ETV Bharat / sports

ಗಾಜಿನ ಮನೆಯಲ್ಲಿದ್ದೀರಾ, ಬೇರೆಯವರ ಮನೆ ಮೇಲೆ ಕಲ್ಲೆಸೆಯಬೇಡಿ... ಪಾಕ್​ ಕ್ರಿಕೆಟಿಗರಿಗೆ ಧವನ್ ವಾರ್ನಿಂಗ್​​​ - ಪಾಕಿಸ್ತಾನ ಕ್ರಿಕೆಟ್​

ಪಾಕಿಸ್ತಾನ ಕ್ರಿಕೆಟಿಗರು ಕಾಶ್ಮೀರ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಪೋಸ್ಟ್​ಗಳ ವಿರುದ್ಧವಾಗಿ ನಿಲ್ಲುವ ಗಂಭೀರ್​ ಅನುಸರಿಸಿ ಧವನ್​ ಕೆಲವು ದಿನಗಳ ಹಿಂದೆ ಆಫ್ರಿದಿ ಟ್ವೀಟ್​ಗೆ ಪ್ರತಿಕ್ರಿಯಿಸಿ ಸುದ್ದಿಯಾಗಿದ್ದರು. ಈ ಕುರಿತು ಕೇಳಿದ ಪ್ರಶ್ನೆಗೆ ಧವನ್​ ಪ್ರತಿಕ್ರಿಯಿಸಿದ್ದು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Dhawan
author img

By

Published : Sep 29, 2019, 7:26 PM IST

ನವದೆಹಲಿ: ನಾನೊಬ್ಬ ಭಾರತೀಯನಾಗಿ ಪಾಕಿಸ್ತಾನ ಕ್ರಿಕೆಟಿಗರು ನಮ್ಮ ದೇಶದ ವಿರುದ್ಧ ಇಲ್ಲದ ವಿಷಯಗಳ ಕುರಿತು ಮಾತನಾಡುವಾಗ ಪ್ರತಿಕ್ರಿಯೆ ನೀಡದೆ ಇರಲಾರೆನು ಎಂದು ಶಿಖರ್​ ಧವನ್​ ಕೆಚ್ಚೆದೆಯ ಮಾತುಗಳನ್ನಾಡಿದ್ದಾರೆ.

'ಗಬ್ಬರ್'​ ಎಂದೇ ಖ್ಯಾತಿ ಪಡೆದಿರುವ ಶಿಖರ್​ ಧವನ್​ ಅವರು ಭಾರತ ತಂಡದ ಸೀಮಿತ ಓವರ್​ನ ಖಾಯಂ ಸದಸ್ಯರಾಗಿದ್ದಾರೆ. ಸದ್ಯದ ಮಟ್ಟಿಗೆ ನೋಡುವುದಾದರೆ ಮುಂದಿನ 2020ರ ಟಿ20 ವಿಶ್ವಕಪ್​ ತಂಡದಲ್ಲೂ ಅವಕಾಶ ಸಿಗುವುದು ಖಚಿತವಾಗಿದೆ. ಇದೀಗ ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅವಕಾಶ ವಂಚಿತವಾಗಿರುವ ಧವನ್​ ಆಫ್​ ಕಿ ಅದಾಲತ್​ ಕಾರ್ಯಕ್ರಮದಲ್ಲಿ ಭಾಗವಹಿಸಿ ಧೋನಿ ನಿವೃತ್ತಿ, ಪಾಕಿಸ್ತಾನ ಕ್ರಿಕೆಟರ್​ಗಳ ಟ್ವೀಟ್​ ಕುರಿತು ಹಾಗೂ ಪ್ರಸ್ತುತ ಭಾರತ ತಂಡದ ನಾಯಕ ಕೊಹ್ಲಿ ಕುರಿತ ಹಲವಾರು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ನಿರೂಪಕ ರಜತ್​ ಶರ್ಮಾ ಪಾಕಿಸ್ತಾನ ಕ್ರಿಕೆಟಿಗರು ಕಾಶ್ಮೀರ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಪೋಸ್ಟ್​ಗಳ ವಿರುದ್ಧವಾಗಿ ನಿಲ್ಲುವ ಗಂಭೀರ್​ ಅನುಸರಿಸಿ ಧವನ್​ ಕೆಲವು ದಿನಗಳ ಹಿಂದೆ ಆಫ್ರಿದಿ ಟ್ವೀಟ್​ಗೆ ಪ್ರತಿಕ್ರಿಯಿಸಿ ಸುದ್ದಿಯಾಗಿದ್ದರು. ಈ ಕುರಿತು ಕೇಳಿದ ಪ್ರಶ್ನೆಗೆ ಧವನ್​ ಪ್ರತಿಕ್ರಿಯೆ ನೀಡುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

