ಸಿಡ್ನಿ: ಶನಿವಾರ 3ನೇ ಟೆಸ್ಟ್ ವೇಳೆ ಹೆಬ್ಬೆರಳು ಗಾಯಕ್ಕೆ ತುತ್ತಾಗಿದ್ದ ಭಾರತ ತಂಡದ ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾಗೆ ಹೆಬ್ಬರಳಿನ ಮೂಳೆ ಮುರಿದಿರುವುದು ಖಚಿತವಾಗಿದ್ದು, ಬ್ರಿಸ್ಬೇನ್ನಲ್ಲಿ ನಡೆಯಲಿರುವ 4ನೇ ಟೆಸ್ಟ್ನಿಂದ ಹೊರಬಿದ್ದಿದ್ದಾರೆ.
ಸಿಡ್ನಿ ಟೆಸ್ಟ್ನಲ್ಲಿ ಮೂರನೇ ದಿನ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಚೆಂಡು ಹೆಬ್ಬರಳಿಗೆ ಬಿದ್ದಿತ್ತು. ತಕ್ಷಣ ಫಿಸಿಯೋ ಬಂದು ಚಿಕಿತ್ಸೆ ನೀಡಿದ ನಂತರ ಬ್ಯಾಟಿಂಗ್ ಮುಂದುವರಿಸಿ ಅಜೇಯ 28 ರನ್ಗಳಿಸಿದ್ದರು. ಇನ್ನಿಂಗ್ಸ್ ಮುಕ್ತಾಯದ ನಂತರ ಸ್ಕ್ಯಾನ್ ಮಾಡಿಸಿದ್ದು, ಅವರ ಬೆರಳಿನ ಮೂಳೆ ಜರುಗಿದ್ದು, ಮುರಿದಿದೆ ಎಂದು ತಿಳಿದು ಬಂದಿದೆ.
ರವೀಂದ್ರ ಜಡೇಜಾ ಅವರಿಗೆ ಎಡಗೈ ಹೆಬ್ಬೆರಳಿನ ಮೂಳೆ ಮುರಿದಿದ್ದು, ಅವರಿಗೆ ಗ್ಲೌಸ್ ತೊಡುವುದು ಮತ್ತು ಬ್ಯಾಟ್ ಹಿಡಿಯುವುದು ತುಂಬಾ ಕಷ್ಟವಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ಶನಿವಾರ ಸ್ಕ್ಯಾನ್ ವರದಿ ಬಂದ ನಂತರ ತಿಳಿಸಿದ್ದಾರೆ.
-
UPDATE - Ravindra Jadeja suffered a blow to his left thumb while batting. He has been taken for scans.#AUSvIND pic.twitter.com/DOG8SBXPue
— BCCI (@BCCI) January 9, 2021 " class="align-text-top noRightClick twitterSection" data="
">UPDATE - Ravindra Jadeja suffered a blow to his left thumb while batting. He has been taken for scans.#AUSvIND pic.twitter.com/DOG8SBXPue
— BCCI (@BCCI) January 9, 2021UPDATE - Ravindra Jadeja suffered a blow to his left thumb while batting. He has been taken for scans.#AUSvIND pic.twitter.com/DOG8SBXPue
— BCCI (@BCCI) January 9, 2021
ಜಡೇಜಾಗೆ ಕಡಿಮೆಯೆಂದೂ ಆರು ವಾರಗಳ ಕಾಲ ಮೈದಾನದಿಂದ ದೂರ ಉಳಿಯಲಿದ್ದಾರೆ. ಹಾಗಾಗಿ ಅವರು ಜನವರಿ 15ರಿಂದ ನಡೆಯುವ ಅಂತಿಮ ಟೆಸ್ಟ್ನಲ್ಲಿ ಹೊರಗುಳಿಯಬೇಕಾಗಿದೆ. ಆದರೆ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರ ಗಾಯ ಗಂಭೀರವಾಗಿಲ್ಲದ ಕಾರಣ ಅವರು 2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಬಹುದು ಎಂದು ತಿಳಿಸಿದ್ದಾರೆ.
-
Rishabh Pant was hit on the left elbow while batting in the second session on Saturday. He has been taken for scans. #AUSvIND pic.twitter.com/NrUPgjAp2c
— BCCI (@BCCI) January 9, 2021 " class="align-text-top noRightClick twitterSection" data="
">Rishabh Pant was hit on the left elbow while batting in the second session on Saturday. He has been taken for scans. #AUSvIND pic.twitter.com/NrUPgjAp2c
— BCCI (@BCCI) January 9, 2021Rishabh Pant was hit on the left elbow while batting in the second session on Saturday. He has been taken for scans. #AUSvIND pic.twitter.com/NrUPgjAp2c
— BCCI (@BCCI) January 9, 2021
ಪಂತ್ ಕೂಡ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ನಲ್ಲಿ ಮೊಣಕೈಗೆ ಚೆಂಡು ಬಡಿದು ಗಾಯಗೊಂಡಿದ್ದರು. ಅವರನ್ನು ಕೂಡ ಸ್ಕ್ಯಾನ್ಗೆ ಒಳಪಡಿಸಲಾಗಿತ್ತು.
ಇದನ್ನು ಓದಿ:ಪೂಜಾರ ವಿರುದ್ಧ ಸಾಧ್ಯವಾದಷ್ಟು ಕಠಿಣವಾಗಲು ಬಯಸಿದ್ದೇವೆ: ಪ್ಯಾಟ್ ಕಮಿನ್ಸ್