ಲಾಹೋರ್: ವಿರಾಟ್ ಕೊಹ್ಲಿಯನ್ನು ಗೌರವಿಸುತ್ತೇನೆ. ಆದರೆ ಅವರ ಎದುರು ಆಡುವುದುಕ್ಕೆ ಭಯ ಪಡಲಾರೆ ಎಂದು ಪಾಕಿಸ್ತಾನದ ಯುವ ಬೌಲರ್ ನಸೀಮ್ ಶಾ ಹೇಳಿದ್ದಾರೆ.
16 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ನಸೀಮ್ ಶಾ ತಮ್ಮ ಎರಡನೇ ಸರಣಿಯಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಆದರೆ ನಂತರ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ.
ಈಗಾಗಲೇ ಕೆಲವು ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ಗಳ ಎದುರು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಯುವ ಬೌಲರ್ ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ವಿರುದ್ಧ ಆಡುವುದಕ್ಕೆ ತಾನೂ ಕಾತುರದಿಂದ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಹೌದು, ಖಂಡಿತವಾಗಿಯೂ. ಭಾರತ ಮತ್ತು ಪಾಕಿಸ್ತಾನ ಪಂದ್ಯ ಯಾವಾಗಲೂ ವಿಶೇಷವಾಗಿರುತ್ತದೆ ಮತ್ತು ನಾನು ಈಗಾಗಲೆ ಹೇಳಿದ್ದೇನೆ, ಆ ಪಂದ್ಯಗಳಲ್ಲಿ ಆಟಗಾರರು ಒಂದೋ ಹೀರೋ ಅಥವಾ ವಿಲನ್ ಆಗಿ ಗುರುತಿಸಿಕೊಳ್ಳುತ್ತಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಬಹಳ ವಿರಳವಾಗಿರುವುದರಿಂದ ತುಂಬಾ ವಿಶೇಷವಾಗಿವೆ. ಭಾರತದೆದರು ಅಡಲು ಅವಕಾಶ ಯಾವಾಗ ಬರುತ್ತದೆ ಎಂದು ಎದುರು ನೋಡುತ್ತಿದ್ದೇನೆ. ಭಾರತ ವಿರುದ್ಧದ ಪಂದ್ಯದಲ್ಲಿ ನಾನು ಉತ್ತಮವಾಗಿ ಬೌಲಿಂಗ್ ಮಾಡಬಹುದೆಂದು ನಾನು ಭಾವಿಸಿದ್ದೇನೆ. ಆ ಅವಕಾಶ ಲಭಿಸಿದರೆ ನಾನು ನಮ್ಮ ಅಭಿಮಾನಿಗಳಿಗೆ ನಿರಾಶೆ ಮೂಡಿಸುವುದಿಲ್ಲ ಎಂದಿದ್ದಾರೆ.
ವಿರಾಟ್ ಕೊಹ್ಕಿ ಬಗ್ಗೆ ಮಾತನಾಡಿ, ನಾನು ಅವರನ್ನು ಗೌರವಿಸುತ್ತೇನೆ, ಆದರೆ ಅವರಿಗೆ ಹೆದರುವುದಿಲ್ಲ ಅತ್ಯುತ್ತಮ ಬ್ಯಾಟ್ಸ್ಮನ್ ಎದುರು ಬೌಲಿಂಗ್ ಮಾಡುವುದು ಸವಾಲಿನ ಕೆಲಸ. ಆದರೆ ಅಲ್ಲಿಯೇ ನುಮ್ಮ ಆಟ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಿದೆ. ಭಾರತ ಮತ್ತು ಕೊಹ್ಲಿ ಎದುರು ಆಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ನಸೀಮ್ ಶಾ ಹೇಳಿಕೊಂಡಿದ್ದಾರೆ.