ಅಡಿಲೇಡ್ (ಆಸ್ಟ್ರೇಲಿಯಾ): ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತವು ಪೃಥ್ವಿ ಶಾ ಅವರಿಗಿಂತ ಫಾರ್ಮ್ನಲ್ಲಿದ್ದ ಶುಬ್ಮನ್ ಗಿಲ್‌ಗೆ ಅವಕಾಶ ನೀಡಬೇಕಿತ್ತು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಅಭಿಪ್ರಾಯಪಟ್ಟಿದ್ದಾರೆ.
ಅಭ್ಯಾಸ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಬಾರದಿತ್ತು ಎಂದು ಮೂಡಿ ಹೇಳಿದ್ದಾರೆ. ಮೊದಲ ಟೆಸ್ಟ್ ಪಂದ್ಯಕ್ಕೆ ಗಿಲ್ ಅವರನ್ನು ಆಯ್ಕೆ ಮಾಡದ ಕಾರಣ ಭಾರತೀಯ ಆಯ್ಕೆದಾರರು ವಿಫಲರಾಗಿದ್ದಾರೆ ಎಂದಿದ್ದಾರೆ.
"ಮೊದಲ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾ ಮಾತ್ರ ವಿಫಲರಾಗಿಲ್ಲ, ಆಯ್ಕೆದಾರರು ಕೂಡ ವಿಫಲರಾಗಿದ್ದಾರೆ. ಶುಬ್ಮನ್ ಗಿಲ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಬೇಕಿತ್ತು. ಅವರು ಉತ್ತಮ ಆಟಗಾರ, ಅತನಲ್ಲಿ ಸಾಕಷ್ಟು ಕೌಶಲ್ಯಗಳಿವೆ ಎಂದು ಹೇಳಿದ್ದಾರೆ.
ಓದಿ ಭಾರತಕ್ಕೆ ಗಂಭೀರ ಗಾಯ.. ಸರಣಿ ಕ್ಲೀನ್ ಸ್ವೀಪ್ಗೆ ಇದು ಉತ್ತಮ ಅವಕಾಶ : ಪಾಂಟಿಂಗ್
"ಪೃಥ್ವಿ ಶಾ ಉತ್ತಮ ಟೆಸ್ಟ್ ಕ್ರಿಕೆಟಿಗನಾಗಲು ಸಾಧ್ಯವಿಲ್ಲ ಎಂದು ನಾನು ಹೇಳುತ್ತಿಲ್ಲ. ಆತನಿಗೆ ಮುಂದೆ ಉಜ್ವಲ ಭವಿಷ್ಯವಿದೆ. ಸದ್ಯಕ್ಕೆ ಪೃಥ್ವಿ ಶಾ ಅವರ ತಪ್ಪೇನು ಇಲ್ಲ. ಆದರೆ ಅವರನ್ನು ಆಯ್ಕೆ ಮಾಡುವುದು ತಪ್ಪು" ಎಂದು ಟಾಮ್ ಮೂಡಿ ಹೇಳಿದ್ದಾರೆ.