ETV Bharat / sports

ಭವಿಷ್ಯದತ್ತ ದೃಷ್ಟಿ ಹರಿಸಿ, ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ: ಧೋನಿಗೆ ಸಲಹೆ ನೀಡಿದ ಗಂಭೀರ್​! - ಗೌತಮ್​ ಗಂಭೀರ್​

ಎಂಎಸ್​ ಧೋನಿ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಂಡು, ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಗೌತಮ್​ ಗಂಭೀರ್​ ಹೇಳಿದ್ದಾರೆ.

ಎಂಎಸ್​ ಧೋನಿ
author img

By

Published : Jul 19, 2019, 3:01 PM IST

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ನಿವೃತ್ತಿ ಕುರಿತು ಈಗಾಗಲೇ ಅನೇಕ ವಾದ - ಪ್ರತಿವಾದಗಳು ಕೇಳಿ ಬರುತ್ತಿದ್ದು, ಇದರ ಮಧ್ಯೆ ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗಂಭೀರ್​ ಸಲಹೆ ಒಂದನ್ನು ನೀಡಿದ್ದಾರೆ.

2023ರ ವಿಶ್ವಕಪ್​ ದೃಷ್ಟಿಯಿಂದ ತಂಡದಲ್ಲಿ ಉದಯೋನ್ಮುಖ ಆಟಗಾರರನ್ನ ಕರೆದುಕೊಂಡು ಬರುವ ಅವಶ್ಯಕತೆ ಇದೆ. ಹೀಗಾಗಿ ನಿಮ್ಮ ಭವಿಷ್ಯದ ಬಗ್ಗೆ ದೃಷ್ಟಿ ಹರಿಸಿ ಮಹತ್ವದ ನಿರ್ಧಾರ ಕೈಗೊಳ್ಳಿ ಎಂದು ಹೇಳಿದ್ದಾರೆ. ಇದರ ಜತೆಗೆ ಟೀಂ ಇಂಡಿಯಾದಲ್ಲಿ ಯುವ ಆಟಗಾರರಾದ ರಿಷಭ್​ ಪಂತ್​, ಸಂಜು ಸ್ಯಾಮ್ಸನ್​ ಹಾಗೂ ಇಶಾನ್​ ಕಿಶನ್​ರಂತಹ ವಿಕೆಟ್​ ಕೀಪರ್​ಗಳಿಗೆ ಅವಕಾಶ ನೀಡುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

Gambhir
ಗೌತಮ್​ ಗಂಭೀರ್​​

ಈ ಹಿಂದೆ ನನಗೆ ಧೋನಿ ಹೇಳಿರುವ ಮಾತು ಈಗಲೂ ನನೆಪಿದೆ. ಆಸ್ಟ್ರೇಲಿಯಾ ವಿರುದ್ಧದ ಸಿಬಿ ಸಿರೀಸ್‌ನಲ್ಲಿ ಮೈದಾನ ದೊಡ್ಡದಾಗಿರುವ ಕಾರಣ ಸಚಿನ್ ಹಾಗೂ ಸೆಹ್ವಾಗ್ ಒಂದೇ ಪಂದ್ಯದಲ್ಲಿ ಆಡುವಂತಿಲ್ಲ ಎಂದು ಹೇಳಿದ್ದರು. ಜತೆಗೆ 2011ರ ವಿಶ್ವಕಪ್‌ಗಾಗಿ ಯುವ ಆಟಗಾರರನ್ನು ಬಯಸಿದ್ದರು. ಭಾವನಾತ್ಮಕ ಆಗಿರುವುದಕ್ಕಿಂತಲೂ ಮಿಗಿಲಾಗಿ ಪ್ರಾಯೋಗಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅವಶ್ಯಕ ಎಂದು ಗಂಭೀರ್​ ಹೇಳಿದ್ದಾರೆ.

ಇನ್ನು ವೆಸ್ಟ್​ ಇಂಡೀಸ್​ ವಿರುದ್ಧ ಏಕದಿನ,ಟಿ-20 ಹಾಗೂ ಟೆಸ್ಟ್​ ಸರಣಿಗಾಗಿ ಭಾನುವಾರ ಟೀಂ ಇಂಡಿಯಾ ಪ್ರಕಟಗೊಳ್ಳಲಿದ್ದು, ಧೋನಿ ಭವಿಷ್ಯ ಸಹ ನಿರ್ಧಾರವಾಗಲಿದೆ ಎಂಬ ಮಾತು ಕೇಳಿ ಬರುತ್ತಿವೆ.

