ETV Bharat / sports

ಕೋಟ್ಯಂತರ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದ ಹಿಟ್‌ಮ್ಯಾನ್: ಕೇನ್‌ ತಂತ್ರಕ್ಕೆ ಶರ್ಮಾ ಔಟ್‌! - ಮ್ಯಾಂಚೆಸ್ಟರ್​​

ವಿಶ್ವಕಪ್​​ನ ಲೀಗ್​​ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರೋಹಿತ್​ ಶರ್ಮಾ ಸೆಮಿಫೈನಲ್​ ಪಂದ್ಯದಲ್ಲಿ ಕೇವಲ 1ರನ್​ಗಳಿಸಿ ವಿಕೆಟ್​ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ರೋಹಿತ್​ ಶರ್ಮಾ
author img

By

Published : Jul 10, 2019, 6:13 PM IST

ಮ್ಯಾಂಚೆಸ್ಟರ್​​: ವಿಶ್ವಕಪ್​​ನಲ್ಲಿ ಅದ್ಭುತ ಫಾರ್ಮ್​​ನಲ್ಲಿದ್ದ ರೋಹಿತ್​ ಶರ್ಮಾ ಸೆಮಿಫೈನಲ್​ ಪಂದ್ಯದಲ್ಲೂ ಆಕರ್ಷಕ ಪ್ರದರ್ಶನ ನೀಡಿ ತಂಡವನ್ನು ಫೈನಲ್​​ ದಡ ಸೇರಿಸುತ್ತಾರೆ ಎನ್ನುವುದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಎಲ್ಲರ ನಂಬಿಕೆ ಹುಸಿಗೊಳಿಸಿರುವ ಹಿಟ್​​ಮ್ಯಾನ್​ ಕೇವಲ 1ರನ್​ಗಳಿಸಿ ವಿಕೆಟ್​ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.

ವಿಶ್ವಕಪ್​ ಲೀಗ್‌ನಲ್ಲಿ ಇಂಗ್ಲೆಂಡ್​ ವಿರುದ್ಧ​ (102), ಬಾಂಗ್ಲಾದೇಶ (104) ಹಾಗೂ ಶ್ರೀಲಂಕಾ (103) ಮೂಲಕ ಹ್ಯಾಟ್ರಿಕ್​ ಸೆಂಚುರಿ ಬಾರಿಸಿದ್ದ ರೋಹಿತ್​ ಶರ್ಮಾ ಬಗ್ಗೆ ನ್ಯೂಜಿಲ್ಯಾಂಡ್​ ತಂಡದ ನಾಯಕ ಕೇನ್​ ವಿಲಿಯಮ್ಸನ್​ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಆದರೆ ಕಿವೀಸ್​ ವಿರುದ್ಧದ ಪಂದ್ಯದಲ್ಲಿ ಅವರ ಬ್ಯಾಟಿಂದ ರನ್ ಹರಿದು ಬರಲೇ ಇಲ್ಲ.

ವಿಲಿಯಮ್ಸನ್​ ರೋಹಿತ್​ಗಾಗಿ ಹೆಣೆದಿದ್ದರು ಬಲೆ!
ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ
ಶರ್ಮಾ ವಿಕೆಟ್​ ಪಡೆದುಕೊಳ್ಳಲು ವಿಶೇಷ ರೀತಿಯಲ್ಲಿ ತಂತ್ರ ಹಣೆದಿರುವುದಾಗಿ ಕೇನ್ ವಿಲಿಯಮ್ಸನ್‌ ಪಂದ್ಯದ ಆರಂಭಕ್ಕೂ ಮೊದಲೇ ಹೇಳಿದ್ದರು.

ಬಲಗೈ ವೇಗಿಯಾಗಿರುವ ಮ್ಯಾಟ್ ಹೆನ್ರಿ ಬೌಲಿಂಗ್​ ದಾಳಿಯೇ ರೋಹಿತ್​ ಬ್ಯಾಟಿಂಗ್​ ಆರ್ಭಟ ನಿಲ್ಲಿಸಲು ಸೂಕ್ತ ಉಪಾಯ. ಖಂಡಿತವಾಗಿ ನಾವು ಈ ಅಸ್ತ್ರ ಬಳಕೆ ಮಾಡಿಕೊಳ್ಳಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಅದೇ ರೀತಿ ಇಂದು ಹೆನ್ರಿ ಬೌಲಿಂಗ್​​ನಲ್ಲೇ ರೋಹಿತ್​ ಕೀಪರ್​ಗೆ ಕ್ಯಾಚ್​ ನೀಡಿ ಪೆವಿಲಿಯನ್ ಸೇರಿಕೊಂಡರು.

