ETV Bharat / sports

ದ್ರಾವಿಡ್​ಗೆ ಬಿಸಿಸಿಐನಿಂದ ನೋಟಿಸ್... ಭಾರತೀಯ ಕ್ರಿಕೆಟ್​ಗೆ​ ಅವಮಾನ : ಗಂಗೂಲಿ, ಭಜ್ಜಿ ಆಕ್ರೋಶ

ದ್ರಾವಿಡ್​ಗೆ ಬಿಸಿಸಿಐ ನೋಟಿಸ್​ ನೀಡಿರುವುದಕ್ಕೆ ಆಕ್ರೋಶವ್ಯಕ್ತಪಡಿಸಿರುವ ಗಂಗೂಲಿ ಭಾರತೀಯ ಕ್ರಿಕೆಟ್​ಅನ್ನು ದೇವರೆ ಕಾಪಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಗೂಲಿ
author img

By

Published : Aug 7, 2019, 4:16 PM IST

Updated : Aug 7, 2019, 5:04 PM IST

ನವದೆಹಲಿ:ಭಾರತ ಅಂಡರ್​ 19 ತಂಡದ ಕೋಚ್​ ರಾಹುಲ್​ ದ್ರಾವಿಡ್​ಗೆ ಹಿತಾಶಕ್ತಿ ಸಂಘರ್ಷ ಉಲ್ಲಂಘನೆ ಮಾಡಿದ್ದಾರೆಂದು ಬಿಸಿಸಿಐ ನೋಟಿಸ್​ ನೀಡಿರುವುದಕ್ಕೆ ಮಾಜಿ ಕ್ರಿಕೆಟಿಗ ಗಂಗೂಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು ದ್ರಾವಿಡ್​ರನ್ನು ಬಿಸಿಸಿಐ ನ್ಯಾಷನಲ್​ ಕ್ರಿಕೆಟ್​ ಆಕಾಡೆಮಿಗೆ ಮುಖ್ಯಸ್ಥರನ್ನಾಗಿ ಮಾಡಿತ್ತು. ಆದರೆ ದ್ರಾವಿಡ್ ಐಪಿಎಲ್​ ಪ್ರಾಂಚೈಸಿಯಾದ ಸಿಎಸ್​ಕೆ​ ಮಾಲೀಕತ್ವ ಹೊಂದಿರುವ ಇಂಡಿಯನ್​ ಸಿಮೆಂಟ್​​ ಸಮೂಹದ ಉಪಾಧ್ಯಕ್ಷರಾಗಿದ್ದಾರೆ. ಆದ್ದರಿಂದ ದ್ರಾವಿಡ್​ ಹಿತಾಶಕ್ತಿ ಸಂಘರ್ಷ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆಂದು ಮಧ್ಯ ಪ್ರದೇಶದ ಕ್ರಿಕೆಟ್​ ಸಂಸ್ಥೆಯ ಸದಸ್ಯ ಸಂಜೀವ್​ ಗುಪ್ತಾ ಬಿಸಿಸಿಐಗೆ ದೂರು ನೀಡಿದ್ದಾರೆ.

  • New fashion in indian cricket .....conflict of interest ....Best way to remain in news ...god help indian cricket ......Dravid Gets Conflict of Interest Notice from BCCI Ethics Officer https://t.co/3cD6hc6vsv.

    — Sourav Ganguly (@SGanguly99) August 6, 2019 " class="align-text-top noRightClick twitterSection" data=" ">

ಇದರಿಂದ ಬಿಸಿಸಿಐ ದ್ರಾವಿಡ್​ಗೆ 2 ವಾರಗಳ ಗಡುವು ನೀಡಿ ನೋಟಿಸ್​ಗೆ ಉತ್ತರ ನೀಡುವಂತೆ ತಿಳಿಸಿದೆ. ದ್ರಾವಿಡ್​ಗೂ ಮುಂಚೆ ಸಚಿನ್​ ತೆಂಡೂಲ್ಕರ್​, ವಿವಿಎಸ್​ ಲಕ್ಷ್ಮಣ್​ ಹಾಗೂ ಗಂಗೂಲಿಯ ಮೇಲೂ ಹಿತಾಶಕ್ತಿ ಸಂಘರ್ಷದ ಆರೋಪ ಕೇಳಿಬಂದಿತ್ತು. ಇದೀಗ ದ್ರಾವಿಡ್​ಗೂ ನೋಟಿಸ್​ ಕಳುಹಿಸಿರುವುದದರಿಂದ ಭಾರತದ ಮಾಜಿ ಕ್ರಿಕೆಟರ್​ಗಳಾದ ಗಂಗೂಲಿ ಹಾಗೂ ಹರ್ಭಜನ್​ ಬಿಸಿಸಿಐ ನಡೆದಗೆ ಕಿಡಿಕಾರಿದ್ದಾರೆ.