Intro:Body:

ಭವಿಷ್ಯದತ್ತ ದೃಷ್ಠಿ ಹರಿಸಿ, ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ: ಧೋನಿಗೆ ಸಲಹೆ ನೀಡಿದ ಗಂಭೀರ್​! 

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ನಿವೃತ್ತಿ ಕುರಿತು ಈಗಾಗಲೇ ಅನೇಕ ವಾದ-ಪ್ರತಿವಾದಗಳು ಕೇಳಿ ಬರುತ್ತಿದ್ದು, ಇದರ ಮಧ್ಯೆ ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗಂಭೀರ್​ ಸಲಹೆವೊಂದನ್ನ ನೀಡಿದ್ದಾರೆ. 

2023ರ ವಿಶ್ವಕಪ್​ ದೃಷ್ಠಿಯಿಂದ ತಂಡದಲ್ಲಿ ಉದಯೋನ್ಮುಖ ಆಟಗಾರರನ್ನ ಕರೆದುಕೊಂಡು ಬರುವ ಅವಶ್ಯಕತೆ ಇದೆ. ಹೀಗಾಗಿ ನಿಮ್ಮ ಭವಿಷ್ಯದ ಬಗ್ಗೆ ದೃಷ್ಠಿ ಹರಿಸಿ ಮಹತ್ವದ ನಿರ್ಧಾರ ಕೈಗೊಳ್ಳಿ ಎಂದು ಹೇಳಿದ್ದಾರೆ. ಇದರ ಜತೆಗೆ ಟೀಂ ಇಂಡಿಯಾದಲ್ಲಿ ಯುವ ಆಟಗಾರರಾದ ರಿಷಭ್​ ಪಂತ್​,ಸಂಜು ಸ್ಯಾಮ್ಸನ್​ ಹಾಗೂ ಇಶಾನ್​ ಕಿಶಾನ್​ರಂತಹ ವಿಕೆಟ್​ ಕೀಪರ್​ಗಳಿಗೆ ಅವಕಾಶ ನೀಡುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. 

 ನನಗೆ ಈಗಲೂ ಧೋನಿ ಹೇಳಿರುವ ಮಾತು ನನೆಪಿದೆ. ಸಿಬಿ ಸಿರೀಸ್‌ನಲ್ಲಿ ಮೈದಾನ ಬೃಹತ್ತಾಗಿದ್ದರಿಂದ ಸಚಿನ್ ಹಾಗೂ ಸೆಹ್ವಾಗ್ ಒಂದೇ ಪಂದ್ಯದಲ್ಲಿ ಆಡುವಂತಿಲ್ಲ. ಅವರು ವಿಶ್ವಕಪ್‌ಗಾಗಿ ಯುವ ಆಟಗಾರರನ್ನು ಬಯಸಿದ್ದರು. ಭಾವನಾತ್ಮಕವಾಗಿರುವುದಕ್ಕಿಂತಲೂ ಮಿಗಿಲಾಗಿ ಪ್ರಾಯೋಗಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅವಶ್ಯಕ ಎಂದು ಗಂಭೀರ್​ ಹೇಳಿದ್ದಾರೆ. 

ಇನ್ನು ವೆಸ್ಟ್​ ಇಂಡೀಸ್​ ವಿರುದ್ಧ ಏಕದಿನ,ಟಿ-20 ಹಾಗೂ ಟೆಸ್ಟ್​ ಸರಣಿಗಾಗಿ ಭಾನುವಾರ ಟೀಂ ಇಂಡಿಯಾ ಪ್ರಕಟಗೊಳ್ಳಲಿದ್ದು, ಧೋನಿ ಭವಿಷ್ಯ ಸಹ ನಿರ್ಧಾರವಾಗಲಿದೆ ಎಂಬ ಮಾತು ಕೇಳಿ ಬರುತ್ತಿವೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.