ETV Bharat / sports

ಐಸಿಸಿ ಟಿ20 ರ್‍ಯಾಂಕಿಂಗ್​ನಲ್ಲಿ ರಾಹುಲ್​, ಕೊಹ್ಲಿ ಜಿಗಿತ: ಟಾಪ್​ 10ನಲ್ಲಿ ಮೂವರು ಭಾರತೀಯರು

ವಿಂಡೀಸ್​ ವಿರುದ್ಧ ಮೊದಲ ಪಂದ್ಯದಲ್ಲಿ 94 ಹಾಗೂ ಕೊನೆಯ ಪಂದ್ಯದಲ್ಲಿ 70 ರನ್​ಗಳಿಸಿದ ವಿರಾಟ್​ ಕೊಹ್ಲಿ 15ನೇ ಸ್ಥಾನದಿಂದ 10 ನೇ ಸ್ಥಾನಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.

ICC T20 Batting Rankings
ICC T20 Batting Rankings
author img

By

Published : Dec 12, 2019, 2:18 PM IST

ಮುಂಬೈ: ವೆಸ್ಟ್​ ಇಂಡೀಸ್​ ವಿರುದ್ಧ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರಿದ ವಿರಾಟ್​ ಕೊಹ್ಲಿ ಬಹುದಿನಗಳ ಬಳಿಕ ಟಾಪ್​ 10ಗೆ ಮರುಪ್ರವೇಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವಿಂಡೀಸ್​ ವಿರುದ್ಧ ಮೊದಲ ಪಂದ್ಯದಲ್ಲಿ 94 ಹಾಗೂ ಕೊನೆಯ ಪಂದ್ಯದಲ್ಲಿ 70 ರನ್​ಗಳಿಸಿದ ವಿರಾಟ್​ ಕೊಹ್ಲಿ 15ನೇ ಸ್ಥಾನದಿಂದ 10 ನೇ ಸ್ಥಾನಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.

ಈಗಾಗಲೆ ಟೆಸ್ಟ್​ ರ್‍ಯಾಂಕಿಂಗ್​ನಲ್ಲಿ ಹಾಗೂ ಏಕದಿನ ರ್‍ಯಾಂಕಿಂಗ್​ನಲ್ಲಿ ಮೊದಲ ಸ್ಥಾನ ಪಡೆದಿರುವ ರನ್​ಮಷಿನ್​ ಕೊಹ್ಲಿ ಇದೀಗ ಟಿ20 ಕ್ರಿಕೆಟ್​ನಲ್ಲೂ ತಮ್ಮ ಪಾರುಪತ್ಯ ಮುಂದುವರಿಸಿದ್ದಾರೆ. ಇವರ ಜೊತೆಗೆ ಬಾಂಗ್ಲಾ ಹಾಗೂ ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ ಕನ್ನಡಿಗ ರಾಹುಲ್​ ಕೂಡ 9 ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಇನ್ನು ವಿಂಡೀಸ್​ ವಿರುದ್ಧ ಕೊನೆಯ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ಹೊರತಾಗಿಯೂ ಮೊದಲೆರಡು ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್​ ತೋರಿದ ರೋಹಿತ್​ 8ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಕುಸಿದರು ಟಾಪ್​10ನಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನದ ಬಾಬರ್​ ಅಜಂ(879) ಮೊದಲ ಸ್ಥಾನದಲ್ಲಿ ಮುಂದುವರಿದರೆ, ಆಸೀಸ್​ ನಾಯಕ ಆ್ಯರೋನ್​ ಫಿಂಚ್​(810) 2ನೇ ಸ್ಥಾನದಲ್ಲಿದ್ದಾರೆ. ಡೇವಿಡ್​ ಮಲನ್​, ಕಾಲಿನ್​ ಮನ್ರೊ, ಗ್ಲೇನ್​ ಮ್ಯಾಕ್ಸ್​ವೆಲ್​ ನಂತರದ ಸ್ಥಾನದಲ್ಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.