ETV Bharat / sports

ವಿಕೆಟ್​ ಪಡೆಯದ ಹತಾಷೆ.. 30 ಅಡಿ ಗುರುತಿನ ಮಾರ್ಕರ್​ಗಳನ್ನು ಒದ್ದ ಬುಮ್ರಾ : ಫೋಟೋ ವೈರಲ್​ - ಮಾರ್ಕರ್​ಗಳಿಗೆ ಕಾಲಿನಿಂದ ಒದ್ದ ಬುಮ್ರಾ

ಬುಮ್ರಾ ಟಿ20 ಕ್ರಿಕೆಟ್​ನಲ್ಲಿ ಪರಿಣಾಮಕಾರಿ ಎನಿಸಿಕೊಂಡರೂ ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ತಮ್ಮ ಇಂದಿನ ಫಾರ್ಮ್​ಗೆ ಮರಳಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ನ್ಯೂಜಿಲ್ಯಾಂಡ್​ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ 167 ರನ್​ ಬಿಟ್ಟುಕೊಟ್ಟಿದ್ದ ಬುಮ್ರಾ ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ. ಇದೀಗ ಅದೇ ವೈಫಲ್ಯ ಮುಂದುವರಿಯುತ್ತಿರುವುದರಿಂದ ಭಾರತ ತಂಡದ ಸೋಲಿಗೆ ಕಾರಣವಾಗುತ್ತಿದೆ..

30 ಅಡಿ ಗುರುತಿನ ಮಾರ್ಕರ್​ಗಳನ್ನು ಒದ್ದ ಬುಮ್ರಾ

author img

By

Published : Dec 1, 2020, 5:57 PM IST

ಸಿಡ್ನಿ : ಏಕದಿನ ಕ್ರಿಕೆಟ್​ನಲ್ಲಿ ತಮ್ಮ ವೈಫಲ್ಯವನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಮುಂದುವರಿಸಿರುವ ಭಾರತ ತಂಡದ ವೇಗಿ ಬುಮ್ರಾ 2ನೇ ಏಕದಿನ ಪಂದ್ಯದ ವೇಳೆ 30 ಅಡಿ ವೃತ್ತದ ಗುರುತಿಗಾಗಿ ಇಟ್ಟಿರುವ ಮಾರ್ಕರ್​ಗಳನ್ನು ಒದೆಯುವ ಮೂಲಕ ತಮ್ಮ ಹತಾಷೆ ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗುತ್ತಿವೆ.

ಬುಮ್ರಾ ಕಳೆದ ಎರಡು ಪಂದ್ಯಗಳಲ್ಲಿ 73 ಹಾಗೂ 79 ರನ್​ ಬಿಟ್ಟುಕೊಟ್ಟಿದ್ದು ಎರಡೂ ಪಂದ್ಯದಲ್ಲೂ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಈ ಹತಾಷೆಯಲ್ಲಿ ಫೀಲ್ಡಿಂಗ್ ಮಾಡುವ ವೇಳೆ 30 ಅಡಿ ವೃತ್ತದ ಗುರುತಿಗಾಗಿ ಇಟ್ಟಿದ್ದ ಮಾರ್ಕರ್​ಗಳನ್ನು ಒದ್ದಿದ್ದಾರೆ. ಈ ಫೋಟೋವನ್ನು ಕ್ರೀಡಾ ಪರ್ತಕರ್ತ ಭರತ್ ಸುಂದರೇಸನ್​ ಟ್ವೀಟ್ ಮಾಡಿದ್ದಾರೆ.

ಬುಮ್ರಾ ಮೊದಲ ಸ್ಪೆಲ್​ನಲ್ಲಿ ಆಸೀಸ್​ ಬ್ಯಾಟ್ಸ್​ಮನ್​ಗಳು ಜಾಗೃತರಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರಿಗೆ ರನ್​ಗಳಿಸುವ ಆಲೋಚನೆಯನ್ನು ಬಿಟ್ಟಿರುವುದರಿಂದ ವಿಕೆಟ್​ ಕೂಡ ಒಪ್ಪಿಸದೆ ಆಡುತ್ತಿದ್ದಾರೆ. ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಬುಮ್ರಾ 4 ಓವರ್​ ಮಾಡಿ 23 ರನ್​, 2ನೇ ಪಂದ್ಯದಲ್ಲಿ 9 ರನ್​ ಬಿಟ್ಟುಕೊಟ್ಟಿದ್ದರು. ಆದರೆ, ನಂತರದ ಸ್ಪೆಲ್​ಗಳಲ್ಲಿ ಬ್ಯಾಟ್ಸ್​ಮನ್​ಗಳು ಸೆಟ್​ ಆದ ನಂತರ ಬುಮ್ರಾರಿಗೂ ಸುಲಭವಾಗಿ ರನ್​ಗಳಿಸುವ ದಾರಿ ಕಂಡು ಕೊಳ್ಳುತ್ತಿದ್ದಾರೆ.

ಬುಮ್ರಾ ಟಿ20 ಕ್ರಿಕೆಟ್​ನಲ್ಲಿ ಪರಿಣಾಮಕಾರಿ ಎನಿಸಿಕೊಂಡರೂ ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ತಮ್ಮ ಇಂದಿನ ಫಾರ್ಮ್​ಗೆ ಮರಳಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ನ್ಯೂಜಿಲ್ಯಾಂಡ್​ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ 167ರನ್​ ಬಿಟ್ಟುಕೊಟ್ಟಿದ್ದ ಬುಮ್ರಾ ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ, ಇದೀಗ ಅದೇ ವೈಫಲ್ಯ ಮುಂದುವರಿಯುತ್ತಿರುವುದರಿಂದ ಭಾರತ ತಂಡದ ಸೋಲಿಗೆ ಕಾರಣವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.