ಸರ್ಚ್ ಇಂಜಿನ್ ಗೂಗಲ್‌ನಲ್ಲಿ ಟೀಂ ಇಂಡಿಯಾ ಕ್ರಿಕೆಟ್ ಕೋಚ್ ರವಿಶಾಸ್ತ್ರಿ ವಯಸ್ಸು ಇನ್ನೂ ಸರಿಯಾಗಿಲ್ಲ. ಕಳೆದ ಎರಡ್ಮೂರು ದಿನದಿಂದಲೂ ರವಿಶಾಸ್ತ್ರಿ ವಯಸ್ಸು 120 ಅಂತಾನೇ ತೋರಿಸಿಸುತ್ತಿದೆ.
ಹೌದು, ಗೂಗಲ್‌ನಲ್ಲಿ ನೀವೊಮ್ಮೆ ರವಿಶಾಸ್ತ್ರಿ ವಯಸ್ಸು (Age) ಎಂದು ಹುಡುಕಿದರೆ ನಿಮ್ಮ ಕಣ್ಣಿಗೆ ಕಾಣಸಿಗುವ ಉತ್ತರ 120 ವರ್ಷಗಳು ಅನ್ನೋದು. ಈ ಹಿಂದೆ ವಿಕಿಪಿಡಿಯಾದಲ್ಲೂ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ವಯಸ್ಸು 120 ವರ್ಷಗಳೆಂದು ತೋರಿಸುತ್ತಿತ್ತು. ಈಗ ವಿಕಿಪಿಡಿಯಾ ಪೇಜ್‌ನಲ್ಲಿ ರವಿಶಾಸ್ತ್ರಿ ಜನ್ಮ ದಿನಾಂಕ 27 ಮೇ 1962 ಎಂದು ತೋರಿಸುತ್ತಿದೆ. ರವಿಶಾಸ್ತ್ರಿ 27 ಮೇ 1962ರಲ್ಲಿ ಜನಿಸಿದ್ದು, ಸದ್ಯ ಶಾಸ್ತ್ರಿಗೆ ಕೇವಲ 58 ವರ್ಷಗಳಾಗಿವೆಯಷ್ಟೇ. ಆದ್ರೆ ಸರ್ಚ್ ಇಂಜಿನ್ ಗೂಗಲ್‌ನಲ್ಲಿ ಮಾತ್ರ ಇನ್ನೂ 120 ವರ್ಷ ಅಂತಾನೇ ಇದೆ.
ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1ರಲ್ಲಿ ಗೆಲ್ಲುತ್ತಿದ್ದಂತೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ಟೀಂ ಇಂಡಿಯಾ ಕ್ರಿಕೆಟ್ ಕೋಚ್ ರವಿಶಾಸ್ತ್ರಿಗೆ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದರು.