ETV Bharat / sports

ಐಸಿಸಿ ಟಿ20 ಬ್ಯಾಟಿಂಗ್​ ರ‍್ಯಾಂಕಿಂಗ್​: ​ ಟಾಪ್​ 10ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡ ರಾಹುಲ್​- ಕೊಹ್ಲಿ - ಕೊಹ್ಲಿ ಬ್ಯಾಟಿಂಗ್​ ರ‍್ಯಾಂಕ್​

ಶನಿವಾರ ನೂತನ ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕ ಬಿಡುಗಡೆಯಾಗಿದ್ದು, ಆರಂಭಿಕ ಬ್ಯಾಟ್ಸ್​ಮನ್​ ಕೆಎಲ್ ರಾಹುಲ್ 6 ನೇ ಸ್ಥಾನದ ಹಾಗೂ ಟೀಮ್​ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಂದು ಸ್ಥಾನ  ಏರಿಕೆ ಕಂಡಿದ್ದಾರೆ. ಆದರೆ ರೋಹಿತ್​ ಶರ್ಮಾ ಟಾಪ್​ 10 ನಿಂದ ಹೊರಬಿದ್ದಾರೆ

ICC T20I Rankings
ICC T20I Rankings
author img

By

Published : Jan 11, 2020, 7:02 PM IST

ದುಬೈ: ಶ್ರೀಲಂಕಾ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಭಾರತ ತಂಡದ ರಾಹುಲ್​ ಹಾಗೂ ನಾಯಕ ಕೊಹ್ಲಿ ಟಾಪ್​ 10ನಲ್ಲಿ ತಮ್ಮ ಸ್ಥಾನವನ್ನು ಬದ್ರಪಡಿಸಿಕೊಂಡಿದ್ದಾರೆ.

ಶನಿವಾರ ನೂತನ ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕ ಬಿಡುಗಡೆಯಾಗಿದ್ದು, ಆರಂಭಿಕ ಬ್ಯಾಟ್ಸ್​ಮನ್​ ಕೆಎಲ್ ರಾಹುಲ್ 6 ನೇ ಸ್ಥಾನದ ಹಾಗೂ ಟೀಮ್​ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ಆದರೆ ರೋಹಿತ್​ ಶರ್ಮಾ ಟಾಪ್​ 10 ನಿಂದ ಹೊರಬಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರಾಹುಲ್​ ಎರಡು ಪಂದ್ಯಗಳಿಂದ 99 ರನ್​ಗಳಿಸಿದ್ದರು. ಈ ಮೂಲಕ 26 ರೇಟಿಂಗ್​ ಅಂಕಗಳನ್ನು ವೃದ್ಧಿಸಿಕೊಂಡಿದ್ದಾರೆ.

ಇನ್ನು ಟೆಸ್ಟ್ ಹಾಗೂ ಏಕದಿನ ಬ್ಯಾಟಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್​ ಟಿ20ಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಟಾಪ್​ 10ರಲ್ಲಿರುವ ಭಾರತದ ಏಕೈಕ ಕ್ರಿಕೆಟಿಗನಾಗಿದ್ದಾರೆ. ಇನ್ನು ರೋಹಿತ್​ ಶರ್ಮಾ 13 ಹಾಗೂ ಶಿಖರ್ ಧವನ್ 15ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್​ ಅಜಮ್​ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ.

ಆದರೆ ಬೌಲರ್​ಗಳಲ್ಲಿ ಟಾಪ್​ 10- ರಲ್ಲಿ ಕಾಣಿಸಿಕೊಳ್ಳುವಲ್ಲಿ ಭಾರತೀಯರು ವಿಫಲರಾಗಿದ್ದಾರೆ. 14ನೇ ಸ್ಥಾನದಲ್ಲಿರುವ ವಾಷಿಂಗ್ಟನ್​ ಸುಂದರ್​ ಮಾತ್ರ ಟಾಪ್​ 20 ರಲ್ಲಿರುವ ಏಕೈಕ ಭಾರತೀಯ ಬೌಲರ್​ ಆಗಿದ್ದಾರೆ.

ನವದೀಪ್ ಸೈನಿ 146 ಏರಿಕೆ ಕಂಡು 98ನೇ ಸ್ಥಾನಕ್ಕೆ ಜಿಗಿದರೆ , ಜಸ್ಪ್ರೀತ್ ಬುಮ್ರಾ 8ನೇ ಸ್ಥಾನ ಮಲೇರಿ 39ನೇ ಸ್ಥಾನಕ್ಕೆ ಪಡೆದಿದ್ದಾರೆ. ಕುಲ್ದೀಪ್​ 31, ಭುವನೇಶ್ವರ್​ 37ನೇ, ಚಹಲ್​ 41 ಸ್ಥಾನದಲ್ಲಿದ್ದಾರೆ. ಅಫ್ಘಾನಿಸ್ತಾನ ಬೌಲರ್​ ರಶೀದ್​ ಹಾಗೂ ಮುಜೀಬ್​ ಟಾಪ್​ ಎರಡರಲ್ಲಿ ಮುಂದುವರಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.