ಮುಂಬೈ : ವಿಶ್ವ ಕಂಡ ಶ್ರೇಷ್ಟ ಬ್ಯಾಟ್ಸ್ಮನ್, ತನ್ನಾಟದಿಂದಲೇ ಕ್ರಿಕೆಟ್ ದೇವರು ಎಂದು ಕರೆಸಿಕೊಂಡ ಭಾರತ ತಂಡದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ 2003ರ ವಿಶ್ವ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ಆಟವನ್ನು ನೆನೆಸಿಕೊಂಡಿರುವ ಪಾಕ್ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ನನ್ನ ಪ್ರಕಾರ 'ಸಚಿನ್ರ ವೃತ್ತಿ ಜೀವನದ ಅತ್ಯುತ್ತಮ ಇನ್ನಿಂಗ್ಸ್ ' ಅದೇ ಎಂದು ಅಭಿಪ್ರಾಯ ಪಟ್ಟಿದ್ದಾರೆ.
2003ರ ವಿಶ್ವಕಪ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ 50 ಓವರ್ಗಳಲ್ಲಿ 270 ರನ್ಗಳಿಸಿತ್ತು. ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ಗೆಲ್ಲಲು ಇಷ್ಟು ರನ್ ಸಾಕು ಎಂದುಕೊಂಡಿದ್ದ ಪಾಕಿಸ್ತಾನ ತಂಡದ ಕನಸನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ನುಚ್ಚುನೂರು ಮಾಡಿದ್ದರು.
ಕೇವಲ 75 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 98 ರನ್ಗಳಿಸಿದ್ದ ವೇಳೆ ಅಖ್ತರ್ಗೆ ವಿಕೆಟ್ ಒಪ್ಪಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಅವರು ಭಾರತೀಯ ಬ್ಯಾಟ್ಸ್ಮನ್ಗಳಿಗೆ ಪಾಕಿಸ್ತಾನ್ ಬೌಲರ್ಗಳನ್ನು ಚೆಂಡಾಡುವ ಮಾರ್ಗವನ್ನು ತೋರಿಸಿದ್ದರು. ಕೊನೆಗೆ ಭಾರತ ತಂಡ ಕೇವಲ 45.4 ಓವರ್ಗಳಲ್ಲೆ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು.
-
The most famous six of a World Cup? #OnThisDay in 2003, chasing 273 v Pakistan, @sachin_rt smashed 98 off 75 balls with 12 fours, 1 six (off Shoaib Akhtar) at Centurion.
— Cricketopia (@CricketopiaCom) February 29, 2020 " class="align-text-top noRightClick twitterSection" data="
Is this the best World Cup innings by Tendulkar? Quote this tweet & let us know.pic.twitter.com/ks0Y5MKrfK
">The most famous six of a World Cup? #OnThisDay in 2003, chasing 273 v Pakistan, @sachin_rt smashed 98 off 75 balls with 12 fours, 1 six (off Shoaib Akhtar) at Centurion.
— Cricketopia (@CricketopiaCom) February 29, 2020
Is this the best World Cup innings by Tendulkar? Quote this tweet & let us know.pic.twitter.com/ks0Y5MKrfKThe most famous six of a World Cup? #OnThisDay in 2003, chasing 273 v Pakistan, @sachin_rt smashed 98 off 75 balls with 12 fours, 1 six (off Shoaib Akhtar) at Centurion.
— Cricketopia (@CricketopiaCom) February 29, 2020
Is this the best World Cup innings by Tendulkar? Quote this tweet & let us know.pic.twitter.com/ks0Y5MKrfK
'ಸಚಿನ್ ಆಟವನ್ನು ನಾನೆಷ್ಟೋ ನೋಡಿದ್ದೇನೆ. ಆದರೆ, ಆ ಪಂದ್ಯದಲ್ಲಿ ಅವರು ಆಡಿದ ರೀತಿಯನ್ನು ನಾನು ಎಂದೂ ನೋಡಿರಲಿಲ್ಲ. ಬೌಲಿಂಗ್ಗೆ ಅನುಕೂಲಕರ ವಾತಾವರಣದಲ್ಲಿ ನಮ್ಮ ಬೌಲರ್ಗಳನ್ನು ಆತ ಎದುರಿಸಿದ ರೀತಿ ಅಮೋಘ. ಆ ಮ್ಯಾಚ್ನಲ್ಲಿ 98 ರನ್ಗಳಿಸಿದ್ದ ಅವರನ್ನು ಅಖ್ತರ್ ಔಟ್ ಮಾಡಿದ. ಆದ್ರೆ, ಸಚಿನ್ರ ಆ ಇನ್ನಿಂಗ್ಸ್ ಅತ್ಯುತ್ತಮವಾದದ್ದು ಆಗಿದೆ'
'ಭಾರತೀಯ ಬ್ಯಾಟ್ಸ್ಮನ್ಗಳ ಮೇಲಿನ ಒತ್ತಡವನ್ನು ಕಿತ್ತೆಸೆದಿದ್ದರು. ಭಯಂಕರವಾದ ನಮ್ಮ ವೇಗದ ಬೌಲಿಂಗ್ ದಾಳಿಯನ್ನು ಎದುರಿಸಿ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಇವರ ಬ್ಯಾಟಿಂಗ್ ನೋಡಿದ ಇತರೆ ಬ್ಯಾಟ್ಸ್ಮನ್ಗಳು ಸುಲಭವಾಗಿ ರನ್ ಗಳಿಸಿದರು.
ದಕ್ಷಿಣ ಆಫ್ರಿಕಾದಂತಹ ಬೌಂಲಿಂಗ್ ಸ್ನೇಹಿ ಪಿಷ್ನಲ್ಲಿ ಅಕ್ರಮ್, ವಾಖರ್ ಯೂನೀಸ್, ಶೋಯಬ್ ಅಖ್ತರ್ರಂತಹ ಬೌಲರ್ಗಳಿದ್ದಿದ್ದರಿಂದ ನಮ್ಮ ಸ್ಕೋರ್ ಉತ್ತಮವಾಗಿದೆ ಎಂದುಕೊಂಡಿದ್ದೆವು. ಆದ್ರೆ, ಸಚಿನ್ ಅದ್ಭುತವಾಗಿ ಆಡಿದರು' ಎಂದು ಸಚಿನ್ ವೀರಾವೇಶದ ಬ್ಯಾಟಿಂಗ್ ಬಗ್ಗೆ ಇಂಜಿ ಭಾರತೀಯ ಸ್ಪಿನ್ನರ್ ಅಶ್ವಿನ್ ಜೊತೆ ನಡೆಸಿದ ವಿಡಿಯೋ ಸಂಭಾಷಣೆ ವೇಳೆ ತಿಳಿಸಿದ್ದಾರೆ.