ಸಿಡ್ನಿ: 'ಈಗ ನಾನು ತಂಡಕ್ಕಾಗಿ ಏನು ಮಾಡುತ್ತಿದ್ದೇನೋ ಅದಕ್ಕಿಂತ ಹೆಚ್ಚು ಉತ್ತಮವಾಗಿ ನನ್ನಿಂದ ಇನ್ನೇನೂ ಮಾಡಲು ಸಾಧ್ಯವಾಗಲಿಲ್ಲ' ಎಂದು ತಮ್ಮ ನಿಧಾನಗತಿ ಆಟಕ್ಕೆ ಕ್ರಿಕೆಟ್ ವಲಯದಲ್ಲಿ ಟೀಕೆಗೆ ಗುರಿಯಾದ ಬೆನ್ನಲ್ಲೇ ಪೂಜಾರ ಈ ಹೇಳಿಕೆ ನೀಡಿದ್ದಾರೆ.
ಚೇತೇಶ್ವರ್ ಪೂಜಾರ 3ನೇ ಟೆಸ್ಟ್ನಲ್ಲಿ 176 ಎಸೆತಗಳಲ್ಲಿ 5 ಬೌಂಡರಿ ಸಹಿತ ಕೇವಲ 50 ರನ್ ಗಳಿಸಿದ್ದರು. ಆದರೆ ಪೂಜಾರ ಅವರ ನಿಧಾನಗತಿ ಬ್ಯಾಟಿಂಗ್ನಿಂದ ಇತರೆ ಆಟಗಾರರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಹಲವಾರು ಕ್ರಿಕೆಟಿಗರು ಭಾರತೀಯ ಬ್ಯಾಟ್ಸ್ಮನ್ ವಿರುದ್ಧ ಟೀಕಿಸಿದ್ದರು.
ಆದರೆ ಪೂಜಾರ ಆಸ್ಟ್ರೇಲಿಯಾದಂತಹ ಪ್ರಚಂಡ ಬೌಲಿಂಗ್ ದಾಳಿ ತಮ್ಮ ವೃತ್ತಿ ಜೀವನದ ನಿಧಾನಗತಿ ಅರ್ಧಶತಕ ದಾಖಲಿಸುವಂತೆ ಮಾಡಿತು ಎಂದು ಪಂದ್ಯದ ನಂತರ ನಡದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾನು ಉತ್ತಮವಾಗಿ ಆಡಿದ್ದೇನೆ ಮತ್ತು ಕೆಲವು ಉತ್ತಮ ಎಸೆತಗಳನ್ನು ಸ್ವೀಕರಿಸಿದ್ದೇನೆ ಎನ್ನುವುದನ್ನು ಒಪ್ಪಿಕೊಳ್ಳಬೇಕಿದೆ. ಈಗ ನಾನು ಏನು ಮಾಡಿತ್ತಿದ್ದೇನೋ ಅದಕ್ಕಿಂತಲೂ ಹೆಚ್ಚು ಉತ್ತಮವಾಗಿ ನನ್ನಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ" ಎಂದು ಪೂಜಾರ ತಿಳಿಸಿದ್ದಾರೆ.
ಇನ್ನು ಪೂಜಾರ ತಾವು ಔಟಾದ ಕಮ್ಮಿನ್ಸ್ ಅವರ ಎಸೆತವನ್ನು ಸರಣಿಯಲ್ಲೇ ಅತ್ಯುತ್ತಮ ಎಸೆತ ಎಂದು ಕರೆದಿದ್ದಾರೆ.
ಕಮ್ಮಿನ್ಸ್ ಎಸೆತ ಖಂಡಿತಾ ಆಡುವುದಕ್ಕೆ ಅಸಾಧ್ಯವಾಗಿತ್ತು. ಅದು ಈ ಸರಣಿಯ ಅತ್ಯಂತ ಶ್ರೇಷ್ಠ ಎಸೆತ ಎಂದು ನಾನು ಭಾವಿಸುತ್ತೇನೆ. ನಾನು ಆ ಎಸೆತವನ್ನು ಬೇರೆ ಯಾವ ರೀತಿಯಲ್ಲಿ ಆಡಬಹುದಿತ್ತು ಎಂದು ಭಾವಿಸುವುದಿಲ್ಲ. ಅದು ಹೆಚ್ಚುವರಿ ಬೌನ್ಸ್ ಆಗಿದ್ದರಿಂದ ಬಲವಂತವಾಗಿ ಆಡಬೇಕಾಗಿತ್ತು. ಈ ದಿನ ನನ್ನ ದಿನವಾಗಿರಲಿಲ್ಲ. ಅದಕ್ಕಾಗಿ ಸ್ವಲ್ಪದರಲ್ಲಿ ಬ್ಯಾಟ್ಗೆ ತಾಗಿ ಕೀಪರ್ ಕೈ ಸೇರಿತು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಸಿಡ್ನಿಯಲ್ಲಿ ಪ್ರೇಕ್ಷಕರಿಂದ ಬುಮ್ರಾ, ಸಿರಾಜ್ಗೆ ನಿಂದನೆ: ಬಿಸಿಸಿಐ ಆರೋಪ