ETV Bharat / sports

ಭಾರತ ತಂಡ ಗಬ್ಬಾದಲ್ಲಿ ಗೆದ್ದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿ : ಶೋಯಬ್ ಅಖ್ತರ್​

ಇಷ್ಟೊಂದು ಸಮಸ್ಯೆಯ ನಡುವೆಯೂ ಈ ಸರಣಿಯನ್ನು ಭಾರತ ಗೆದ್ದಿದ್ದೇ ಆದರೆ, ಅದೊಂದು ಅತ್ಯಂತ ದೊಡ್ಡ ಗೆಲುವಾಗಲಿದೆ. ನನ್ನ ಪ್ರಕಾರ, ಅದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿಜಯವಾಗಲಿದೆ..

ಶೋಯಬ್ ಅಖ್ತರ್​ ಮತ್ತು ಭಾರತ ತಂಡ
ಶೋಯಬ್ ಅಖ್ತರ್​ ಮತ್ತು ಭಾರತ ತಂಡ
author img

By

Published : Jan 13, 2021, 7:09 PM IST

ಲಾಹೋರ್ ​: 4 ಪಂದ್ಯಗಳ ಬಾರ್ಡರ್ ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ತಂಡ ತಲಾ ಒಂದೊಂದು ಪಂದ್ಯ ಜಯಿಸಿದ್ದರೆ, ಮತ್ತೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇದೀಗ ಗಬ್ಬಾದಲ್ಲಿ ಕೊನೆಯ ಪಂದ್ಯ ನಡೆಯಲಿದ್ದು, ಇಡೀ ಕ್ರಿಕೆಟ್​ ಜಗತ್ತೇ ಸರಣಿ ಯಾರ ಪಾಲಾಗಲಿದೆ ಎನ್ನುವುದನ್ನು ಎದುರು ನೋಡುತ್ತಿದೆ.

ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಸರಣಿ ವಿಶ್ಲೇಷಣೆ ಮಾಡಿರುವ ಪಾಕಿಸ್ತಾನದ ಮಾಜಿ ವೇಗಿ ಈ ಗಬ್ಬಾದಲ್ಲಿ ಭಾರತ ಗೆದ್ದರೆ ಇತಿಹಾಸ ನಿರ್ಮಾಣವಾಗಲಿದೆ. ಅದು ಅವರ ಸಾರ್ವಕಾಲಿಕ ಟೆಸ್ಟ್​ ಸರಣಿಯಾಗಿ ಉಳಿದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

"ಟೆಸ್ಟ್ ಸರಣಿಯ ಅಂತಿಮ ಘಟ್ಟದಲ್ಲಿದ್ದೇವೆ. ನನ್ನ ಪ್ರಕಾರ ಭಾರತ ಸರಣಿಯನ್ನು ಗೆಲ್ಲುವ ಆಲೋಚನೆಯಲ್ಲಿದೆ. ಆದರೂ ಕಳೆದ ಪಂದ್ಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಈಗಲೂ ಗಾಯದ ಸಮಸ್ಯೆಗಳಿವೆ. ಆದರೆ, ಭಾರತ ತಂಡದ ಬೆಂಚ್ ಸ್ಟ್ರೆಂತ್ ನೋಡಿದ್ರೆ ಸರಣಿ ಗೆಲ್ಲಬಹುದು ಎಂಬ ನಂಬಿಕೆ ಹುಟ್ಟುತ್ತದೆ. ಅವರು ಕೊನೆಯವರೆಗೂ ಪ್ರಯತ್ನವನ್ನು ಮಾಡಿದ್ರೆ ಸರಣಿಯನ್ನು ಗೆಲ್ಲಬಹುದು" ಎಂದು ಅಖ್ತರ್ ಹೇಳಿದ್ದಾರೆ.

"ಇಷ್ಟೊಂದು ಸಮಸ್ಯೆಯ ನಡುವೆಯೂ ಈ ಸರಣಿಯನ್ನು ಭಾರತ ಗೆದ್ದಿದ್ದೇ ಆದರೆ, ಅದೊಂದು ಅತ್ಯಂತ ದೊಡ್ಡ ಗೆಲುವಾಗಲಿದೆ. ನನ್ನ ಪ್ರಕಾರ, ಅದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿಜಯವಾಗಲಿದೆ " ಎಂದು ತಿಳಿಸಿದ್ದಾರೆ.

"ಈ ಎಲ್ಲ ಕ್ರೆಡಿಟ್ ಭಾರತ ತಂಡಕ್ಕೆ ಸಿಗಬೇಕು. ಯಾಕೆಂದರೆ ಅವರು ಬಹಳಷ್ಟು ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಸರಣಿಯಲ್ಲಿ ಇಡೀ ತಂಡ, ಸ್ಪಿನ್ನರ್‌ಗಳು, ವೇಗಿಗಳು ಹಾಗೂ ಬೂಮ್ರಾ ತನ್ನೆಲ್ಲಾ ಶಕ್ತಿಯನ್ನು ಧಾರೆಯೆರೆದು ಈಗ ಗಾಯಗೊಂಡಿದ್ದಾರೆ. ಆದರೂ ಅವರು ಸರಣಿ ಕೈತಪ್ಪಿ ಹೋಗದಂತೆ ನೋಡಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಭಾರತ ತಂಡ 2018-19ರ ಟೆಸ್ಟ್​ ಸರಣಿಯನ್ನ 2-1ರಲ್ಲಿ ಗೆದ್ದು ಬೀಗಿತ್ತು. ಕೊಹ್ಲಿ ಪಡೆ 71 ವರ್ಷಗಳ ಟೆಸ್ಟ್​ ಇತಿಹಾಸದಲ್ಲಿ ಮೊದಲ ಸರಣಿ ಜಯಿಸಿದ ದಾಖಲೆಗೆ ಪಾತ್ರವಾಗಿತ್ತು. ಅಲ್ಲದೆ ಕಾಂಗರೂ ನಾಡಿನಲ್ಲಿ ಟೆಸ್ಟ್​ ಸರಣಿ ಗೆದ್ದ ಮೊದಲ ಏಷ್ಯಾ ತಂಡ ಎಂಬ ಶ್ರೇಯಕ್ಕೂ ಪಾತ್ರವಾಗಿತ್ತು.

ಇದನ್ನು ಓದಿ:ಭಾರತೀಯರ ಸರಣಿ ಗೆಲುವಿನ ಹಸಿವಿನ ಮುಂದೆ ಗಬ್ಬಾದಲ್ಲಿ ನಮ್ಮ ದಾಖಲೆಗಳು ಹೆಚ್ಚು ಅನುಕೂಲಕರವಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.