ETV Bharat / sports

'ಆತನ ಕರಿಯರ್​ ಮುಗಿದೇ ಹೋಯಿತು ಎಂದು ಭಾವಿಸಿದ್ದೆ'... ಭಾರತೀಯನ ಪವರ್​ಗೆ ಮೆಕ್​ಗ್ರಾತ್​ ಶಾಕ್​​​! - ಇಶಾಂತ್​ ಶರ್ಮಾ ಬೌಲಿಂಗ್ ಮೆಚ್ಚಿದ ಮೆಕ್​ಗ್ರಾತ್​

ಗಾಯದಿಂದ ಚೇತರಿಸಿಕೊಂಡು ಬಂದ ಪಂದ್ಯದಲ್ಲೇ 5 ವಿಕೆಟ್​ ಪಡೆದ ಇಶಾಂತ್​ ಶರ್ಮಾರ ಬಗ್ಗೆ ಆಸೀಸ್​ ಲೆಜೆಂಡ್​ ಬೌಲರ್​ ಗ್ಲೆನ್​ ಮೆಕ್​ಗ್ರಾತ್​ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

McGrath prices to pacer Ishant Sharma
ಮೆಕ್​ಗ್ರಾತ್-ಇಶಾಂತ್​ ಶರ್ಮಾ
author img

By

Published : Feb 26, 2020, 9:24 PM IST

Updated : Feb 27, 2020, 1:00 PM IST

ಕ್ರೈಸ್ಟ್​ ಚರ್ಚ್​: ನ್ಯೂಜಿಲ್ಯಾಂಡ್​ ವಿರುದ್ಧ ಸೋಲಿನಲ್ಲೂ ಮಿಂಚಿದ್ದ ಏಕೈಕ ಬೌಲರ್​ ಇಶಾಂತ್​ ಶರ್ಮಾ ಗಾಯದಿಂದ ಚೇತರಿಸಿಕೊಂಡು ಬಂದ ಪಂದ್ಯದಲ್ಲೇ 5 ವಿಕೆಟ್​ ಪಡೆದಿದ್ದಕ್ಕೆ ಆಸೀಸ್​ ಲೆಜೆಂಡ್​ ಬೌಲರ್​ ಗ್ಲೆನ್​ ಮೆಕ್​ಗ್ರಾತ್​ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರೂ ಇಶಾಂತ್​ ಶರ್ಮಾ ಮಾತ್ರ ಅದ್ಭುತ ಪ್ರದರ್ಶನ ತೋರಿ 5 ವಿಕೆಟ್​ ಪಡೆದಿದ್ದರು. ಆದರೆ, ಅವರ ಏಕಾಂಗಿ ಪ್ರದರ್ಶನ ಕೊಹ್ಲಿ ಪಡೆಯ ಸೋಲನ್ನು ತಪ್ಪಿಸಲಾಗಿರಲಿಲ್ಲ. ಬ್ಯಾಟಿಂಗ್​ ವೈಫಲ್ಯದ ಕಾರಣ 10 ವಿಕೆಟ್​ಗಳ ಸೋಲು ಕಾಣಬೇಕಾಯಿತು. ಆದರೆ, ಭಾರತೀಯ ಹಿರಿಯ ಬೌಲರ್​ ಬಗ್ಗೆ ಆಸೀಸ್​ನ ಲೆಜೆಂಡ್​ ಮೆಕ್​ಗ್ರಾತ್​ ಮಾತ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಇಶಾಂತ್​ಗೆ ತುಂಬಾ ಅನುಭವವಿದೆ. ಅವರು ಕಳೆದೆರಡು ವರ್ಷಗಳಿಂದ ಮರಳಿ ಮತ್ತೆ ಕ್ರಿಕೆಟ್​ನಲ್ಲಿ ಸಕ್ರಿಯವಾಗಿ ಉಳಿದಿರುವುದು ನಿಜಕ್ಕೂ ಪ್ರಭಾವಶಾಲಿ ಆಂಶವಾಗಿದೆ. ನಾನು ಆತನ ವೃತ್ತಿ ಜೀವನ ಯಾವಾಗಲೋ ಅಂತ್ಯವಾಗಿದೆ ಅಂದುಕೊಂಡಿದ್ದೆ. ಆದರೆ, ತನ್ನನ್ನು ತಾನು ಪುನರ್​ಶೋಧಿಸಿಕೊಂಡು ಅದ್ಭುತ ಬೌಲಿಂಗ್ ಮಾಡುತ್ತಿದ್ದಾರೆ" ಎಂದು ಮೆಕ್​ಗ್ರಾತ್​ ಭಾರತೀಯ ಬೌಲರ್​ ಬಗ್ಗೆ ಗುಣಗಾನ ಮಾಡಿದ್ದಾರೆ.

McGrath prices to pacer Ishant Sharma
ಇಶಾಂತ್​ ಶರ್ಮಾ

ಆಶ್ಚರ್ಯವೆಂದರೆ ಮೆಕ್​ಗ್ರಾತ್​ ಭಾರತ ತಂಡದ ಬೌಲಿಂಗ್​ ಪ್ರದರ್ಶನ ಮೊದಲ ಟೆಸ್ಟ್​ನಲ್ಲಿ ಉತ್ತಮವಾಗಿತ್ತು ಎಂದಿದ್ದಾರೆ. ಆದರೆ, ಇಶಾಂತ್​ ಜೊತೆಗೆ ಆತನ ಸಹಬೌಲರ್​ಗಳಾದ ಜಸ್ಪ್ರಿತ್​ ಬುಮ್ರಾ ಹಾಗೂ ಮೊಹಮ್ಮದ್​ ಶಮಿ ಕೇವಲ ಒಂದು ವಿಕೆಟ್​ ಪಡೆದು ನೀರಸ ಪ್ರದರ್ಶನ ತೋರಿದ್ದದರು. ಆದರೂ ಮೆಕ್​ಗ್ರಾತ್​ ಭಾರತದ ಬೌಲಿಂಗ್​ ಅನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ನಾನು ಈಗಲೂ ಭಾರತದ ಬೌಲಿಂಗ್​ ಕ್ರಮಾಂಕದ ಬಗ್ಗೆ ಸಂಪೂರ್ಣ ಭರವಸೆಯಿಟ್ಟಿದ್ದೇನೆ. ಕೆಲವರು ಗಾಯಗಳಿಂದ ಚೇತರಿಸಿಕೊಂಡು ಬಂದಿದ್ದಾರೆ. ಶರ್ಮಾ ಗಾಯದಿಂದ ಬಂದು 5 ವಿಕೆಟ್​ ಪಡೆದಿದ್ದಾರೆ. ಬುಮ್ರಾ ಕೂಡ ಒಂದೆರೆಡು ಗಾಯಗಳಿಗೆ ತುತ್ತಾಗಿ ಹಿಂತಿರುಗಿ ಬಂದಿದ್ದಾರೆ. ಹಾಗಾಗಿ ಭಾರತದ ಬೌಲಿಂಗ್ ಈಗಲೂ ವಿಶ್ವಶ್ರೇಷ್ಠ ಬೌಲಿಂಗ್​ ಪಡೆಯಾಗಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಕಂಡ ಶ್ರೇಷ್ಠ ವೇಗದ ಬೌಲರ್​ ಅಭಿಪ್ರಾಯಪಟ್ಟಿದ್ದಾರೆ.

Last Updated : Feb 27, 2020, 1:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.