ETV Bharat / sports

IPLನಲ್ಲಿ 20ರ ಯುವ ಸ್ಪಿನ್ನರ್​​ ಬಿಷ್ಣೋಯಿ ಮಿಂಚು: ಈಟಿವಿ ಭಾರತ ಜತೆ ಎಕ್ಸ್​ಕ್ಲೂಸಿವ್​​ ಸಂದರ್ಶನ! - ಈಟಿವಿ ಭಾರತ ಜತೆ ರವಿ ಬಿಷ್ಣೋಯಿ ಸಂದರ್ಶನ

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮಿಂಚು ಹರಿಸುತ್ತಿರುವ ಅಂಡರ್​​-19 ವಿಶ್ವಕಪ್​ ಹೀರೋ ರವಿ ಬಿಷ್ಣೋಯಿ ಇದೀಗ ಈಟಿವಿ ಭಾರತ್​ ಜತೆ ತಮ್ಮ ಮನದಾಳ ಬಿಚ್ಚಿ ಮಾತನಾಡಿದ್ದಾರೆ.

ravi bishnoi
ravi bishnoi
author img

By

Published : Oct 23, 2020, 6:59 PM IST

ಹೈದರಾಬಾದ್​: ಇಂಡಿಯನ್​ ಪ್ರೀಮಿಯರ್​ ಲೀಗ್​ನ 13ನೇ ಆವೃತ್ತಿಯಲ್ಲಿ ಕೆಲವೊಂದು ತೆರೆ ಮರೆಯ ಪ್ರತಿಭೆಗಳು ಮಿಂಚು ಹರಿಸುತ್ತಿದ್ದು, ಅದರಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದಲ್ಲಿರುವ 20ರ ಯುವ ಸ್ಪಿನ್ನರ್​ ರವಿ ಬಿಷ್ಣೋಯಿ ಕೂಡ ಒಬ್ಬರು. ತಾವು ಆಡುತ್ತಿರುವ ಮೊದಲ ಪಂದ್ಯದಿಂದಲೇ ಕಮಾಲ್​ ಮಾಡುತ್ತಿರುವ ಈ ಆಟಗಾರನೊಂದಿಗೆ ಈಟಿವಿ ಭಾರತ ಎಕ್ಸ್​ಕ್ಲೂಸಿವ್​ ಸಂದರ್ಶನ ನಡೆಸಿದೆ.

ಈಟಿವಿ ಭಾರತ ಜತೆ ರವಿ ಬಿಷ್ಣೋಯಿ ವಿಶೇಷ ಸಂದರ್ಶನ

ಕನ್ನಡಿಗನ ಸ್ಪೂರ್ತಿಯಿಂದಲೇ ಐಪಿಎಲ್​​ನಲ್ಲಿ ಅಬ್ಬರಿಸುತ್ತಿರುವ ರವಿ ಬಿಷ್ಣೋಯಿ ಚುಟುಕು ಕ್ರಿಕೆಟ್​​ನಲ್ಲಿ ವಿಕೆಟ್​ಗಳ ಬೇಟೆಯಾಡುತ್ತಿದ್ದು, ಬ್ಯಾಟ್ಸ್​ಮನ್​ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಅಂಡರ್​​-19 ವಿಶ್ವಕಪ್​ 2020ರಲ್ಲಿ ಮಿಂಚಿದ ಆಧಾರದ ಮೇಲೆ ಐಪಿಎಲ್​​ನಲ್ಲಿ ಸ್ಥಾನ ಪಡೆದ ರವಿ ಬಿಷ್ಣೋಯಿ, ಈಟಿವಿ ಇಂಡಿಯಾ ಜೊತೆ ವಿಶೇಷ ಸಂವಾದ ನಡೆಸಿದರು.

