ಚೆನ್ನೈ: ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಇಲ್ಲಿನ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟದಲ್ಲೂ ಇಂಗ್ಲೆಂಡ್ ಪಾರಮ್ಯ ಮುಂದುವರೆದಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಆಂಗ್ಲರ ಪಡೆ ಬೃಹತ್ ರನ್ ಕಲೆ ಹಾಕುವ ಮುನ್ಸೂಚನೆ ನೀಡಿದೆ.
ನಿನ್ನೆ ಮೂರು ವಿಕೆಟ್ನಷ್ಟಕ್ಕೆ 263ರನ್ಗಳಿಕೆ ಮಾಡಿದ್ದ ಇಂಗ್ಲೆಂಡ್ ಇದು ಕೂಡ ಉತ್ತಮ ಬ್ಯಾಟಿಂಗ್ ಮುಂದುವರೆಸಿದೆ. ತಂಡದ ಕ್ಯಾಪ್ಟನ್ ಜೋ ರೂಟ್ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದು, ಈಗಾಗಲೇ 150ರನ್ಗಳಿಕೆ ಮಾಡಿದ್ದಾರೆ. ಅವರಿಗೆ ಉತ್ತಮ ಸಾಥ್ ನೀಡಿರುವ ಆಲ್ರೌಂಡರ್ ಬೆನ್ ಸ್ಟೋಕ್ಸ್ 50ರನ್ಗಳಿಕೆ ಮಾಡಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಈ ಮೂಲಕ ಮೊದಲ ಇನ್ನಿಂಗ್ಸ್ನಲ್ಲೇ ದೊಡ್ಡ ಮೊತ್ತ ಕಲೆಹಾಕುವ ಮುನ್ಸೂಚನೆ ನೀಡಿದೆ.
-
Ben Stokes brings up his 23rd Test fifty 👏
— ICC (@ICC) February 6, 2021 " class="align-text-top noRightClick twitterSection" data="
England are 336/3. How many more runs can they add in this session?#INDvENG | https://t.co/gnj5x4GOos pic.twitter.com/Ux0iRHvFDB
">Ben Stokes brings up his 23rd Test fifty 👏
— ICC (@ICC) February 6, 2021
England are 336/3. How many more runs can they add in this session?#INDvENG | https://t.co/gnj5x4GOos pic.twitter.com/Ux0iRHvFDBBen Stokes brings up his 23rd Test fifty 👏
— ICC (@ICC) February 6, 2021
England are 336/3. How many more runs can they add in this session?#INDvENG | https://t.co/gnj5x4GOos pic.twitter.com/Ux0iRHvFDB
ಓದಿ: ಗೂಗಲ್ ಮಹಾ ಎಡವಟ್ಟು.. ರವಿಶಾಸ್ತ್ರಿ ಈಗ ಜಗತ್ತಿನ ಹಿರಿಯ ವ್ಯಕ್ತಿ!
ಇಂಗ್ಲೆಂಡ್ ಇಲ್ಲಿಯವರೆಗೆ ಆಡಿರುವ 115 ಓವರ್ಗಳಲ್ಲಿ 3ವಿಕೆಟ್ನಷ್ಟಕ್ಕೆ 339ರನ್ಗಳಿಕೆ ಮಾಡಿದ್ದು, ಮತ್ತಷ್ಟು ರನ್ಗಳಿಕೆ ಮಾಡುವ ಉದ್ದೇಶದಿಂದ ಸ್ಫೋಟಕ ಬ್ಯಾಟಿಂಗ್ ಮೊರೆ ಹೋಗಿದೆ.
ಎರಡನೇ ದಿನದಾಟದ ಆರಂಭದಲ್ಲಿ ಇಂಗ್ಲೆಂಡ್ 60ರನ್ಗಳ ಜೊತೆಯಾಟ ಆಡಿರುವ ಸ್ಟೋಕ್ಸ್ ಹಾಗೂ ರೂಟ್ ಜೋಡಿ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದಾರೆ. ವಿಕೆಟ್ ಪಡೆದುಕೊಳ್ಳಲು ಟೀಂ ಇಂಡಿಯಾ ಬೌಲರ್ ಹರಸಾಹಸ ಪಡುತ್ತಿದ್ದು, ಯಾವುದೇ ಬೌಲರ್ ಮಾರಕವಾಗಿ ಪರಣಮಿಸಿಲ್ಲ.