ETV Bharat / sports

ಇಂಗ್ಲೆಂಡ್ v/s ಭಾರತ ODI : ಸಚಿನ್, ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ ಕಿಂಗ್‌ ಕೊಹ್ಲಿ - ಏಕದಿನ ಕ್ರಿಕೆಟ್​ನಲ್ಲಿ ನಾಯಕನಾಗಿ ಹೆಚ್ಚು ಶತಕ

ಇತ್ತೀಚೆಗೆ ಕೊನೆಗೊಂಡ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 3 ಅರ್ಧಶತಕ ಸಹಿತ 231 ರನ್​ಗಳಿಸಿದ್ದರು. ಟಿ20 ಸರಣಿಯಲ್ಲಿ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್, ನಾಯಕ ಎಂಬ ದಾಖಲೆಗೂ ಪಾತ್ರರಾಗಿರುವ ಕೊಹ್ಲಿಯಿಂದ ಏಕದಿನ ಸರಣಿಯಲ್ಲಿ ಶತಕ ನಿರೀಕ್ಷಿಸಬಹುದಾಗಿದೆ..

ವಿರಾಟ್ ಕೊಹ್ಲಿ ದಾಖಲೆ
ವಿರಾಟ್ ಕೊಹ್ಲಿ ದಾಖಲೆ
author img

By

Published : Mar 22, 2021, 9:05 PM IST

ಪುಣೆ : ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಸಚಿನ್ ತೆಂಡೂಲ್ಕರ್ ಮತ್ತು ರಿಕಿ ಪಾಂಟಿಂಗ್​ ಹೆಸರಿನಲ್ಲಿರುವ ಮಹತ್ವದ ದಾಖಲೆಗಳನ್ನು ಮುರಿಯಲಿದ್ದಾರೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರದಿಂದ ನಡೆಯಲಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಒಂದು ಶತಕ ಸಿಡಿಸಿದರೆ ಕೊಹ್ಲಿ(19) ತವರಿನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ಸಚಿನ್​ ಜತೆಗೆ ಹಂಚಿಕೊಳ್ಳಲಿದ್ದಾರೆ. ಕ್ರಿಕೆಟ್​ ದಂತಕತೆ ಸಚಿನ್ ಭಾರತದಲ್ಲಿ ಏಕದಿನ ಮಾದರಿಯಲ್ಲಿ 20 ಶತಕ ದಾಖಲಿಸಿದ್ದಾರೆ.

ಇದಲ್ಲದೆ ನಾಯಕನಾಗಿಯೂ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೆಚ್ಚು ಶತಕ ಸಿಡಿಸಿದ ದಾಖಲೆಗೆ ಪಾತ್ರರಾಗಲಿದ್ದಾರೆ. ಪ್ರಸ್ತುತ ಕೊಹ್ಲಿ ಮೂರು ಮಾದರಿಯಲ್ಲಿ 71 ಶತಕ ಸಿಡಿಸಿದ್ದಾರೆ. ನಾಯಕನಾಗಿ 41 ಶತಕ ಸಿಡಿಸಿರುವ ಅವರು, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಜತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ರೋಹಿತ್ ಜತೆಗಾರ ಯಾರೆಂದು ಖಚಿತಪಡಿಸಿದ ಕೊಹ್ಲಿ!

ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದರೆ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ಶತಕ ಸಿಡಿಸಿದ ನಾಯಕ ಎಂಬ ದಾಖಲೆಯನ್ನು ರಿಕಿ ಪಾಂಟಿಂಗ್ ಜೊತೆ ಹಂಚಿಕೊಳ್ಳಲಿದ್ದಾರೆ. ಕೊಹ್ಲಿ ಕೊನೆಯ ಬಾರಿ ಶತಕ ಸಿಡಿಸಿ ಒಂದು ವರ್ಷ 122 ದಿನಗಳಾಗಿವೆ. ಅವರು 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಡೇ ಅಂಡ್ ನೈಟ್​ ಪಂದ್ಯದಲ್ಲಿ ಕೊನೆಯ ಅಂತಾರಾಷ್ಟ್ರೀಯ ಶಕತ ಹಾಗೂ ಆಸ್ಟ್ರೇಲಿಯಾ ವಿರುದ್ಧ 2019ರ ಮಾರ್ಚ್​ 8ರಂದು ಕೊನೆಯ ಏಕದಿನ ಶತಕ ಸಿಡಿಸಿದ್ದರು.

ಇತ್ತೀಚೆಗೆ ಕೊನೆಗೊಂಡ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 3 ಅರ್ಧಶತಕ ಸಹಿತ 231 ರನ್​ಗಳಿಸಿದ್ದರು. ಟಿ20 ಸರಣಿಯಲ್ಲಿ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್, ನಾಯಕ ಎಂಬ ದಾಖಲೆಗೂ ಪಾತ್ರರಾಗಿರುವ ಕೊಹ್ಲಿಯಿಂದ ಏಕದಿನ ಸರಣಿಯಲ್ಲಿ ಶತಕ ನಿರೀಕ್ಷಿಸಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.