ನವದೆಹಲಿ: ಮೊದಲ ಟೆಸ್ಟ್ನ 5ನೇ ದಿನ ಭಾರತ ಬ್ಯಾಟಿಂಗ್ ಕ್ರಮಾಂಕವನ್ನು ಪುಡಿಗಟ್ಟಿದ 227ರನ್ಗಳ ಭರ್ಜರಿ ಜಯಕ್ಕೆ ಕಾರಣರಾದ ಇಂಗ್ಲೆಂಡ್ ತಂಡದ ಅನುಭವಿ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರನ್ನು GOAT ಎಂದು ಭಾರತದ ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಕರೆದಿದ್ದಾರೆ.
ಆ್ಯಂಡರ್ಸನ್ ಕೇವಲ 17ರನ್ ನೀಡಿ ಶುಬ್ಮನ್ ಗಿಲ್, ರಹಾನೆ ಮತ್ತು ರಿಷಭ್ ಪಂತ್ ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಾಯಿಸಿದರು. ಅದಕ್ಕೆ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದು, " ನೀವು ಪ್ರಶಂಸೆಗೆ ಅರ್ಹರು ಆ್ಯಂಡರ್ಸನ್, ನೀವೊಬ್ಬ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ" (ಟೇಕ್ ಎ ಬೋ ಆ್ಯಂಡರ್ಸನ್, ಗೋಟ್. ಪಿರಿಯಡ್) ಎಂದು ಇಂಗ್ಲೆಂಡ್ ಬೌಲರ್ಅನ್ನು ಎಂದು ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
Take a bow @jimmy9 GOAT. Period!! #INDvENG @StarSportsIndia pic.twitter.com/KOxqfY23n8
— VVS Laxman (@VVSLaxman281) February 9, 2021 " class="align-text-top noRightClick twitterSection" data="
">Take a bow @jimmy9 GOAT. Period!! #INDvENG @StarSportsIndia pic.twitter.com/KOxqfY23n8
— VVS Laxman (@VVSLaxman281) February 9, 2021Take a bow @jimmy9 GOAT. Period!! #INDvENG @StarSportsIndia pic.twitter.com/KOxqfY23n8
— VVS Laxman (@VVSLaxman281) February 9, 2021
420 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 192 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜ್ಯಾಕ್ ಲೀಚ್ 4, ಜೇಮ್ಸ್ ಆ್ಯಂಡರ್ಸನ್ 3 ಡಾಮ್ ಬೆಸ್, ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ತಾನೂ ಕೂಡ ಫೈನಲ್ಗೆ ಪ್ರತಿಸ್ಪರ್ಧಿ ಎಂದು ತೋರಿಸಿಕೊಟ್ಟಿದೆ.