ಮುಂಬೈ: 2020ರ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಎಲ್ಲ ಫ್ರಾಂಚೈಸಿಗಳು ಇದೀಗ ತಮ್ಮ ತಮ್ಮ ತಂಡ ಬಲಪಡಿಸಿಕೊಳ್ತಿದ್ದು ಕಳಪೆ ಪ್ರದರ್ಶನ ತೋರಿದ ಆಟಗಾರರನ್ನು ತೆಗೆದು ಹಾಕಿ ಪ್ರಮುಖ ಆಟಗಾರರಿಗೆ ಮಣೆ ಹಾಕುತ್ತಿದೆ.
ಇದೀಗ ರಾಯಲ್ ಚಾಲೆಂಜರ್ಸ್ ಕೂಡಾ ಪ್ರಮುಖ 11 ಪ್ಲೇಯರ್ಗಳಿಗೆ ತಂಡದಿಂದ ಗೇಟ್‌ಪಾಸ್ ನೀಡಿದ್ದು, ಹೊಸ ಪ್ರತಿಭೆಗಳಿಗೆ ಪ್ರಾಧಾನ್ಯತೆ ನೀಡಲು ಪ್ಲಾನ್ ಹಾಕಿಕೊಂಡಿದೆ. ತಂಡ ಪ್ರಮುಖವಾಗಿ ವೆಸ್ಟ್ ಇಂಡೀಸ್ನ ಸ್ಫೋಟಕ ಬ್ಯಾಟ್ಸ್ಮನ್ ಶಿಮ್ರೊನ್ ಹೆಟ್ಮಯರ್, ನ್ಯೂಜಿಲ್ಯಾಂಡ್ನ ಆಲ್ರೌಂಡರ್ ಕಾಲಿನ್ ಡಿ ಗ್ರಾಂಡ್ಹೋಮ್, ಸ್ಟೋಯ್ನಿಸ್ ಸೇರಿದಂತೆ ಪ್ರಮುಖರನ್ನು ಕೈಬಿಟ್ಟಿದೆ.
ಆರ್ಸಿಬಿಯಿಂದ ಇವರಿಗೆ ಗೇಟ್‌ಪಾಸ್:
- ಮಾರ್ಕಸ್ ಸ್ಟೋಯ್ನಿಸ್
- ಶಿಮ್ರೊನ್ ಹೆಟ್ಮಯರ್
- ಅಕ್ಷದೀಪ್ ನಾಥ್
- ನಥನ್ ಕೌಲ್ಟರ್ ನೈಲ್
- ಕಾಲಿನ್ ಡಿ ಗ್ರಾಂಡ್ಹೋಮ್
- ಪ್ರಯಸ್ ರೇ ಬರ್ಮನ್
- ಟಿಮ್ ಸೌಥಿ
- ಕುಲ್ವಂತ್ ಕೇಜ್ರೋಲಿಯಾ
- ಹಿಮ್ಮತ್ ಸಿಂಗ್
- ಹೆನ್ರಿಚ್ ಕ್ಲಾಸೆನ್
- ಮಿಲಿಂದ್ ಕುಮಾರ್
- ಡೇಲ್ ಸ್ಟೇನ್
ಇಲ್ಲಿಯವರೆಗೂ ಮೂರು ಸಲ ಫೈನಲ್ ಪ್ರವೇಶ ಪಡೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆದ್ದಿಲ್ಲ. ಈ ಸಲ ಹೇಗಾದರೂ ಮಾಡಿ ಪ್ರಶಸ್ತಿ ಗೆಲ್ಲುವುದಕ್ಕೆ ಯೋಜನೆ ರೂಪಿಸಿರುವ ಆರ್ಸಿಬಿ ಮಹತ್ವದ ಬದಲಾವಣೆಗೆ ಉತ್ತೇಜನ ತೋರಿಸಿದೆ.