ETV Bharat / sports

ಫಿಂಚ್​, ಮೊರೀಸ್​ ಆಗಮನ: ಪಡಿಕ್ಕಲ್​ ಬ್ಯಾಟಿಂಗ್​ ಬಲ: ಈ ಸಲವಾದ್ರು ಕಪ್​ ಗೆಲ್ಲುತ್ತಾ ಆರ್​ಸಿಬಿ

author img

By

Published : Sep 16, 2020, 10:55 PM IST

ರಾಯಲ್​ ಚಾಲೆಂಜರ್ಸ್​ ಬೆಂಗಳೂರು 2009, 2011 ಹಾಗೂ 2011ರಲ್ಲಿ ಫೈನಲ್​ ತಲುಪಿದರೂ ರೋಚಕ ಹಣಾಹಣಿಯಲ್ಲಿ ಸೋಲುಕಾಣುವ ಮೂಲಕ ನಿರಾಶೆಯನುಭವಿಸಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು
ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ಹೈದರಾಬಾದ್​: ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಮನರಂಜಿಸುವ ತಂಡವಾಗಿರುವ ರಾಯಲ್​ ಚಾಲಂಜರ್ಸ್​ ಟ್ರೋಪಿ ವಿಚಾರದಲ್ಲಿ ದಕ್ಷಿಣ ಆಫ್ರಿಕಾಗಿಂತ ಹೆಚ್ಚು ಚೋಕರ್ಸ್​ ಆಗಿದ್ದಾರೆ. ಒಂದಲ್ಲ, ಎರಡಲ್ಲ ಮೂರು ಬಾರಿ ಫೈನಲ್​ ಪ್ರವೇಶಿಸಿದರೂ ಪ್ರಶಸ್ತಿಗೆ ಮುತ್ತಿಡುವ ಸೌಭಾಗ್ಯ ಮಾತ್ರ ಇನ್ನೂ ಬೆಂಗಳೂರಿಗೆ ಸಿಕ್ಕಿಲ್ಲ. ಆದರೆ ಈ ಬಾರಿ ಉತ್ತಮ ತಂಡ ಸಂಯೋಜನೆಯಿಂದ ಯುದ್ದಕ್ಕೆ ಸಿದ್ದರಾಗಿರುವ ಕೊಹ್ಲಿ ಪಡೆ ಚೊಚ್ಚಲ ಪ್ರಶಸ್ತಿಯನ್ನು ಎದುರು ನೋಡುತ್ತಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಎರಡನೇ ಆವೃತ್ತಿಯಲ್ಲೇ ಫೈನಲ್​ ಪ್ರವೇಶಿಸಿತ್ತು. 144 ರನ್​ಗಳ ಟಾರ್ಗೆಟ್​ ಪಡೆದಿದ್ದ ಆರ್​ಸಿಬಿ ಕಪ್​ ಎತ್ತಿ ಹಿಡಿಯುತ್ತದೆ ಎಂದು ಭಾವಿಸಲಾಗಿತ್ತು. ಡೆಕ್ಕನ್​ ಚಾರ್ಜಸ್​ ಎದುರು 6 ನರ್​ಗಳ ಸೋಲಿನೊಂದಿಗೆ ನಿರಾಶೆಯನುಭವಿಸಿತ್ತು. ನಂತರ 2011 ರಲ್ಲಿ ಸಿಎಸ್​ಕೆ ವಿರುದ್ಧ ಸೋಲುಕಂಡರೆ, 2016ರಲ್ಲಿ ಕೊಹ್ಲಿಬ್ಯಾಟಿಂಗ್ ವೈಭವದ ನಡುವೆಯೂ ಫೈನಲ್​ ಪಂದ್ಯದಲ್ಲಿ 8 ರನ್​ಗಳ ಸೋಲುಕಾಣುವ ಮೂಲಕ ಆಘಾತ ಅನುಭವಿಸಿತ್ತು. ನಂತರ ಮೂರು ಆವೃತ್ತಿಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನದಿಂದ ಪ್ಲೇ ಆಫ್​ಗೂ ಪ್ರವೇಶಿಸಲು ಎಣಗಾಡುತ್ತಿರುವುದು ವಿಪರ್ಯಾಸ.

