ಹೈದರಾಬಾದ್ : ತವರಿನಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಸರಣಿಗೆ 18 ಸದಸ್ಯರ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ ಎಂದು ಪ್ರಸಿದ್ಧ ಕ್ರೀಡಾ ವೆಬ್ಸೈಟ್ ಆದ ಇಎಸ್ಪಿಎನ್ ವರದಿ ಮಾಡಿದೆ.
ಈ ಸರಣಿಗೆ ಇತ್ತೀಚೆಗೆ ತಂದೆಯನ್ನು ಕಳೆದುಕೊಂಡಿರುವ ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಜೊತೆಗೆ ಎಡಗೈ ಸ್ಪಿನ್ನರ್ ಅಕ್ಸರ್ ಪಟೇಲ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ, ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಟಿ.ನಟರಾಜನ್, ನವದೀಪ್ ಸೈನಿ ಹಾಗೂ ಆರಂಭಿಕರಾಗಿ ವೈಫಲ್ಯ ಅನುಭವಿಸಿದ ಪೃಥ್ವಿ ಶಾ ಅವರನ್ನು ತಂಡದಿಂದ ಡ್ರಾಪ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಇಂಗ್ಲೆಂಡ್ ಸರಣಿಗೆ ವರ್ಚುವಲ್ ಸಭೆ ನಡೆಸಿ ಈ 18 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದಾರೆ. ಈ ಸಭೆಗೆ ಖಾಯಂ ನಾಯಕ ವಿರಾಟ್ ಕೊಹ್ಲಿ ಹಾಗೂ ಆಯ್ಕೆ ಸಮಿತಿಯ ಇತರೆ ಸದಸ್ಯರು ಹಾಜರಾಗಿದ್ದರು.
18 ಸದಸ್ಯರ ಭಾರತ ತಂಡ
ಆರಂಭಿಕರು : ರೋಹಿತ್ ಶರ್ಮಾ, ಶುಭಮನ್ ಗಿಲ್, ಮಯಾಂಕ್ ಅಗರ್ವಾಲ್
ಮಧ್ಯಮ ಕ್ರಮಾಂಕ : ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ, ಕೆ ಎಲ್ ರಾಹುಲ್(ಫಿಟ್ ಆದ್ರೆ ಮಾತ್ರ)
ಫಾಸ್ಟ್ ಬೌಲರ್ಸ್ : ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್
ಸ್ಪಿನ್ ಬೌಲರ್ : ಆರ್.ಅಶ್ವಿನ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್
ಸ್ಟ್ಯಾಂಡ್ ಬೈ ಆಟಗಾರರು : ಕೆ ಎಸ್ ಭರತ್(ವಿ.ಕೀ), ಅಭಿಮನ್ಯು ಈಶ್ವರನ್, ಶಹ್ಬಾಜ್ ನದೀಮ್, ರಾಹುಲ್ ಚಹಾರ್
ನೆಟ್ ಬೌಲರ್ಸ್ : ಅಂಕಿತ್ ರಜಪೂತ್, ಅವೇಶ್ ಖಾನ್, ಸಂದೀಪ್ ವಾರಿಯರ್, ಕೆ. ಗೌತಮ್, ಸೌರಭ್ ಕುಮಾರ್