ಸಿಡ್ನಿ: ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್, ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ತಮ್ಮ ಲಯ ಕಂಡುಕೊಂಡಿದ್ದು, ಇತರ ಸಮಯಗಳಿಗಿಂತ ಭಿನ್ನವಾಗಿ ಹೆಚ್ಚಿನ ಒತ್ತಡವಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಡೇವಿಡ್ ವಾರ್ನರ್ ಅವರೊಂದಿಗೆ 156 ರನ್ಗಳ ಭರ್ಜರಿ ಜೊತೆಯಾಟವಾಡಿದ ನಾಯಕ ಆ್ಯರೋನ್ ಫಿಂಚ್ ಅವರನ್ನು ಅಭಿನಂದಿಸಿದ ಸ್ಮಿತ್, "ನಾನು ಮತ್ತೆ ಉತ್ತಮ ಲಯ ಕಂಡುಕೊಂಡಿದ್ದೇನೆ" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಂಡಕ್ಕೆ ಉತ್ತಮ ಆರಂಭ ದೊರಕಿತ್ತು, ಹೀಗಾಗಿ ಯಾವುದೇ ಒತ್ತಡ ಇರಲಿಲ್ಲ. ಕೇವಲ ಚೆಂಡನ್ನು ನೋಡಿ, ದಂಡಿಸುವುದಷ್ಟೆ ನನ್ನ ಉದ್ದೇಶವಾಗಿತ್ತು. ಹೀಗಾಗಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ನಡೆಸಬೇಕಾಯ್ತು ಎಂದಿದ್ದಾರೆ.
ಮತ್ತೊಬ್ಬ ಪಾಕ್ ಕ್ರಿಕೆಟರ್ಗೆ ಕೊರೊನಾ.. ನಿಯಮ ಮೀರಿದ್ರೆ ತವರಿಗೆ ಕಳಿಸಬೇಕಾಗುತ್ತೆ ಎಂದು ನ್ಯೂಜಿಲ್ಯಾಂಡ್ ಎಚ್ಚರಿಕೆ
"ನಾನು ಯಾವ ಬೌಲರ್ಗಳಿಗೆ ದಂಡಿಸಬಹುದೆಂದು ಆರಿಸಿದ್ದೆ, ಅದಕ್ಕೆ ತಕ್ಕಂತೆ ನನ್ನ ಸಾಮರ್ಥ್ಯದ ಪ್ರದೇಶಗಳಿಗೆ ಕೆಲವು ಉತ್ತ ಹೊಡೆತಗಳನ್ನು ಹೊಡೆದಿದ್ದೇನೆ" ಎಂದು ಸ್ಮಿತ್ ತಮ್ಮ ಕಾರ್ಯತಂತ್ರ ವಿವರಿಸಿದ್ದಾರೆ. ಟೀಂ ಇಂಡಿಯಾ ವಿರುದ್ಧ ಉತ್ತಮವಾಗಿ ಬ್ಯಾಟ್ ಬೀಸಿದ ಸ್ಮಿತ್ ಕೇವಲ 66 ಎಸೆತಗಳಲ್ಲಿ 105 ರನ್ ಸಿಡಿಸಿ ಮಿಂಚಿದ್ರು.