ಅ್ಯರೋನ್ ಫಿಂಚ್​
ಅ್ಯರೋನ್ ಫಿಂಚ್​

ಬಲಿಷ್ಠ ತಂಡದ ಸಂಯೋಜನೆ ಮತ್ತು ಕೋಚ್​ ಬಳಗ

ಕಳೆದ ಮೂರು ಆವೃತ್ತಿಗಳಲ್ಲಿ ಆರ್​ಸಿಬಿಗೆ ಕಾಡಿದ್ದು ಆರಂಭಿಕರ ಕೊರತೆ ಮತ್ತು ಡೆತ್​ ಬೌಲರ್​ಗಳು. ಇದೀಗ ಆ ಸಮಸ್ಯೆ ಫಿಂಚ್​ ಆಗಮನದೊಂದಿಗೆ ದೂರವಾಗಿದೆ. ಜೊತೆಗೆ ಕರ್ನಾಟಕದ ಯಂಗ್​ ಟೈಗರ್​ ದೇವದತ್​ ಪಡಿಕ್ಕಲ್​ ಕೆಪಿಎಲ್​, ಸಯ್ಯದ್​ ಮುಷ್ತಾಕ್​ ಅಲಿ ಹಾಗೂ ವಿಜಯ್​ ಹಜಾರೆ ಟ್ರೋಫಿಯಲ್ಲಿ ಅಧಿಕ ರನ್​ ಸರದಾರನಾಗಿ ಮಿಂಚಿದ್ದು, ಐಪಿಎಲ್​ನಲ್ಲಿ ತಮ್ಮ ಭುಜಬಲದ ಪರಾಕ್ರಮ ತೋರಲು ಕಾಯುತ್ತಿದ್ದಾರೆ. ಜೊತೆಗೆ ಈ ಬಾರಿ ಆ್ಯಡಂ ಜಂಪಾ, ಜೋಶ್​ ಫಿಲಿಪ್ಪೆ ಕೂಡ ಆರ್​ಸಿಬಿ ಬಳಗ ಸೇರಿಕೊಂಡಿರುವುದರಿಂದ ತಂಡ 2016ರ ತಂಡಕ್ಕೆ ಹೋಲಿಕೆ ಮಾಡಲಾಗುತ್ತಿದೆ.

ದೇವದತ್​ ಪಡಿಕ್ಕಲ್​
ದೇವದತ್​ ಪಡಿಕ್ಕಲ್​

ಆರ್​ಸಿಬಿ ನ್ಯೂಜಿಲ್ಯಾಂಡ್​ನ ಮಾಸ್ಟರ್​ ಮೈಂಡ್​ ಮೈಕಲ್ ಹೆಸನ್​ ತಂಡದ ಡೈರೆಕ್ಟರ್​ ಆಗಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸೈಮನ್​ ಕ್ಯಾಟಿಚ್​ ಮುಖ್ಯ ಕೋಚ್​ ಆಗಿದ್ದು, ಈಗಾಗಲೆ ತಂಡಕ್ಕೆ ಹಲವು ಯೋಜನೆಗಳನ್ನು ಸಿದ್ದಪಡಿಸಿಕೊಂಡಿದ್ದಾರೆ. ಹಲವಾರು ಸಂದರ್ಶನಗಳಲ್ಲಿ ಈಗಾಗಲೆ ಕೊಹ್ಲಿ, ವಿಲಿಯರ್ಸ್​ ಈ ಬಗ್ಗೆ ಹೇಳಿಕೊಂಡಿದ್ದಾರೆ.

ವಿಶ್ವ ದರ್ಜೆಯ ಬ್ಯಾಟ್ಸ್​ಮನ್​ಗಳ ಬಲ

ವಿರಾಟ್​ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್​
ವಿರಾಟ್​ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್​

ಮೇಲೆ ಹೇಳಿದಂತೆ ಫಿಂಚ್ ಆಗಮನದೊಂದಿಗೆ ಆರಂಭಿಕ ಸ್ಥಾನಕ್ಕೆ ಆನೆಬಲ ಬಂದಿದೆ. ಅವರೊಂದಿಗೆ ಯುವ ಆಟಗಾರ ದೇವದತ್​ ಪಡಿಕ್ಕಲ್​ ಅಥವಾ ಪಾರ್ಥೀವ್​ ಪಟೇಲ್​ ಜೊತೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. 3 ಮತ್ತು 4ನೇ ಕ್ರಮಾಂಕದಲ್ಲಿ ವಿರಾಟ್​ -ಎಬಿಡಿ ಯಾವುದೇ ಒತ್ತಡವಿಲ್ಲದೆ ಲೀಲಾ ಜಾಲವಾಗಿ ಬ್ಯಾಟ್​ ಬೀಸಲು ಅವಕಾಶ ದೊರೆತಿದೆ. ಮಧ್ಯಮ ಕ್ರಮಾಂದಲ್ಲಿ ಶಿವಂ ದುಬೆ, ಗುರುಕೀರತ್ ಸಿಂಗ್​​, ಮೊಯಿನ್ ಅಲಿ, ಪವನ್​ ನೇಗಿ ಹಾಗೂ ಕ್ರಿಸ್​ ಮೊರೀಸ್​ ಅವರಂತಹ ಆಲ್​ರೌಂಡರ್​ಗಳ ಬಲವಿದೆ.​

ಚಹಾಲ್​-ಡೇಲ್​ ಸ್ಟೈನ್​ ಬೌಲಿಂಗ್​ ಬಲ

ಇನ್ನು ಬೌಲಿಂಗ್​ ವಿಚಾರಕ್ಕೆ ಬಂದರೆ ಕಳೆದ ಆವೃತ್ತಿಗಿಂತ ವೇಗದ ಬೌಲಿಂಗ್​ನಲ್ಲಿ ಕೊಂಚ ಬಲ ಬಂದಂತಿದೆ. ಏಕೆಂದರೆ ಡೇಲ್​ ಸ್ಟೈನ್​ ಹಾಗೂ ಮೊರೀಸ್​ ತಂಡ ಸೇರಿಕೊಂಡಿದ್ದಾರೆ. ಇವರು ನವದೀಪ್​ ಸೈನಿ ಹಾಗೂ ಉಮೇಶ್​ ಯಾದವ್​ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದ್ದಾರೆ. ಇದರ ಜೊತೆಗೆ ಸಿರಾಜ್​ ಕೂಡ ಹೆಚ್ಚುವರಿ ಆಯ್ಕೆಯಾಗಲಿದ್ದಾರೆ.

ಯಜುವೇಂದ್ರ ಚಹಾಲ್​
ಯಜುವೇಂದ್ರ ಚಹಾಲ್​

ಸ್ಪಿನ್​ ಬೌಲಿಂಗ್​ನಲ್ಲಿ ಈ ಬಾರಿ ಐಪಿಎಲ್​ನಲ್ಲೇ ಆರ್​ಸಿಬಿ ಹೆಚ್ಚಿನ ಶಕ್ತಿಶಾಲಿಯಾಗಲಿದೆ. ವಿಶ್ವದ ಶ್ರೇಷ್ಠ ಸ್ಪಿನ್ನರ್​ಗಳಾದ ಯಜುವೇಂದ್ರ ಚಹಾಲ್​ ಜೊತೆಗೆ ಆಸ್ಟ್ರೇಲಿಯಾದ ರಿಸ್ಟ್​ ಸ್ಪಿನ್ನರ್​ ಅ್ಯಡಂ ಜಂಪಾ ತಂಡದ ಭಾಗವಾಗಲಿದ್ದಾರೆ. ಜೊತೆಗೆ ಟಿ20 ಸ್ಪೆಷಲಿಸ್ಟ್​ ವಾಷಿಂಗ್ಟನ್​ ಸುಂದರ್​ ಹಾಗೂ ಆಲ್​ರೌಂಡರ್​ಗಳಾದ ಮೊಯಿನ್ ಅಲಿ ಮತ್ತು ಪವನ್​ ನೇಗಿ ಕೂಡ ತಂಡದಲ್ಲಿರುವ ಪ್ರಮುಖ ಸ್ಪಿನ್ನರ್​ಗಳಾಗಿದ್ದಾರೆ. ಯುಎಇ ಅಂತಹ ಸ್ಲೋ ಟ್ರ್ಯಾಕ್​ ಪಿಚ್​ಗಳಲ್ಲಿ ಸ್ಪಿನ್​ ಬೌಲರ್​ಗಳೇ ಮೇಲುಗೈ ಸಾಧಿಸುವುದರಿಂದ ಈಗಾಗಲೆ ಆರ್​ಸಿಬಿ ಕಪ್​ ಗೆಲ್ಲಬಹುದಾದ ನೆಚ್ಚಿನ ತಂಡ ಎಂದು ಕ್ರಿಕೆಟ್​ ದಿಗ್ಗಜರು ಭವಿಷ್ಯ ನುಡಿದಿದ್ದಾರೆ.