ಪ್ರಸ್ತಕ ಸಾಲಿನಲ್ಲಿ ಕಿಂಗ್ಸ್ ಇಲೆವೆನ್​ ಪಂಜಾಬ್​ ತಂಡದ ಸ್ಟಾರ್​ ಬೌಲರ್​ ಆಗಿ ಹೊರ ಹೊಮ್ಮಿರುವ ಬಿಷ್ಣೋಯಿ, ಡ್ರೆಸ್ಸಿಂಗ್​ ರೂಂನಲ್ಲಿ ಲೆಜೆಂಟ್​ ಆಟಗಾರರೊಂದಿಗೆ ಕಾಲ ಕಳೆಯುವುದು ಹಾಗೂ ಕೆ.ಎಲ್​ ರಾಹುಲ್​ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ.

Ravi Bishnoi
ಯುವ ಸ್ಪಿನ್ನರ್​​ ಬಿಷ್ಣೋಯಿ ಮಿಂಚು

ಡ್ರೆಸ್ಸಿಂಗ್​ ರೂಂನಲ್ಲಿ ಕ್ರಿಸ್​ ಗೇಲ್​, ರಾಹುಲ್​ ಭಾಯ್​ ಅವರಂತಹ ದಂತಕತೆಗಳೊಂದಿಗೆ ಇರುವುದು ತುಂಬಾ ಸಂತೋಷ ಎಂದಿರುವ ಅವರು ಕೋಚ್​ ಅನಿಲ್​ ಕುಂಬ್ಳೆ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅವರೊಂದಿಗೆ ಕಲಿಯುವುದು ತುಂಬಾ ಇದೆ ಎಂದಿದ್ದಾರೆ. ಲೀಗ್​ನಲ್ಲಿ ಆಡಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಖುಷಿ ಇದೆ. ತಂಡವನ್ನ ಗೆಲ್ಲಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಐಪಿಎಲ್​ನಲ್ಲಿ ರಿಷಭ್​ ಪಂತ್​ ವಿಕೆಟ್​ ಪಡೆದುಕೊಳ್ಳುವ ಮೂಲಕ ತಮ್ಮ ವೃತ್ತಿ ಜೀವನದ ಮೊದಲ ವಿಕೆಟ್​ ಪಡೆದುಕೊಂಡಿದ್ದು, ವಿಶೇಷ ಅನುಭವ ಎಂದಿದ್ದಾರೆ. ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್​ ಆಡುತ್ತಿರುವುದು ಸ್ವಲ್ಪ ಬೇಸರವಿದೆ. ಅಭಿಮಾನಿಗಳಿದ್ದರೆ ನಮ್ಮ ಉತ್ಸಾಹ ಮತ್ತಷ್ಟು ಹೆಚ್ಚಾಗುತ್ತಿತ್ತು. ಆದರೆ ಸಾಂಕ್ರಾಮಿಕ ರೋಗದ ಕಾರಣ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ravi bishnoi
ಐಪಿಎಲ್​ನಲ್ಲಿ ಬಿಷ್ಣೋಯಿ ಮಿಂಚು

ರಾಹುಲ್​ ಓರ್ವ ಅದ್ಭುತ ಕ್ಯಾಪ್ಟನ್​. ವಿಕೆಟ್​ ಕೀಪಿಂಗ್ ಮಾಡುವಾಗಲೂ ಎಲ್ಲವನ್ನೂ ನೋಡುತ್ತಲೇ ಇರುತ್ತಾರೆ. ವಿಕೆಟ್​ ಕೀಪರ್​ ಉತ್ತಮ ಕ್ಯಾಪ್ಟನ್​ ಆಗಬಹುದು. ಅವರು ತುಂಬಾ ಕೂಲ್ ಕ್ಯಾಪ್ಟನ್​ ಎಂದು ಹೇಳಿದ್ದಾರೆ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಬಗ್ಗೆ ಮಾತನಾಡಿದ ಅವರು, ಅದಕ್ಕಾಗಿ ಯಾವುದೇ ಸಮಯ ಫಿಕ್ಸ್​ ಇಲ್ಲ. ಅದರ ಕಡೆ ಗಮನ ಹರಿಸುತ್ತೇನೆ. ಅವಕಾಶ ಸಿಕ್ಕರೆ ಖಂಡಿತವಾಗಿ ಸಿದ್ಧನಾಗಿರುತ್ತೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.