ETV Bharat / sports

ಆಸೀಸ್‌ ಬ್ಯಾಟಿಂಗ್ ದುರ್ಬಲತೆ ಅಸ್ತ್ರವಾಗಿಸಿ ಸರಣಿ ಜಯಿಸಿ.. ಭಾರತ ತಂಡಕ್ಕೆ ಗಂಭೀರ್ ಸಲಹೆ

author img

By

Published : Jan 6, 2021, 8:26 PM IST

ಶಮಿ, ಇಶಾಂತ್​ ಮತ್ತು ಉಮೇಶ್ ಯಾದವ್​ ಏನಾದ್ರೂ ಫಿಟ್​ ಇದ್ದಿದ್ದರೆ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಹಾಗಾಗಿ, ನಮಗೆ ಸರಣಿ ಗೆಲ್ಲಲು ಅದ್ಭುತ ಅವಕಾಶವಿದೆ..

ಗೌತಮ್  ಗಂಭೀರ್​
ಗೌತಮ್ ಗಂಭೀರ್​

ನವದೆಹಲಿ : ಭಾರತದ ಬೌಲಿಂದ ದಾಳಿ ಎದುರಿಸಲಾಗಿದೆ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳು ತುಂಬಾ ಕಷ್ಟಪಡುತ್ತಿರುವುದು ಟೆಸ್ಟ್​ ಸರಣಿಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ ಪ್ರವಾಸಿಗರು ಆಸ್ಟ್ರೇಲಿಯಾದ ಈ ದುರ್ಬಲತೆಯ ಲಾಭ ಪಡೆದು ಸರಣಿ ವಶಪಡಿಸಿಕೊಳ್ಳಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

ಭಾರತದ ವಿರುದ್ಧದ ಮೊದಲೆರಡು ಟೆಸ್ಟ್​ಗಳಲ್ಲಿ 200ರ ಗಡಿದಾಟಲು ವಿಫಲರಾಗಿರುವ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳು ಇಂಗ್ಲೆಂಡ್​, ನ್ಯೂಜಿಲ್ಯಾಂಡ್​ ಮತ್ತು ಭಾರತದ ಬ್ಯಾಟ್ಸ್​ಮ್​ಗಳಿಗಿಂತ ದುರ್ಬಲರು ಎಂದು ಗೌತಿ ಅಭಿಪ್ರಾಯಪಟ್ಟಿದ್ದಾರೆ.

"ನಾವು ಆಸ್ಟ್ರೇಲಿಯಾ ವಿರುದ್ಧ ಈ ಅವಕಾಶವನ್ನು ಪಡೆದುಕೊಳ್ಳಬಹುದು. ನೀವು ವಿಶ್ವದ ಟಾಪ್​ ತಂಡಗಳ ಮೊದಲ 4 ಕ್ರಮಾಂಕದ ಬ್ಯಾಟ್ಸ್​ಮನ್​ಗಳನ್ನು ಗಮನಿಸಿದರೆ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳಿಗಿಂತ ಇಂಗ್ಲೆಂಡ್​, ನ್ಯೂಜಿಲ್ಯಾಂಡ್​ ಬ್ಯಾಟ್ಸ್​ಮನ್‌ಗಳು ಉತ್ತಮರು.

ಅದರಲ್ಲೂ ಭಾರತದ ಬ್ಯಾಟಿಂಗ್ ಲೈನ್​ಅಪ್​ ತುಂಬಾ ಅತ್ಯುತ್ತಮವಾಗಿದೆ" ಎಂದು ಗಂಭೀರ್ ಸುದ್ದಿ ಏಜೆನ್ಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ನನ್ನ ಜೀವನದಲ್ಲಿ ಈ ರೀತಿಯ ಆಸ್ಟ್ರೇಲಿಯಾ ಬ್ಯಾಟಿಂಗ್ ಲೈನ್​ಅಪ್‌ ನೋಡಿಲ್ಲ. ಇದು ತುಂಬಾ ದುರ್ಬಲವಾಗಿದೆ. ಅವರಿಂದ ಭಾರತದ ಪ್ರಮುಖ ಬೌಲಿಂಗ್​ ದಾಳಿಯ ವಿರುದ್ಧ ಆಡಲು ಸಾಧ್ಯವಾಗುತ್ತಿಲ್ಲ.

ಶಮಿ, ಇಶಾಂತ್​ ಮತ್ತು ಉಮೇಶ್ ಯಾದವ್​ ಏನಾದ್ರೂ ಫಿಟ್​ ಇದ್ದಿದ್ದರೆ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಹಾಗಾಗಿ, ನಮಗೆ ಸರಣಿ ಗೆಲ್ಲಲು ಅದ್ಭುತ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ಕ್ಲೈರ್​ ಪೊಲೊಸಕ್​​: ಇವರೇ ಪುರುಷರ ಟೆಸ್ಟ್ ​ಪಂದ್ಯಕ್ಕೆ ಮೊದಲ ಮಹಿಳಾ ಅಂಪೈರ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.