ದುಬೈ: ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಯಶಸ್ವಿಯಾಗಿ ಕಮ್ಬ್ಯಾಕ್ ಮಾಡಿದ್ದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಐಸಿಸಿ ಏಕದಿನ ಶ್ರೇಯಾಂಕದಲ್ಲಿ 9 ಸ್ಥಾನಗಳ ಏರಿಕೆ ಕಂಡು 11 ರ್‍ಯಾಂಕ್ ಪಡೆದಿದ್ದಾರೆ. ಇದು 2017ರ ನಂತರ ಅವರು ಪಡೆದ ಅತ್ಯುತ್ತಮ ಶ್ರೇಯಾಂಕವಾಗಿದೆ.
ಕೊನೆಯ ಏಕದಿನ ಪಂದ್ಯದಲ್ಲಿ 3 ವಿಕೆಟ್ ಸೇರಿದಂತೆ ಭುವನೇಶ್ವರ್ ಕುಮಾರ್ ಸರಣಿಯಲ್ಲಿ 6 ವಿಕೆಟ್ ಪಡೆದಿದ್ದರು. 8 ವಿಕೆಟ್ ಪಡೆದಿದ್ದ ಶಾರ್ದುಲ್ ಠಾಕೂರ್ 93ರಿಂದ 80ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
-
Matt Henry was the big mover in the @MRFWorldwide ICC Rankings for Men's ODI Bowlers!
— ICC (@ICC) March 31, 2021 " class="align-text-top noRightClick twitterSection" data="
The @BLACKCAPS pacer shot up five places to No.3 🔥
Full list: https://t.co/SwyMM5HskB pic.twitter.com/jbziVYWKPr
">Matt Henry was the big mover in the @MRFWorldwide ICC Rankings for Men's ODI Bowlers!
— ICC (@ICC) March 31, 2021
The @BLACKCAPS pacer shot up five places to No.3 🔥
Full list: https://t.co/SwyMM5HskB pic.twitter.com/jbziVYWKPrMatt Henry was the big mover in the @MRFWorldwide ICC Rankings for Men's ODI Bowlers!
— ICC (@ICC) March 31, 2021
The @BLACKCAPS pacer shot up five places to No.3 🔥
Full list: https://t.co/SwyMM5HskB pic.twitter.com/jbziVYWKPr
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯದಲ್ಲಿ 6 ವಿಕೆಟ್ ಪಡೆದಿದ್ದ ಮ್ಯಾಟ್ ಹೆನ್ರಿ 5 ಸ್ಥಾನಗಳ ಏರಿಕೆ ಕಂಡಿದ್ದು, ಭಾರತದ ಬುಮ್ರಾರನ್ನು ಹಿಂದಿಕ್ಕಿ 3ನೇ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಕಿವೀಸ್ನವರೇ ಆದ ಬೌಲ್ಟ್, 2ರಲ್ಲಿ ಅಫ್ಘಾನಿಸ್ತಾನದ ಮುಜೀಬ್ ಇದ್ದಾರೆ. ವಿರಾಟ್ ಕೊಹ್ಲಿ, ಬಾಬರ್ ಅಜಮ್ ಮತ್ತು ರೋಹಿತ್ ಶರ್ಮಾ ಮೊದಲ 3 ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕನ್ನಡಿಗ ರಾಹುಲ್ 31ರಿಂದ 27, ಹಾರ್ದಿಕ್ ಪಾಂಡ್ಯ ವೃತ್ತಿಜೀವನದ ಶ್ರೇಷ್ಠ 42 ಸ್ಥಾನ ಪಡೆದರೆ, ರಿಷಭ್ ಪಂತ್ ಟಾಪ್ 100ಗೆ ಪ್ರವೇಶಿಸಿದ್ದಾರೆ.
ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ 4 ಸ್ಥಾನ ಬಡ್ತಿ ಪಡೆದು 24 ಹಾಗೂ ಆಲ್ರೌಂಡರ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಜಾನಿ ಬೈರ್ಸ್ಟೋವ್ 7ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸ್ಮಿತ್ ಅಲ್ಲ, ಈತ ಆಸ್ಟ್ರೇಲಿಯಾದ ಕ್ಯಾಪ್ಟನ್ ಆಗಬೇಕು: ಮೈಕಲ್ ಕ್ಲಾರ್ಕ್