ತಂಡದ ದೌರ್ಬಲ್ಯ

ಆರ್​ಸಿಬಿಗೆ ಸೇರ್ಪಡೆಗೊಂಡಿದರುವ ಡೇಲ್​ ಸ್ಟೈನ್​ ಕಳೆದ ಒಂದು ವರ್ಷದಲ್ಲಿ ಹೆಚ್ಚು ಕ್ರಿಕೆಟ್​ ಆಡಿಲ್ಲ. ಇವರು ಒಂದು ವೇಳೆ ಯುಎಇನಲ್ಲಿ ವಿಫಲವಾದರೆ ತಂಡದ ಬೌಲಿಂಗ್​ ವಿಭಾಗಕ್ಕೆ ದೊಡ್ಡ ಹೊಡೆತ ಬೀಳಲಿದೆ. ತಂಡದಲ್ಲಿ ಸ್ಟೈನ್​ ಬಿಟ್ಟರೆ ಸೈನಿ ಮಾತ್ರ ಉತ್ತಮ ಲೈನ್​ ಅಂಡ್​ ಲೆಂತ್​ನಲ್ಲಿ ಬೌಲಿಂಗ್ ಮಾಡಬಲ್ಲ ಬೌಲರ್​ ಆಗಿದ್ದಾರೆ. ಉಮೇಶ್​ ಯಾದವ್​ ಮತ್ತು ಸಿರಾಜ್​ ರನ್​ಗಳನ್ನು ನಿಯಂತ್ರಣ ಮಾಡುವುದರಲ್ಲಿ ಕಳೆದ ಆವೃತ್ತಿಗಳಲ್ಲಿ ವಿಫಲವಾಗಿರುವುದು ಆರ್​ಸಿಬಿಗೆ ದೊಡ್ಡ ಚಿಂತೆಯಾಗಿದೆ.

ಡೇಲ್​ ಸ್ಟೈನ್​
ಡೇಲ್​ ಸ್ಟೈನ್​

ಇದರ ಜೊತೆಗೆ ಗೇಮ್​ ಫಿನಿಶರ್​ಗಳ ಕೊರತೆ ಕೂಡ ಕಾಡಲಿದೆ. ಕೊಹ್ಲಿ-ವಿಲಿಯರ್ಸ್​ ವಿಫಲವಾದರೆ ನಂತರ ಜವಾಬ್ದಾರಿ ತೆಗೆದುಕೊಳ್ಳುವ ಅನುಭವಿ ಬ್ಯಾಟ್ಸ್​ಮನ್​ ತಂಡದಲ್ಲಿಲ್ಲ. ಮೊದಲ 4 ಆಟಗಾರರೇ ತಂಡದ ಆಧಾರವಾಗಲಿದ್ದಾರೆ. ಮೊಯಿನ್​ ಅಲಿ ಫಾರ್ಮ್​ನಲ್ಲಿಲ್ಲದಿರುವುದು ಕೂಡ ತಂಡದ ತಲೆ ನೋವಾಗಿದೆ.

ತಂಡ: ವಿರಾಟ್‌ ಕೊಹ್ಲಿ (ನಾಯಕ), ಆ್ಯರೋನ್​ ಫಿಂಚ್‌, ದೇವದತ್ ಪಡಿಕ್ಕಲ್‌, ಪಾರ್ಥಿವ್‌ ಪಟೇಲ್‌, ಎಬಿ ಡಿ ವಿಲಿಯರ್, ಗುರುಕೀರತ್‌ ಸಿಂಗ್‌, ಶಿವಂ ದುಬೆ, ಕ್ರಿಸ್‌ ಮೊರೀಸ್‌, ವಾಷಿಂಗ್ಟನ್‌ ಸುಂದರ್‌, ಶಾಬಾಜ್‌ ಅಹ್ಮದ್‌, ನವದೀಪ್‌ ಸೈನಿ, ಡೇಲ್‌ ಸ್ಟೇನ್‌, ಯಜುವೇಂದ್ರ ಚಹಲ್‌, ಆ್ಯಡಂ ಜಂಪಾ, ಇಸುರು ಉದಾನ, ಮೊಯಿನ್‌ ಅಲಿ, ಜೋಶ್‌ ಫಿಲಿಪ್ಪೆ‌, ಪವನ್‌ ನೇಗಿ, ಪವನ್‌ ದೇಶಪಾಂಡೆ, ಮೊಹಮ್ಮದ್‌ ಸಿರಾಜ್‌, ಉಮೇಶ್‌ ಯಾದವ್‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.