಾಟಿಂಗ್​ ಹಾಗೂ ವಿಕೆಟ್​ ಕೀಪಿಂಗ್​ ಎರಡರಲ್ಲೂ ವಿಫಲರಾದರು. ಇದೀಗ ಕನ್ನಡಿಗ ಕೆಎಲ್​ ರಾಹುಲ್​ ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ವಿಕೆಟ್​ ಕೀಪಿಂಗ್​ ಜೊತೆಗೆ ಬ್ಯಾಟಿಂಗ್‌ನ ಅದ್ಭುತವಾಗಿ ನಡೆಸುತ್ತಿರುವುದರಿಂದ ಪಂತ್‌ಗೆ ಅವಕಾಶ ಸಿಗುವುದು ಕಷ್ಟಕರ ಸನ್ನಿವೇಶಕ್ಕೆ ಬಂದು ನಿಂತಿದೆ.

ಆದರೆ, ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋರ್​ ಮಾತ್ರ ರಿಷಭ್​ ಪಂತ್​ ಮೇಲೆ ವಿಶ್ವಾಸವಿಟ್ಟಿದ್ದಾರೆ. ಮ್ಯಾನೇಜ್​ಮೆಂಟ್​ ಪಂತ್​ ವಿಫಲವಾದ್ರೂ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪಂತ್​ ಯುವ ಆಟಗಾರ, ಅವರಲ್ಲಿ ಸಾಕಷ್ಟು ಸಾಮರ್ಥ್ಯವಿದೆ. ಅವರ ಪ್ರತಿಭೆಯನ್ನು ಯಾರೂ ಪ್ರಶ್ನಿಸಲಾರರರು. ಕಳೆದ ವರ್ಷ ಅವರು ಫಾರ್ಮ್​ನಲ್ಲಿರಲಿಲ್ಲ.

ಉತ್ತಮ ಪ್ರದರ್ಶನವನ್ನೂ ತೋರಲು ಅವರಿಂದ ಸಾಧ್ಯವಾಗಲಿಲ್ಲ. ಆದರೀಗ ತಂಡ ನಿರ್ವಹಣಾ ಮಂಡಳಿ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ. ಯಾಕೆಂದರೆ, ಅವರೊಬ್ಬ ವಿಶೇಷ ಆಟಗಾರ ಎಂದು ನಾವು ನಂಬಿದ್ದೇವೆ. ಅವರು ಭವಿಷ್ಯದಲ್ಲಿ ಭಾರತ ತಂಡವನ್ನು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಧ್ಯಮ ಕ್ರಮಾಂದ ಬ್ಯಾಟಿಂಗ್​ ಬಗ್ಗೆ ಮಾತನಾಡಿರುವ ಅವರು, ಮುಂಬೈನ ಯುವ ಆಟಗಾರ ಶ್ರೇಯಸ್​ ಅಯ್ಯರ್ ಭಾರತ ತಂಡದ ಕಳೆದ ನಾಲ್ಕು ವರ್ಷಗಳಿಂದ ಬಗೆಹರಿಯದ ಸಮಸ್ಯೆಯಾಗಿದ್ದ 4ನೇ ಕ್ರಮಾಂಕವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಬಗೆಹರಿಸಿದ್ದಾರೆ.

ಇನ್ಮುಂದೆ ನಾಲ್ಕನೇ ಕ್ರಮಾಂಕದ ಬಗ್ಗೆ ಯಾವುದೇ ಪ್ರಶ್ನೆಗಳು ಉದ್ಭವಿಸುವುದಿಲ್ಲ ಎಂದು ನಾವು ಭಾವಿಸಿದ್ದೇವೆ. ಜೊತೆಗೆ ರಾಹುಲ್​ ಕೂಡ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಬಲ್ಲವರಾಗಿರುವುದರಿಂದ ನಮ್ಮ ತಂಡಕ್ಕೆ ಅಗತ್ಯವಾಗಿರುವುದೆಲ್ಲ ದೊರೆತಂತಾಗಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.