ಕೇಪ್ಟೌನ್(ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಸಮಸ್ಯೆಗಳ ಆಗರವಾಗಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ (ಸಿಎಸ್‌ಎ) ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ದುರ್ವರ್ತನೆಯ ಆರೋಪದ ಮೇಲೆ ಹಾಲಿ ಸಿಎಸ್‌ಎ ಚೀಫ್ ಎಕ್ಸಿಕ್ಯೂಟಿವ್ ತಬಾಂಗ್ ಮೊರೊ ಅವರನ್ನು ಅಮಾನತು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳವರೆಗೆ ಸಿಎಸ್‌ಎ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುವಂತೆ ಮಾಜಿ ನಾಯಕ ಸ್ಮಿತ್ಗೆ ಮನವಿ ಮಾಡಲಾಗಿದೆ.
-
#BreakingNews @GraemeSmith49 accepts role as Acting Director of Cricket #thread pic.twitter.com/QuOJtCAvxr
— Cricket South Africa (@OfficialCSA) December 11, 2019 " class="align-text-top noRightClick twitterSection" data="
">#BreakingNews @GraemeSmith49 accepts role as Acting Director of Cricket #thread pic.twitter.com/QuOJtCAvxr
— Cricket South Africa (@OfficialCSA) December 11, 2019#BreakingNews @GraemeSmith49 accepts role as Acting Director of Cricket #thread pic.twitter.com/QuOJtCAvxr
— Cricket South Africa (@OfficialCSA) December 11, 2019
ನಾನು ಸಿಎಸ್‌ಎ ನೆರವಿಗೆ ಸದಾ ಸಿದ್ದ. ಕಷ್ಟದ ಸಮಯದಲ್ಲಿ ಸಿಎಸ್ಎನಲ್ಲಿ ಕಾರ್ಯನಿರ್ವಹಿಸುವುದಕ್ಕೆ ನನಗಿಷ್ಟ. ಈಗಾಗಲೇ ಈ ಕುರಿತು ಹಲವು ಬಾರಿ ಸಾರ್ವಜನಿಕವಾಗಿಯೇ ನಾನು ಹೇಳಿದ್ದೇನೆ. ಅದ್ರಲ್ಲೂ ಡೈರೆಕ್ಟರ್ ಹುದ್ದೆಯನ್ನು ಕ್ರಿಕೆಟ್ ಅಭಿವೃದ್ಧಿಪಡಿಸುವುದಕ್ಕೆ ಉಪಯೋಗಿಸುತ್ತೇನೆ ಎಂದು ಗ್ರೇಮ್ ಸ್ಮಿತ್ ತಿಳಿಸಿದ್ರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 15,000ಕ್ಕೂ ಹೆಚ್ಚು ರನ್ಗಳಿಸಿರುವ ಗ್ರೇಮ್ ಸ್ಮಿತ್ ಕ್ಲಿಷ್ಠ ಪರಿಸ್ಥಿತಿಯಲ್ಲಿ ಸಿಎಸ್‌ಎ ಕೈ ಹಿಡಿದಿರುವುದಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಹೊಸ ಸಿಇಒ ಜಾಕ್ಸ್ ಫಾಲ್ ಹರ್ಷ ವ್ಯಕ್ತಪಡಿಸಿದ್ದಾರೆ. ಸ್ಮಿತ್ರ ನಾಯಕತ್ವ ಗುಣ ಹಾಗೂ ಜ್ಞಾನ ಕ್ರಿಕೆಟ್ ಬೋರ್ಡ್ ಅಭಿವೃದ್ಧಿಗೆ ಮಾರ್ಗದರ್ಶನವಾಗಲಿದೆ. ಈ ಮೂರು ತಿಂಗಳಲ್ಲಿ ಅವರಿಂದ ಉತ್ತಮ ಸಲಹೆ ಸೂಚನೆಗಳನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.