ಲಂಡನ್: ಫಿಂಚ್ ಶತಕ ಹಾಗೂ ವಾರ್ನರ್ ಅರ್ಧಶತಕ್ ಹೊರತಾಗಿಯೂ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ಗೆ 286 ರನ್ಗಳ ಸಾಧಾರಣ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ಆಸೀಸ್ಗೆ ನಾಯಕ ಫಿಂಚ್(100) ಶತಕ ಹಾಗೂ ವಾರ್ನರ್(53) ಅರ್ಧಶತಕ ಸಿಡಿಸುವ ಮೂಲಕ ಮೊದಲ ವಿಕೆಟ್ಗೆ 123 ರನ್ಗಳ ಜೊತೆಯಾಟ ನೀಡಿದರು. ಈ ವೇಳೆ ದಾಳಿಗಿಳಿದ ಮೊಯಿನ್ ಅಲಿ ವಾರ್ನರ್ ವಿಕೆಟ್ ಕಬಳಿಸಿದರು. 61 ಎಸೆತಗಳನ್ನೆದುರಿಸಿದ್ದ ವಾರ್ನರ್ 6 ಬೌಂಡರಿ ಸಿಡಿಸಿ 53 ರನ್ಗಳಿಸಿದ್ದರು.
ನಂತರ ಫಿಂಚ್ ಜೊತೆಗೂಡಿದ ಖವಾಜ 23 ರನ್ಗಳಿಸಿ ತಂಡದ ಮೊತ್ತ 173 ರನ್ಗಳಾಗಿದ್ದಾಗ ಬೆನ್ಸ್ಟೋಕ್ಸ್ಗೆ ವಿಕೆಟ್ ಒಪ್ಪಿಸಿದರು. ಖವಾಜರ ಬೆನ್ನಲ್ಲೇ 116 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 100 ರನ್ಗಳಿಸದ್ದ ನಾಯಕ ಫಿಂಚ್ ಕೂಡ ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ಕ್ರಿಸ್ ವೋಕ್ಸ್ಗೆ ಕ್ಯಾಚ್ ನೀಡಿದರು.
ಫಿಂಚ್ ಔಟಾದ ಬೆನ್ನಲ್ಲೇ ಆಸೀಸ್ ತಂಡ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ ನಿರಂತರವಾಗಿ ವಿಕೆಟ್ ಒಪ್ಪಿಸಿದರು. ಮಾಜಿ ನಾಯಕ ಸ್ಮಿತ್ 38,ಅಲೆಕ್ಸ್ ಕ್ಯಾರಿ 38 ರನ್ಗಳಿಸಿದ್ದು ಬಿಟ್ಟರೆ, ಮ್ಯಾಕ್ಸವೆಲ್ (12), ಸ್ಟೋಯ್ನೀಸ್(8) ಕಮ್ಮಿನ್ಸ್(1) ರನ್ಗಳಿಗೆ ವಿಕೆಟ್ ಒಪ್ಪಿಸಿ ಆಸೀಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಇಂಗ್ಲೆಂಡ್ ತಂಡದ ಪರ ವೋಕ್ಸ್ 2 ವಿಕೆಟ್ ಹಾಗೂ ಆರ್ಚರ್,ಮಾರ್ಕ್ವುಡ್,ಬೆನ್ ಸ್ಟೋಕ್ಸ್, ಮೊಯಿನ್ ಅಲಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.