ETV Bharat / sports

ಅಂಡರ್​ 19​ ವಿಶ್ವಕಪ್​: ಕ್ರಿಕೆಟ್​ ಶಿಶು ಜಪಾನ್​ ವಿರುದ್ಧ  ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ

4 ಬಾರಿ ಅಂಡರ್​ 19 ವಿಶ್ವಕಪ್​ ಎತ್ತಿಹಿಡಿದಿರುವ ಭಾರತ ತಂಡ ಈ ಬಾರಿಯೂ ಕಪ್​ ಎತ್ತಿಹಿಡಿಯುವ ನೆಚ್ಚಿನ ತಂಡವಾಗಿದ್ದು, ಇಂದಿನ ಜಪಾನ್​ ವಿರುದ್ಧದ ಪಂದ್ಯದಲ್ಲಿ ಏಕಪಕ್ಷೀಯ ಜಯ ಸಾಧಿಸುವ ನಿರೀಕ್ಷೆಯಲ್ಲಿ ಪ್ರಿಯಂ ಗರ್ಗ್​ ಪಡೆಯಿದೆ.

ICC U-19 World Cup
ICC U-19 World Cup
author img

By

Published : Jan 21, 2020, 12:23 PM IST

Updated : Jan 21, 2020, 1:32 PM IST

ಬ್ಲೂಮ್‌ಫಾಂಟೈನ್: ಹಾಲಿ ಅಂಡರ್​ 19 ವಿಶ್ವ ಚಾಂಪಿಯನ್​ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 90 ರನ್​ಗಳಿಂದ ಮಣಿಸಿ ಶುಭಾರಂಭ ಮಾಡಿದ್ದು, ಇಂದು ಎರಡನೇ ಪಂದ್ಯದಲ್ಲಿ ಇದೇ ವರ್ಷ ವಿಶ್ವಕಪ್​ಗೆ ಅರ್ಹತೆ ಪಡೆದಿರುವ ಜಪಾನ್​ ವಿರುದ್ಧ ಆಡುತ್ತಿದ್ದು ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ.

4 ಬಾರಿ ಅಂಡರ್​ 19 ವಿಶ್ವಕಪ್​ ಎತ್ತಿಹಿಡಿದಿರುವ ಭಾರತ ತಂಡ ಈ ಬಾರಿಯೂ ಕಪ್​ ಎತ್ತಿಹಿಡಿಯುವ ನೆಚ್ಚಿನ ತಂಡವಾಗಿದ್ದು, ಇಂದಿನ ಜಪಾನ್​ ವಿರುದ್ಧದ ಪಂದ್ಯದಲ್ಲಿ ಏಕಪಕ್ಷೀಯ ಜಯ ಸಾಧಿಸುವ ನಿರೀಕ್ಷೆಯಲ್ಲಿ ಪ್ರಿಯಂ ಗರ್ಗ್​ ಪಡೆಯಿದೆ.

ICC U-19 World Cup
ಜಪಾನ್​

ನಾಯಕ ಪ್ರಿಯಂ ಗರ್ಗ್​ ಸೇರಿದಂತೆ ಆರಂಭಿಕ ಬ್ಯಾಟ್ಸ್​ಮನ್​ ಯಶಸ್ವಿ ಜೈಸ್ವಾಲ್​, ಧ್ರುವ್​ ಜುರೆಲ್​ ಆಲ್​ರೌಂಡರ್​ ತಿಲಕ್​ ವರ್ಮಾ ಬ್ಯಾಟಿಂಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಸಿದ್ದೇಶ್​ ವೀರ್​ ಬ್ಯಾಟಿಂಗ್​ ಜೊತೆಗೆ ಬೌಲಿಂಗ್​ನಲ್ಲೂ ಉತ್ತಮ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ತಂಡಕ್ಕೆ ಬಲ ತಂದಿದೆ. ಇನ್ನು ಆಕಾಶ್​ ಸಿಂಗ್​, ರವಿ ಬಿಶೋನಿ, ಕಾರ್ತಿಕ್​ ತ್ಯಾಗಿ ಅವರ ಬೌಲಿಂಗ್​ ಎದುರಿಸುವುದು ಜಪಾನ್​ಗೆ ಸವಾಲಿನ ಕೆಲಸವಾಗಲಿದೆ.

ಇನ್ನು ಜಪಾನ್​ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಎದುರಿಸಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದಾಗಿದ್ದರಿಂದ ಒಂದು ಅಂಕ ಪಡೆದಿದೆ. ಆ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ತಂಡ 28 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 195ರ ರನ್ ​ಗಳಿಸಿತ್ತು.

ಜಪಾನ್​ ತಂಡಕ್ಕೆ ಈ ಪಂದ್ಯದಲ್ಲಿ ಭಾರತ ತಂಡದ ಯುವ ಆಟಗಾರರಿಂದ ಕ್ರಿಕೆಟ್​ ಆಟದ ಬಗ್ಗೆ ತಿಳಿದುಕೊಳ್ಳಲು ಉತ್ತಮ ಅವಕಾಶವಿದೆ. ಇದ್ದದ್ದರಲ್ಲಿ ಬೌಲರ್​ಗಳಾದ ಯುಗಂಧರ್​ ರೆಥಾರೆಕರ್​ ಹಾಗೂ ನೀಲ್​ ಡೇಟ್​ ಪಂದ್ಯದ ಆಕರ್ಷಣೆಯಾಗಿದ್ದಾರೆ.

Intro:Body:Conclusion:
Last Updated : Jan 21, 2020, 1:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.