ಭಾರತೀ ಕ್ರಿಕೆಟ್​ನಲ್ಲಿ ಹಿರಿಯ ಕ್ರಿಕೆಟರ್​ಗಳ ಮೇಲೆ ಆರೋಪ ಮಾಡುವ ಹೊಸ ಫ್ಯಾಷನ್​ ಶುರುವಾಗಿದೆ. ತಾವೂ ಸುದ್ದಿಯಾಗಲೂ ಇದೊಂದು ಮಾರ್ಗವಾಗಿ ಬೆಳೆಯುತ್ತಿದೆ. ಭಾರತೀಯ ಕ್ರಿಕೆಟ್​ಅನ್ನು ಆ ದೇವರೆ ಕಾಪಾಡಬೇಕು. ದ್ರಾವಿಡ್​ರಂತಹವರಿಗೆ ಬಿಸಿಸಿಐ ಸ್ವ ಹಿತಾಸಕ್ತಿ ಸಂಘರ್ಷದ ನಿಯಮಧನ್ವಯ ನೋಟಿಸ್​ ನೀಡಲಾಗಿದೆ ಎಂದು ಗಂಗೂಲಿ ಕಿಡಿಕಾರಿದ್ದಾರೆ.

  • Really ?? Don’t know where it’s heading to.. u can’t get better person thn him for indian cricket. Sending notice to these legends is like insulting them.. cricket need their services for betterment.. yes god save indian cricket 🙏 https://t.co/lioRClBl4l

    — Harbhajan Turbanator (@harbhajan_singh) August 6, 2019 " class="align-text-top noRightClick twitterSection" data=" ">

ಇನ್ನು ಹರ್ಭಜನ್​ ಸಹಾ ಈ ಕುರಿತು ಟ್ವೀಟ್​ ಮಾಡಿದ್ದು, ನಿಜವಾಗಿಯೂ, ಇದು ಎಲ್ಲಗೆ ತಲುಪುತ್ತದೆ ಗೊತ್ತಿಲ್ಲ. ದ್ರಾವಿಡ್​ರಂತಹ ವ್ಯಕ್ತಿಯನ್ನು ಭಾರತೀಯ ಕ್ರಿಕೆಟ್​ಗೆ ಸಿಗುವುದಿಲ್ಲ. ಅಂತಹ ಲೆಜೆಂಡ್​ಗೆ ನೋಟಿಸ್​ ಮೂಲಕ ಅವಮಾನ ಮಾಡಲಾಗುತ್ತಿದೆ. ಕ್ರಿಕೆಟ್​ಗೆ ಅವರ ಸೇವೆ ಅಗತ್ಯವಾಗಿದೆ. ಹೌದು ಭಾರತೀಯ ಕ್ರಿಕೆಟ್​ಅನ್ನು ಆ ದೇವರೇ ಕಾಪಾಡಬೇಕು ಎಂದು ಗಂಗೂಲಿ ಅಭಿಪ್ರಾಯವನ್ನು ಒಪ್ಪಿ ಟ್ವೀಟ್​ ಮಾಡಿದ್ದಾರೆ.

ಕ್ರಿಕೆಟ್​ ಜಗತ್ತಿನಲ್ಲಿ ದ್ರಾವಿಡ್​ಗೆ ಜಂಟಲ್​ ಮ್ಯಾನ್​ ಎಂದೇ ಹೆಸರಿದೆ, ಈ ರೀತಿ ನೋಟೀಸ್​ ಮೂಲಕ ಅವರನ್ನು ಅವಮಾನಿಸುತ್ತಿರುವುದು ಭಾರತೀಯ ಕ್ರಿಕೆಟ್​ಗೆ ನಿಜಕ್ಕೂ ಅವಮಾನ ಮಾಡಿದಂತೆಯೇ ಸರಿ.

Intro:Body:Conclusion:
Last Updated : Aug 7, 2019, 5:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.