"ಪಾಕಿಸ್ತಾನದ ಕ್ರಿಕೆಟಿಗರು ಮೊದಲು ಅವರ ದೇಶವನ್ನು ನೋಡಿಕೊಳ್ಳಬೇಕು. ನಂತರ ಬೇರೆ ದೇಶದ ರಾಜಕೀಯ ವಿಚಾರಗಳನ್ನು ಕುರಿತು ಮಾತನಾಡಲಿ ಎಂದಿದ್ದಾರೆ. ಮೂರ್ಖ ವಿಚಾರಗಳನ್ನು ಪಾಕಿಸ್ತಾನ ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದರೆ, ನಾನೊಬ್ಬ ಭಾರತೀಯನಾಗಿ ಸುಮ್ಮನಿರಲು ಸಾಧ್ಯವಿಲ್ಲ. ದೇಶದ ಪರ ನಿಲ್ಲುವುದು ನನ್ನ ಕರ್ತವ್ಯ" ಎಂದು ಸ್ಪಷ್ಟಪಡಿಸಿದ್ದಾರೆ.

"ಯಾರಾದರೂ ನಮ್ಮ ದೇಶದ ಬಗ್ಗೆ ಮಾತನಾಡಿದರೆ ಖಂಡಿತ ನಾವು ದೇಶದ ಪರ ನಿಲ್ಲುತ್ತೇವೆ. ನಮಗೆ ಹೊರದೇಶದವರ ಸಲಹೆ ಬೇಕಿಲ್ಲ. ಮೊದಲು ಅವರ ದೇಶವನ್ನು ನೋಡಿಕೊಳ್ಳಲಿ, ನಂತರ ಬೇರೆದೇಶದ ಬಗ್ಗೆ ಮಾತನಾಡಬೇಕು. "ನೀವೇ ಗಾಜಿನ ಮನೆಯಲ್ಲಿದ್ದು, ಬೇರೆಯವರ ಮನೆ ಮೇಲೆ ಕಲ್ಲೆಸೆಯಲು ಹೋಗಬೇಡಿ" ಎಂದು ಪಾಕಿಸ್ತಾನ ಕ್ರಿಕೆಟಿಗರಿಗೆ ಎಚ್ಚರಿಕೆಯನ್ನೂ ಧವನ್​ ರವಾನಿಸಿದ್ದಾರೆ.

ಕಳೆದ ವರ್ಷ ಆಫ್ರಿದಿ, ಭಾರತ ಅಕ್ರಮಿತ ಕಾಶ್ಮೀರದಲ್ಲಿ ಯುದ್ಧದ ವಾತಾವರಣವಿದೆ. ಸ್ವಾತಂತ್ರ್ಯ ಬಯಸುವವರ ಅಮಾಯಕರನ್ನು ಗುಂಡು ಹಾರಿಸಿ ಕೊಲ್ಲಲಾಗುತ್ತಿದೆ ಹೀಗಿರುವಾಗ ಅಮೆರಿಕ ಮತ್ತು ಬೇರೆ ದೇಶಗಳು ಏಕೆ ಈ ರಕ್ತಪಾತವನ್ನು ನಿಲ್ಲಿಸುತ್ತಿಲ್ಲ ಎಂದು ಟ್ವೀಟ್​ ಮಾಡಿದ್ದರು.

ಈ ಟ್ವೀಟ್​ನಿಂದ ಆಕ್ರೋಶಗೊಂಡಿದ್ದ ಭಾರತೀಯ ಕ್ರಿಕೆಟಿಗರಾದ ಗೌತಮ್​ ಗಂಭೀರ್​, ಧವನ್​, ಸುರೇಶ್​ ರೈನಾ, ಇಶಾಂತ್​ ಶರ್ಮಾ ಸೇರಿದಂತೆ ಹಲವಾರು ಕ್ರಿಕೆಟಿಗರು ಆಫ್ರಿದಿ ಟ್ವೀಟ್​​ಗೆ ಆಕ್ರೋಶಭರಿತವಾಗಿ ಉತ್ತರಿಸಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.