ETV Bharat / sports

ಗೋಲ್ಡನ್​ ಬ್ಯಾಟ್​​ ದಕ್ಕಿಸಿಕೊಂಡ ರೋಹಿತ್​... ಐಸಿಸಿ ವಿಶ್ವಕಪ್​ನ ವೈಯಕ್ತಿಕ​ ಪ್ರಶಸ್ತಿಗಳು ಯಾರಿಗೆ?

648 ರನ್​ಗಳಿಸಿದ ರೋಹಿತ್​ ಶರ್ಮಾ ಗೋಲ್ಡನ್​ ಬ್ಯಾಟ್​ ಹಾಗೂ 27 ವಿಕೆಟ್​ ಪಡೆದ ಮಿಚೆಲ್​ ಸ್ಟಾರ್ಕ್​ ಗೋಲ್ಡನ್​ ಬಾಲ್​ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

individual-award
author img

By

Published : Jul 15, 2019, 1:14 PM IST

ಲಂಡನ್​: ಏಕದಿನ ಕ್ರಿಕೆಟ್​ ವಿಶ್ವಕಪ್​ ಭಾನುವಾರ ಕೊನೆಗೊಂಡಿದ್ದು, ಆತಿಥೇಯ ಇಂಗ್ಲೆಂಡ್​ ಅದೃಷ್ಟದ ಜಯದೊಡನೆ ವಿಶ್ವಕಪ್​ ಎತ್ತಿ ಹಿಡಿದಿದೆ. ಆದರೆ, ಭಾರತದ ರೋಹಿತ್​ ಶರ್ಮಾ ಹೆಚ್ಚು ರನ್​ಗಳಿಸುವ ಮೂಲಕ ಗೋಲ್ಡನ್​ ಬ್ಯಾಟ್​ ದಕ್ಕಿಸಿಕೊಂಡಿದ್ದಾರೆ.

ವಿಶ್ವಕಪ್​ ಉದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದ ರೋಹಿತ್​ ಶರ್ಮಾ 5 ಶತಕ ಹಾಗೂ 1 ಅರ್ಧಶತಕದ ಸಹಿತ 648 ರನ್​ಗಳಿಸಿ ಗೋಲ್ಡನ್​ ಬ್ಯಾಟ್​ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಉಳಿದಂತೆ 27 ವಿಕೆಟ್​ ಪಡೆದ ಆಸ್ಟ್ರೇಲಿಯಾದ ಮಿಚೆಲ್​ ಸ್ಟಾರ್ಕ್​ ಗೋಲ್ಡನ್​ ಬಾಲ್​ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಸರಣಿಯಲ್ಲಿ ವೈಯಕ್ತಿಕ ಗೌರವಕ್ಕೆ ಪಾತ್ರರಾದ ಆಟಗಾರರು:

ಪಂದ್ಯ ಶ್ರೇಷ್ಠ- ಬೆನ್​ ಸ್ಟೋಕ್ಸ್​
ಸರಣಿ ಶ್ರೇಷ್ಠ- ಕೇನ್​ ವಿಲಿಯಮ್ಸನ್​
ಅತಿ ಹೆಚ್ಚು ರನ್​- ರೋಹಿತ್​ ಶರ್ಮಾ(648)
ಹೆಚ್ಚು ವಿಕೆಟ್-ಮಿಚೆಲ್​ ಸ್ಟಾರ್ಕ್​ ​(27)
ಹೆಚ್ಚು ಶತಕ - ರೋಹಿತ್​ ಶರ್ಮಾ(5)
ಹೆಚ್ಚು ಸಿಕ್ಸರ್​- ಇಯಾನ್​ ಮಾರ್ಗನ್​(22)
ವೈಯಕ್ತಿಕ ಗರಿಷ್ಠ ಸ್ಕೋರ್​- ಡೇವಿಡ್​ ವಾರ್ನರ್​(166)

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.