ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದ ವೇಳೆ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ವೇಗಿ ಮಾರ್ಕ್ವುಡ್ ಬೌಲಿಂಗ್ನಲ್ಲಿ ಮೊದಲ ಬೌಂಡರಿ ಬಾರಿಸಿದಾಗ ಚೆಂಡಿನ ಲೆದರ್ ಹೊರಬಂದಿದ್ದು, ಕೇವಲ 16 ಎಸೆತಗಳಲ್ಲೇ ಚೆಂಡನ್ನು ಬದಲಾಯಿಸಿದ ಪ್ರಸಂಗ ನಡೆದಿದೆ.
ಪಂದ್ಯ 2.4 ಓವರ್ನಲ್ಲಿ ಈ ಘಟನೆ ನಡೆದಿದೆ. ಆ ಸಮಯದಲ್ಲಿ ಭಾರತ ಯಾವುದೆ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿತ್ತು. ಮಾರ್ಕ್ವುಡ್ ಎಸೆದ ಚೆಂಡನ್ನು ಧವನ್ ಜೋರಾಗಿ ಬೌಂಡರಿ ಬಾರಿಸಿದಾಗ ಚೆಂಡು ಬೌಂಡರಿ ಲೈನ್ನಲ್ಲಿ ಯಾವುದಾದರು ಬೋರ್ಡ್ಗೆ ಬಡಿದೋ ಅಥವಾ ಮಾರ್ಕ್ವುಡ್ 145.1 ಕಿ.ಮೀ. ವೇಗದಲ್ಲಿ ಚೆಂಡನ್ನು ಪಿಚ್ನಲ್ಲಿ ಎಸೆದಾಗಲೋ ಚೆಂಡಿನ ಲೆದರ್ ಹೊರಬಂದು ಸಣ್ಣ ರಂಧ್ರವಾಗಿದೆ. ಅಥವಾ ಇವರಿಬ್ಬರ ವೇಗಕ್ಕೆ ಚೆಂಡು ಒಡೆದಿರಬಹುದು ಎನ್ನಲಾಗುತ್ತಿದೆ.
ಇದನ್ನು ಓದಿ:ಇಂಗ್ಲೆಂಡ್ v/s ಭಾರತ ODI : ಸಚಿನ್, ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ ಕಿಂಗ್ ಕೊಹ್ಲಿ
ತಕ್ಷಣ ಅಂಪೈರ್ಗಳು ಹೊಸ ಚೆಂಡನ್ನು ಬದಲಾಯಿಸಿದ್ದಾರೆ. ಪಂದ್ಯದ ಮೊದಲ ಓವರ್ನಲ್ಲೇ ಮಾರ್ಕ್ವುಡ್ 143ರ ವೇಗದಲ್ಲಿ 2 ಬಾರಿ ಚೆಂಡನ್ನು ಎಸೆದಿದ್ದರು. ಏಕದಿನ ಮತ್ತು ಟಿ-20 ಕ್ರಿಕೆಟ್ನಲ್ಲಿ ಎಸ್ಜಿ ಚೆಂಡನ್ನು ಬಳಸಲಾಗುತ್ತಿದೆ. ಏಕದಿನ ಪಂದ್ಯದ್ಲಲಿ ಒಂದು ಇನ್ನಿಂಗ್ಸ್ಗೆ 2 ಹೊಸ ಚೆಂಡುಗಳನ್ನು ಬಳಸಲು ಅವಕಾಶವಿದೆ.