ಮುಂಬೈ: ಭಾರತದ ಕ್ರಿಕೆಟ್ಗೆ ಮಹತ್ವದ ಕೊಡುಗೆ ನೀಡಿದ್ದ ಮಾಜಿ ಆಲ್ರೌಂಡರ್ ಕ್ರಿಕೆಟರ್ ಬಾಪು ನಾಡಕರ್ಣಿ ತಮ್ಮ 86ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರ ಸಾವಿಗೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ.
ಲೆಫ್ಟ್ ಆರ್ಮ್ ಸ್ಪಿನ್ನರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದ ಆಟಗಾರ ಟೀಂ ಇಂಡಿಯಾದಲ್ಲಿ 1955-68ರ ನಡುವೆ 41 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ ಪಂದ್ಯಗಳಲ್ಲಿ ಅವರು 1,414 ರನ್ ಹಾಗೂ 88 ವಿಕೆಟ್ ಗಳಿಕೆ ಸಾಧನೆ ಮಾಡಿದ್ದಾರೆ. 1964ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ 1.67ರ ಸರಾಸರಿಯಲ್ಲಿ ರನ್ ಮಾಡಿದ್ದ ನಾಡಕರ್ಣಿ ಬರೋಬ್ಬರಿ 21 ಮೆಡನ್ ಓವರ್ ಎಸೆದಿದ್ದರು.
-
Sachin Tendulkar tweets, "Very sad to hear about the demise of Shri Bapu Nadkarni. I grew up hearing about the record of him bowling 21 consecutive maiden overs in a Test. My condolences to his family and dear ones. Rest in Peace Sir". pic.twitter.com/IVlfeFBUBr
— ANI (@ANI) January 17, 2020 " class="align-text-top noRightClick twitterSection" data="
">Sachin Tendulkar tweets, "Very sad to hear about the demise of Shri Bapu Nadkarni. I grew up hearing about the record of him bowling 21 consecutive maiden overs in a Test. My condolences to his family and dear ones. Rest in Peace Sir". pic.twitter.com/IVlfeFBUBr
— ANI (@ANI) January 17, 2020Sachin Tendulkar tweets, "Very sad to hear about the demise of Shri Bapu Nadkarni. I grew up hearing about the record of him bowling 21 consecutive maiden overs in a Test. My condolences to his family and dear ones. Rest in Peace Sir". pic.twitter.com/IVlfeFBUBr
— ANI (@ANI) January 17, 2020
ಪ್ರಥಮ ದರ್ಜೆ ಕ್ರಿಕೆಟ್ನಲ್ಲೂ ತಮ್ಮದೇ ರೀತಿಯ ಛಾಪು ಮೂಡಿಸಿದ್ದ ಇವರು 191 ಪಂದ್ಯಗಳಿಂದ 500 ವಿಕೆಟ್ ಪಡೆದು ಮಿಂಚಿದ್ದರು. ಇದರ ಜತೆಗೆ ಮಹಾರಾಷ್ಟ್ರ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿಯೂ ಗುರುತಿಸಿಕೊಂಡಿದ್ದರು.
ಸಚಿನ್ ಸಂತಾಪ:
ಬಾಪು ನಾಡಕರ್ಣಿ ನಿಧನಕ್ಕೆ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಅವರ ಸಾವಿನ ಸುದ್ದಿ ಕೇಳಿ ತುಂಬಾ ದುಃಖವಾಗಿದ್ದು, ಟೆಸ್ಟ್ ಪಂದ್ಯವೊಂದರಲ್ಲಿ ಸತತ 21 ಮೆಡನ್ ಓವರ್ ಮಾಡಿದ ದಾಖಲೆ ಅವರದ್ದಾಗಿದ್ದು, ಸಾವಿನ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ, ರೆಸ್ಟ್ ಇನ್ ಪೀಸ್ ಸರ್ ಎಂದು ಸಂತಾಪ ಸೂಚಿಸಿದ್ದಾರೆ.