ETV Bharat / sports

5 ತಿಂಗಳ ನಂತರ ನೆಟ್ಸ್​ನಲ್ಲಿ ಬ್ಯಾಟಿಂಗ್​ ಮಾಡುವುದಕ್ಕೆ ಭಯವಾಗಿತ್ತು : ವಿರಾಟ್​ ಕೊಹ್ಲಿ

author img

By

Published : Aug 30, 2020, 2:31 PM IST

Updated : Aug 30, 2020, 2:40 PM IST

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕ್ವಾರಂಟೈನ್​ ಬಳಿಕೆ ತಮ್ಮ ಮೊದಲ ಬಾರಿಗೆ ತರಬೇತಿ ನಡೆಸಿದೆ. ನೆಟ್​ ಸೆಷನ್​ನಲ್ಲಿ ದಕ್ಷಿಣ ಆಫ್ರಿಕಾದ ಲೆಜೆಂಡ್​ ಡೇಲ್​ ಸ್ಟೈನ್​ ಹಾಗೂ ಆರ್​ಸಿಬಿ ಡೈರೆಕ್ಟರ್​ ಮೈಕ್​ ಹೆಸನ್​ ಕೂಡ ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ದುಬೈ: 5 ತಿಂಗಳ ನಂತರ ನೆಟ್ಸ್​ನಲ್ಲಿ ಅಭ್ಯಾಸ ಮಾಡುವಾಗ ಸ್ವಲ್ಪ ಭಯವಿತ್ತು, ಆದರೆ ಐಪಿಎಲ್​ಗೂ ಮುನ್ನ ನಡೆದ ತಮ್ಮ ಮೊದಲ ತರಬೇತಿ ಸೆಷನ್​ ಅತ್ಯುತ್ತಮ ಅನುಭವ ನೀಡಿದೆ ಎಂದು ಭಾರತ ಹಾಗೂ ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ ತಿಳಿಸಿದ್ದಾರೆ.

ನೆಟ್​ ಸೆಷನ್​ ನಂತರ ಮಾತನಾಡಿರುವ ಕೊಹ್ಲಿ " ಪ್ರಾಮಾಣಿಕವಾಗಿ ಹೇಳುತ್ತೇನೆ, ಈ ನೆಟ್ ಸೆಷನ್ ನಿರೀಕ್ಷೆಗಿಂತ ಚೆನ್ನಾಗಿ ಸಾಗಿದೆ. ನಾನು 5 ತಿಂಗಳಿನಿಂದ ಬ್ಯಾಟಿಂಗ್​ ಮಾಡಿರದ ಕಾರಣ ಸ್ವಲ್ಪ ಭಯವಿತ್ತು. ಬ್ಯಾಟ್​ ಹಿಡಿದು 5 ತಿಂಗಳಾಗಿತ್ತು. ಆದ್ರೆ ಇದು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಚೆನ್ನಾಗಿ ಬಂದಿದೆ" ಎಂದು ಆರ್​ಸಿಬಿ ವೆಬ್​ಸೈಟ್​ಗೆ ಕೊಹ್ಲಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಕಳೆದ ವರ್ಷದ ಆರ್​ಸಿಬಿ ತಂಡದ ಅತಿ ಹೆಚ್ಚು ರನ್​ ಗಳಿಸಿರುವ ಬ್ಯಾಟ್ಸ್​ಮನ್​ ಆಗಿರುವ ಕೊಹ್ಲಿ, ಲಾಕ್ ಡೌನ್ ಸಮಯದಲ್ಲಿ ತಮ್ಮ ದೇಹದ ಫಿಟ್​ನೆಸ್​ ಕಾಪಾಡಿಕೊಂಡಿದ್ದರಿಂದ ಈಗ ನೆಟ್ ಸೆಷನ್​ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಲು ನೆರವಾಗಿದೆ ಎಂದಿದ್ದಾರೆ.

" ಲಾಕ್‌ಡೌನ್ ಸಮಯದಲ್ಲಿ ನಾನು ಸ್ವಲ್ಪ ತರಬೇತಿ ಪಡೆದಿದ್ದೇನೆ, ಆದ್ದರಿಂದ ನಾನು ಸಾಕಷ್ಟು ಫಿಟ್​ನೆಸ್​ ಹೊಂದಿದ್ದೇನೆ. ಇದು ನನಗೆ ಸಹಾಯ ಮಾಡುತ್ತಿದೆ. ಏಕೆಂದರೆ ದೇಹವು ಹಗುರವಾಗಿದ್ದರೆ ನೀವು ಉತ್ತಮವಾಗಿ ಪ್ರತಿಕ್ರಿಯಿಸುತ್ತೀರಾ, ನಾನು ಚೆಂಡಿನ ಮೇಲೆ ಹೆಚ್ಚು ಸಮಯವನ್ನು ಹೊಂದಿದ್ದೇನೆ ಎಂದು ಭಾವಿಸುತ್ತೇನೆ. ಅದು ದೊಡ್ಡ ಪ್ಲಸ್ ಪಾಯಿಂಟ್​ " ಎಂದು ಕೊಹ್ಲಿ ತಿಳಿಸಿದ್ದಾರೆ.

ಮೈಕ್ ಹೆಸನ್ ಜೊತೆ ಕೊಹ್ಲಿ
ಮೈಕ್ ಹೆಸನ್ ಜೊತೆ ಕೊಹ್ಲಿ

ದೇಹ ಫಿಟ್​ ಇಲ್ಲದಿದ್ದರೆ ಇಷ್ಟು ಹೆಚ್ಚು ಸಮಯ ನೆಟ್​ನಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ತರಬೇತಿ ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಉತ್ತಮವಾಗಿ ಸಾಗಿದೆ ಎಂದಿದ್ದಾರೆ.

ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ 13ನೇ ಐಪಿಎಲ್ ಟೂರ್ನಿ ಆರಂಭವಾಗಲಿದ್ದು ಫೈನಲ್​ ಪಂದ್ಯ ನವೆಂಬರ್​ 10ರಂದು ನಡೆಯಲಿದೆ.

Last Updated : Aug 30, 2020, 2:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.