Intro:Body:

ಮಹತ್ವದ ಪಂದ್ಯದಲ್ಲೇ ಮೋಸ ಮಾಡಿದ ರೋಹಿತ್​​... ಕಿವೀಸ್​ ಬಲೆಗೆ ಬಿದಿದ್ದು ಹೀಗೆ!

ಮ್ಯಾಂಚೆಸ್ಟರ್​​: ವಿಶ್ವಕಪ್​​ನಲ್ಲಿ ಅದ್ಭುತ ಫಾರ್ಮ್​​ನಲ್ಲಿದ್ದ ರೋಹಿತ್​ ಶರ್ಮಾ ಸೆಮಿಫೈನಲ್​ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿ ತಂಡವನ್ನ ಫೈನಲ್​​ಗೆ ತೆಗೆದುಕೊಂಡು ಹೋಗಲು ಸಹಾಯ ಮಾಡ್ತಾರೆ ಎಂದು ಎಲ್ಲರೂ ನಂಬಿದ್ದರು. ಆದರೆ ಅವರ ನಂಬಿಕೆ ಹುಸಿಗೊಳಿಸಿರುವ ಹಿಟ್​​ಮ್ಯಾನ್​ ಕೇವಲ 1ರನ್​ಗಳಿಸಿ ವಿಕೆಟ್​ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ. 

ವಿಶ್ವಕಪ್​ ಲೀಗ್​​ನಲ್ಲಿ ಇಂಗ್ಲೆಂಡ್​​(102), ಬಾಂಗ್ಲಾದೇಶ(104) ಹಾಗೂ ಶ್ರೀಲಂಕಾ(103) ಹ್ಯಾಟ್ರಿಕ್​ ಸೆಚುರಿ ಬಾರಿಸಿದ್ದ ರೋಹಿತ್​ ಶರ್ಮಾ ಬಗ್ಗೆ ನ್ಯೂಜಿಲ್ಯಾಂಡ್​ ತಂಡದ ನಾಯಕ ಕೇನ್​ ವಿಲಿಯಮ್ಸನ್​ ಸಹ ಮೆಚ್ಚುಗೆ ಮಾತುಗಳನ್ನಾಡಿದ್ದರು. ಆದರೆ ಕಿವೀಸ್​ ವಿರುದ್ಧದ ಪಂದ್ಯದಲ್ಲಿ ಅವರ ಬ್ಯಾಟಿಂಗ್​​ ಆರ್ಭಟ ಕಾಣಲಿಲ್ಲ. 

ವಿಲಿಯಮ್ಸನ್​ ರೋಹಿತ್​ಗಾಗಿ ಹಣೆದಿದ್ದರು ಬಲೆ! 

ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರೋಹಿತ್​ ಶರ್ಮಾ ವಿಕೆಟ್​ ಪಡೆದುಕೊಳ್ಳಲು ನ್ಯೂಜಿಲ್ಯಾಂಡ್​ ತಂಡದ ಕ್ಯಾಪ್ಟನ್​ ಕೇನ್​ ವಿಲಿಯಮ್ಸನ್​ ವಿಶೇಷ ರೀತಿಯಲ್ಲಿ ಬಲೆ ಹಣೆದಿರುವುದಾಗಿ ಪಂದ್ಯ ಆರಂಭಕ್ಕೂ ಮೊದಲೇ ಹೇಳಿದ್ದರು. 

ಬಲಗೈ ವೇಗಿಯಾಗಿರುವ ಮ್ಯಾಟ್ ಹೆನ್ರಿ ಬೌಲಿಂಗ್​ ದಾಳಿಯೇ ರೋಹಿತ್​ ಬ್ಯಾಟಿಂಗ್​ ಆರ್ಭಟ ನಿಲ್ಲಿಸಲು ಸೂಕ್ತ ಉಪಾಯ. ಖಂಡಿತವಾಗಿ ನಾವು ಈ ಅಸ್ತ್ರ ಬಳಕೆ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಅದೇ ರೀತಿ ಇಂದು ಹೆನ್ರಿ ಬೌಲಿಂಗ್​​ನಲ್ಲೇ ರೋಹಿತ್​ ಕೀಪರ್​ಗೆ ಕ್ಯಾಚ್​ ನೀಡಿ ವಿಕೆಟ್​ ಒಪ್ಪಿಸಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.